ದನಗಳ ಕೊಟ್ಟಿಗೆಯಾದ ಪೊಲೀಸ್ ಕ್ವಾಟ್ರಸ್…ಠಾಣೆ ಆವರಣದಲ್ಲಿರುವ ವಸತಿ ಗೃಹಗಳ ನಿರ್ಲಕ್ಷ್ಯ…
- TV10 Kannada Exclusive
- September 6, 2025
- No Comment
- 46


ನಂಜನಗೂಡು,ಸೆ6,Tv10 ಕನ್ನಡ
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಅನುಕೂಲಕ್ಕಾಗಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳು ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿವೆ.ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಗೆ ಸೇರಿದ ವಸತಿಗೃಹಗಳ ದುಃಸ್ಥಿತಿ ಇದು.ಸುಮಾರು 10 ಕುಟುಂಬಗಳು ನೆಲಸಲು ವಸತಿಗೃಹಗಳನ್ನ ನಿರ್ಮಿಸಲಾಗಿದೆ.ಠಾಣೆಯ ಆವರಣದಲ್ಲೇ ಲಕ್ಷಾಂತರ ಹಣ ಖರ್ಚು ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.ಹಲವಾರು ವರ್ಷಗಳಿಂದ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಸಿಬ್ಬಂದಿಯಾಗಲಿ ಈ ವಸತಿಗೃಹದಲ್ಲಿ ನೆಲೆಸಿಲ್ಲ.ನಿರ್ಲಕ್ಷ್ಯಕ್ಕೆ ಒಳಗಾದ ವಸತಿಗೃಹಗಳನ್ನ ಸಮೀಪದ ನಿವಾಸಿಗಳು ದನಗಳ ಕೊಟ್ಟಿಗೆಯಂತೆ ಬಳಸಿಕೊಂಡಿದ್ದಾರೆ.ಪೋಲೀಸ್ ಠಾಣೆ ಆವರಣದಲ್ಲೇ ಇಂತಹ ಬೆಳವಣಿಗೆ ಆಗಿದ್ದರೂ ಠಾಣೆಯ ಅಧಿಕಾರಿಗಳಿಗಾಗಲಿ ಹಿರಿಯ ಅಧಿಕಾರಿಗಳಿಗಾಗಲಿ ಕಣ್ಣಿಗೆ ಬಿದ್ದಿಲ್ಲದಿರುವುದು ಅಚ್ಚರಿಯ ವಿಚಾರ.ಠಾಣೆ ಆವರಣಕ್ಕೆ ಎಂಟ್ರಿ ಕೊಡುವ ಯಾವೊಬ್ಬ ವ್ಯಕ್ತಿಯ ಸಂಪೂರ್ಣ ಮಾಹಿತಿ ಪಡೆಯುವ ಸಿಬ್ಬಂದಿಗಳಿಗೆ ಪಾಪ ದನಗಳ ಕೊಟ್ಟಿಗೆ ಮಾಡಿಕೊಂಡಿರುವ ನಿವಾಸಿಗಳ ಬಗ್ಗೆ ತಿಳಯದಿರುವುದು ಸೋಜಿಗದ ವಿಚಾರ.ಅವಶ್ಯಕತೆ ಇಲ್ಲದಿದ್ದರೂ ಲಕ್ಷಾಂತರ ವೆಚ್ಚದಲ್ಲಿ ವಸತಿಗೃಹಗಳನ್ನ ನಿರ್ಮಿಸುವ ಉದ್ದೇಶವಾದ್ರೂ ಏನು…?ವಸತಿಗೃಹಗಳು ವಾಸಿಸಲು ಯೋಗ್ಯವಾಗಿದ್ದರೂ ಬಳಸದೇ ಇರುವ ಕಾರಣವಾದ್ರೂ ಏನು…? ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ಸರ್ಕಾರಗಳಿಗೆ ಬುದ್ದಿ ಬರುವುದು ಯಾವಾಗ…?ಇನ್ನಾದ್ರೂ ಈ ವಸತಿಗೃಹಗಳನ್ನ ಸಮರ್ಪಕವಾಗಿ ಬಳಸುವ ಬಗ್ಗೆ ಹಿರಿಯ ಅಧಿಕಾರಿಗಳು ಚಿಂತಿಸುವರೇ…?