ಬೈಕ್ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ…ಓರ್ವ ಸಾವು…ಇಬ್ಬರಿಗೆ ಗಂಭೀರ ಗಾಯ…
- Crime
- November 2, 2025
- No Comment
- 45

ಬೈಕ್ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ…ಓರ್ವ ಸಾವು…ಇಬ್ಬರಿಗೆ ಗಂಭೀರ ಗಾಯ…

ನಂಜನಗೂಡು,ನ2,Tv10 ಕನ್ನಡ
ಟ್ರಿಪ್ಸ್ ನಲ್ಲಿ ಸಾಗುತ್ತಿದ್ದ ಬೈಕ್ ಗೆ ಕೆಎಸ್ ಆರ್ ಟಿಸಿ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಂಜನಗೂಡಿನಲ್ಲಿ ನಡೆದಿದೆ.ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಪುತ್ರ ಬೈಕ್ ನಲ್ಲಿ ತ್ರಿಬಲ್ ರೈಡ್ ಮೂಲಕ ಮೈಸೂರಿನಿಂದ ನಂಜನಗೂಡಿಗೆ ತೆರಳುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಅಜಾಗರೂಕತೆಯಿಂದ ಬಂದ ಕೆಎಸ್ ಆರ್ ಟಿಸಿ ಬಸ್ ಚಾಮುಂಡಿ ಟೌನ್ ಶಿಪ್ ಬಳಿ ಢಿಕ್ಕಿ ಹೊಡೆದಿದೆ.ಘಟನೆಯಲ್ಲಿ ಪತಿ ಶಿವಮೂರ್ತಿ,ಪತ್ನಿ ಚೆನ್ನಾಜಮ್ಮ ತೀವ್ರವಾಗಿ ಗಾಯಗೊಂಡಿದ್ದರೆ ಪುತ್ರ ಸಿದ್ದಾರ್ಥ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಗಾಯಗೊಂಡ ಶಿವಮೂರ್ತಿ ಹಾಗೂ ಚೆನ್ನಾಜಮ್ಮ ರವರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…