ವಿದೇಶಿ ಮಹಿಳೆ ಜೊತೆ ಅನುಚಿತ ವರ್ತನೆ…ಮಧ್ಯರಾತ್ರಿ ಮನೆಗೆ ನುಗ್ಗಿದ ಖದೀಮ…ಕಪಿಮುಷ್ಠಿಯಿಂದ ಬಚಾವ್ ಆದ ಮಹಿಳೆ…ತಡವಾಗಿ ಬೆಳಕಿಗೆ ಬಂದ ಪ್ರಕರಣ…

ವಿದೇಶಿ ಮಹಿಳೆ ಜೊತೆ ಅನುಚಿತ ವರ್ತನೆ…ಮಧ್ಯರಾತ್ರಿ ಮನೆಗೆ ನುಗ್ಗಿದ ಖದೀಮ…ಕಪಿಮುಷ್ಠಿಯಿಂದ ಬಚಾವ್ ಆದ ಮಹಿಳೆ…ತಡವಾಗಿ ಬೆಳಕಿಗೆ ಬಂದ ಪ್ರಕರಣ…

  • Crime
  • August 13, 2025
  • No Comment
  • 295

ಮೈಸೂರು,ಆ13,Tv10 ಕನ್ನಡ

ಮಧ್ಯರಾತ್ರಿ ವೇಳೆ ಬಲವಂತವಾಗಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ವಿದೇಶಿ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದೆ.ವಿದೇಶಿ ಮಹಿಳೆಯ ಸಮಯಪ್ರಜ್ಞೆ ಆಕೆಯನ್ನ ಅನಾಹುತದಿಂದ ಪಾರು ಮಾಡಿದೆ.ಅಪರಿಚಿತನ ವಿರುದ್ದ ವಿದೇಶಿ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಯು.ಕೆ.ಪ್ರಜೆ 45 ವರ್ಷದ ಮಹಿಳೆಯಿಂದ ಪ್ರಕರಣ ದಾಖಲಾಗಿದೆ.ಜುಲೈ 18 ರಂದು ಯೋಗಾಭ್ಯಾಸಕ್ಕಾಗಿ ಪ್ರವಾಸಿ ವೀಸಾದಲ್ಲಿ ಬಂದ ಯು.ಕೆ.ಮಹಿಳೆ ಗೋಕುಲಂ ಬಡಾವಣೆಯಲ್ಲಿ ತಂಗಿದ್ದರು.27-7-2025 ರ ರಾತ್ರಿ ಸುಮಾರು 11.45 ರಲ್ಲಿ ಬಾಗಿಲು ತಟ್ಟಿದ ಶಬ್ದವಾಗಿದೆ.ಫುಡ್ ಡೆಲಿವರಿ ಬಾಯ್ ಇರಬಹುದೆಂದು ಮಹಿಳೆ ಬಾಗಿಲು ತೆರೆದಿದ್ದಾರೆ.ಫುಡ್ ಆರ್ಡರ್ ಮಾಡಿಲ್ಲವೆಂದು ಹೇಳುತ್ತಿದ್ದ ವೇಳೆ ಮಹಿಳೆಯನ್ನ ಬೆಡ್ ಮೇಲೆ ತಳ್ಳಿ ಬಾಗಿಲು ಚಿಲಕ ಹಾಕುವ ಪ್ರಯತ್ನ ಮಾಡಿದ್ದಾನೆ.ಈ ವೇಳೆ ಮಹಿಳೆ ಕಿರುಚಲು ಪ್ರಯತ್ನಿಸಿದಾಗ ಬಾಯಿಮುಚ್ಚಿದ್ದಾನೆ.ಆತನನ್ನ ತಳ್ಳಿ ಮಹಿಳೆ ಹೊರಬಂದು ಕಿರುಚಾಡಿದಾಗ ರಾಜೀವ್ ಎಂಬುವರು ಸಹಾಯಕ್ಕೆ ಬಂದಿದ್ದಾರೆ.ಅಪರಿಚಿತನನ್ನು ಮನೆಯೊಳಗೆ ತಳ್ಳಿ ಹೊರಗಿನಿಂದ ಬಾಗಿಲು ಭದ್ರಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಬರುವಷ್ಟರಲ್ಲಿ ಬಾಲ್ಕನಿಯಿಂದ ಕಿಡಿಗೇಡಿ ಪರಾರಿಯಾಗಿದ್ದಾನೆ
ನೊಂದ ವಿದೇಶಿ ಮಹಿಳೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *