
ಪರವಾನಿಗೆ ಇಲ್ಲದೆ ಶೇಖರಿಸಿದ್ದ 49.6 ರಸಗೂಬ್ಬರ ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು
- TV10 Kannada Exclusive
- October 3, 2025
- No Comment
- 88


ಪರವಾನಿಗೆ ಇಲ್ಲದೆ ಶೇಖರಿಸಿದ್ದ 49.6 ರಸಗೂಬ್ಬರ ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು
ಮಂಡ್ಯ.ಅ.3(TV10 ಕನ್ನಡ):- ಬೆಂಗಳೂರು ಜಾಗೃತ ಕೋಶದ ಅಪರ ನಿರ್ದೇಶಕರಾದ ದೇವರಾಜು, ಮೈಸೂರು ಉಪ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಉಪ ಕೃಷಿ ನಿರ್ದೇಶಕಿ ಮಮತ ಹೆಚ್.ಎನ್ ಮತ್ತು ಸಹಾಯಕ ಕೃಷಿ ನಿರ್ದೇಶಕರಾದ ಯಾದವ ಬಾಬು, ಮಂಡ್ಯ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸುನೀತ, ಜಿಲ್ಲಾ ರಸಗೊಬ್ಬರ ಪರಿವೀಕ್ಷಕರಾದ ಚನ್ನಕೇಶವಮೂರ್ತಿ ಹೆಚ್ (ಜಾರಿದಳ) ಅವರು ಸೆಪ್ಟೆಂಬರ್ 29 ರಂದು ಮಂಡ್ಯದಲ್ಲಿರುವ Twin godown sugar town ರಸಗೊಬ್ಬರ ಗೋದಾಮಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದಾಗ M/S GUJARATH STATE FERTILIZERS AND CHEMICLES LIMITED (GSFC) (Manufucture & Marketed), No. P.O Fertilize Nagar 3917, Vododara District, Gujarath ಸಂಸ್ಥೆಗೆ ಸೇರಿದ ಪರವಾನಿಗೆ ಇಲ್ಲದ ರಸಗೊಬ್ಬರ (ಬಯೋಸ್ಟಿಮೂಲೆಂಟ್) ನ್ನು ಹಾಗೂ G2/G3 ಸರ್ಟಿಫಿಕೇಟ್ ಇಲ್ಲದ ಜೈವಿಕ ಪ್ರಚೋದಕಗಳ (49.6 ಟನ್) ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ ಎಂದು ಮಂಡ್ಯ ಕೃಷಿ ಜಂಟಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಹಾಗೂ ರಸಗೊಬ್ಬರ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.