
ಜಂಬೂ ಸವಾರಿ ವೀಕ್ಷಿಸಲು ಹೈ ರಿಸ್ಕ್…ಟ್ರಾನ್ಸ್ಫಾರ್ಮರ್ ಇದ್ದರೂ ಲೆಕ್ಕಿಸದ ಜನ…
- TV10 Kannada Exclusive
- October 3, 2025
- No Comment
- 38

ಮೈಸೂರು,ಅ3,Tv10 ಕನ್ನಡ
ವಿಶ್ವವಿಖ್ಯಾತ ಜಂಬೂಸವಾರಿ ವೀಕ್ಷಿಸಲು ಕೆಲವು ಮಂದಿ ಹೈ ರಿಸ್ಕ್ ತೆಗೆದುಕೊಂಡಿದ್ದಾರೆ.ಜೀವ ಪಣವಿಟ್ಟ ಕೆಲವು ಮಂದಿ ಟ್ರಾನ್ಸ್ಫಾರ್ಮರ್ ಇದ್ದರೂ ಲೆಕ್ಕಿಸದೆ ಭದ್ರತೆಗಾಗಿ ನಿರ್ಮಿಸಿದ ಕಾಂಪೌಂಡ್ ಮೇಲೆ ಕುಳಿತು ಜಂಬೂ ಸವಾರಿ ವೀಕ್ಷಿಸಿದ್ದಾರೆ.ಕಟ್ಟಡಗಳ ಮೇಲೆ,ಮರಗಳ ಮೇಲೆ,ಹಾಗೂ ಕಂಬಗಳ ಮೇಲೆ ಕುಳಿತು ಮೆರವಣಿಗೆ ವೀಕ್ಷಿಸುವ ಕುರಿತಂತೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಆದೇಶಿಸಿದೆ.ಅಂತಹ ಸ್ಥಳಗಳಲ್ಲಿ ಕುಳಿತುಕೊಳ್ಳಬಾರದೆಂದು ಆದೇಶ ಹೊರಡಿಸಿದೆ.ಆದೇಶದಂತೆ ಕೆಲವು ಕಟ್ಟಡಗಳ ಮೇಲೆ ಜನ ಎಂದಿನಂತೆ ಕುಳಿತುಕೊಳ್ಳದೆ ಆದೇಶ ಪಾಲಿಸಿದ್ದಾರೆ.ಆದ್ರೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹೈ ಟೆನ್ಷನ್ ನ ಟ್ರಾನ್ಸ್ಫಾರ್ಮರ್ ಇದ್ದರೂ ಲೆಕ್ಕಿಸದ ಜನ ಸಮೀಪವಿರುವ ಕಾಂಪೌಂಡ್ ಏರಿ ಕುಳಿತು ಜಂಬೂ ಸವಾರಿ ವೀಕ್ಷಿಸಿದ್ದಾರೆ.ಪೊಲೀಸರೂ ಸಹ ಇವರನ್ನ ಪ್ರಶ್ನಿಸದೆ ಜಂಬೂ ಸವಾರಿ ವೀಕ್ಷಿಸಲು ಬಿಟ್ಟಿದ್ದಾರೆ.ಸಧ್ಯ ಈ ವೇಳೆ ಯಾವುದೇ ಅಪಾಯ ಸಂಭವಿಸಿಲ್ಲ…