ವಿಸಿ ನಾಲೆಗೆ ಬಿದ್ದ ಕಾರು… ಚಾಲಕ ಪ್ರಾಣಾಪಾಯದಿಂದ ಪಾರು…
- Crime
- November 3, 2025
- No Comment
- 7
ವಿಸಿ ನಾಲೆಗೆ ಬಿದ್ದ ಕಾರು… ಚಾಲಕ ಪ್ರಾಣಾಪಾಯದಿಂದ ಪಾರು…
ಮಂಡ್ಯ,ನ3,Tv10 ಕನ್ನಡ
ಮಂಡ್ಯ ತಾಲೂಕಿನ ಬಿ.ಯರಹಳ್ಳಿ ಬಳಿಯ ವಿಸಿ ನಾಲೆಗೆ ಚಸಲಕನ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ.ಬೆಳಗಿನ ಜಾವ 4:30ರ ಸಮಯದಲ್ಲಿ ಘಟನೆ ನಡೆದಿದೆ.
ಮಂಡ್ಯದ ಕಲ್ಲಹಳ್ಳಿ ನಿವಾಸಿ ಕೃಷ್ಣ ಎಂಬುವರು ಚಲಾಯಿಸುತ್ತಿದ್ದ ಕ್ರೇಟಾ ಕಾರು ನಾಲೆಗೆ ಬಿದ್ದಿದೆ.
ಕಿರಿದಾದ ರಸ್ತೆ, ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ.ಕಾರು ನಾಲೆಗೆ ಬೀಳುತ್ತಿದ್ದಂತೆ ಚಾಲಕ ಕೃಷ್ಣ ಹೊರಬಂದಿದ್ದಾರೆ.
ಸಮಯಪ್ರಜ್ಞೆಯಿಂದ ಜೀವ ಉಳಿಸಿಕೊಂಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗಳು ನಾಲೆಯಲ್ಲಿ ಮುಳುಗಿದ್ದ ಕಾರು ಮೇಲೆತ್ತಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…