ಎಡಮುರಿಯಲ್ಲಿ ಮುಳುಗಿ ಇಬ್ಬರು ವಿಧ್ಯಾರ್ಥಿಗಳು ಸಾವು…
- Crime
- September 5, 2025
- No Comment
- 147

ಎಡಮುರಿಯಲ್ಲಿ ಮುಳುಗಿ ಇಬ್ಬರು ವಿಧ್ಯಾರ್ಥಿಗಳು ಸಾವು…
ಮಂಡ್ಯ,ಸೆ5,Tv10 ಕನ್ನಡ
ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿಯಲ್ಲಿ ನಡೆದಿದೆ.
ಕಾವೇರಿ ನದಿ ಪ್ರವಾಸಿ ತಾಣವಾಗಿರುವ ಎಡಮುರಿ ವಾಟರ್ ಫಾಲ್ಸ್ ನಲ್ಲಿ ಘಟನೆ ನಡೆದಿದೆ.
ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ
ಶ್ಯಾಮ್(20), ವೆಂಕಟೇಶ್ (20) ಮೃತ ವಿಧ್ಯಾರ್ಥಿಗಳು.
ಕಾಲೇಜಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಬಂದ ವೇಳೆ ದುರ್ಘಟನೆ ನಡೆದಿದೆ.
ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸು
ಎರಡೂ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…