
ವಿವಾಹಿತ ಟೆಕ್ಕಿಗೆ ಟಾರ್ಚರ್…ಗಂಡನನ್ನ ಬಿಟ್ಟುಬರುವಂತೆ ಹಿಂಸೆ…ಗರ್ಭಿಣಿಗೆ ಕಾಲಿನಿಂದ ಒದ್ದು ಗರ್ಭಪಾತ…ಕಿರಾತಕನ ವಿರುದ್ದ FIR…
- Crime
- August 28, 2025
- No Comment
- 138
ಮೈಸೂರು,ಆ28,Tv10 ಕನ್ನಡ
ವಿವಾಹಿತ ಮಹಿಳೆಗೆ ಗಂಡನನ್ನು ಬಿಟ್ಟು ಬರುವಂತೆ ಒತ್ತಾಯಿಸಿ ಮನೆಗೆ ನುಗ್ಗಿ ಹೊಟ್ಟೆಗೆ ಕಾಲಿನಿಂದ ಒದ್ದು ಗರ್ಭಪಾತವಾಗುವಂತೆ ಮಾಡಿ ತನ್ನ ಜೊತೆಗೆ ಬಾ ಎಂದು ಕಿರುಕುಳ ನೀಡುತ್ತಿರುವ ವ್ಯಕ್ತಿ ಮೇಲೆ ನೊಂದ ಮಹಿಳೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ನೂರ್ ಸಭಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ.ಸುಭಾಷ್ ನಗರದ ನಿವಾಸಿ ಮಹಮ್ಮದ್ ಮುನೀರ್ ಕಿರುಕುಳ ನೀಡುತ್ತಿರುವ ಕಿರಾತಕ.
ನೂರ್ ಸಭಾ ಗೆ ಮೊಹಮದ್ ಮುನೀರ್ ಎರಡು ವರ್ಷಗಳ ಹಿಂದೆ ಪರಿಚಯವಾಗಿತ್ತು.ಈ ವೇಳೆ ಮೊಹಮದ್ ಮುನೀರ್ ಕಿರೀಕ್ ತೆಗೆದು ನೂರ್ ಸಭಾ ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ.ಈ ಸಂಭಂಧ ಪ್ರಕರಣ ದಾಖಲಾಗಿತ್ತು.ನೂರ್ ಸಭಾ ರವರು ರುಮಾನ್ ಪಾಷಾ ಎಂಬುವರನ್ನ ಮದುವೆ ಆಗಿ 5 ತಿಂಗಳ ಗರ್ಭಿಣಿ ಆಗಿದ್ದರು.ಈ ಮಾಹಿತಿ ಅರಿತ ಮಹಮ್ಮದ್ ಮುನೀರ್ ನಿನ್ನ ಗಂಡನನ್ನು ಬಿಟ್ಟು ಬಾ ಎಂದು ಪೀಡಿಸಲು ಶುರು ಮಾಡಿದ.ರುಮಾನ್ ಪಾಷಾ ಮಗುವಿಗೆ ಹೇಗೆ ತಾಯಿ ಆಗ್ತೀಯ ಎಂದು ಧಂಕಿ ಹಾಕಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ.ಕಳೆದ ವಾರ ಮನೆಗೆ ಬಲವಂತವಾಗಿ ನುಗ್ಗಿ ಗರ್ಭಿಣಿ ನೂರ್ ಸಭಾ ಮೇಲೆ ಏಕಾ ಏಕಿ ದಾಳಿ ನಡೆಸಿದ್ದಾನೆ.ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತೆ ಮಾಡಿದ್ದಾನೆ.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಬಂದ ನಂತರ ಮತ್ತೆ ಅಟ್ಯಾಕ್ ಮಾಡಿದ್ದಾನೆ.ಡ್ರಾಗರ್ ಹಿಡಿದು ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ್ದಾನೆ.ರುಮಾನ್ ಪಾಷಾ ಮಗುವಿಗೆ ನೀನು ತಾಯಿ ಆಗಬಾರದು ಗಂಡನನ್ನ ಬಿಟ್ಟು ನನ್ನ ಜೊತೆಗೆ ಬರಬೇಕೆಂದು ಒತ್ತಾಯಸಿದ್ದಾನೆ.ಮನೆಯಲ್ಲಿದ್ದವರ ನೆರವಿನಿಂದ ನೂರ್ ಸಭಾ ಬಚಾವ್ ಆಗಿದ್ದಾರೆ.ಮಹಮ್ಮದ್ ಮುನೀರ್ ನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೂರ್ ಸಭಾ ರವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…