ಕಾಳಿದಾಸ ರಸ್ತೆ ಮ್ಯಾನ್ ಹೋಲ್ ಗೆ ಮರುಜೀವ…ಕಾಮಗಾರಿ ಆರಂಭ…Tv10 ಕನ್ನಡ ವರದಿ ಫಲಶೃತಿ…
- TV10 Kannada Exclusive
- November 3, 2025
- No Comment
- 16

ಕಾಳಿದಾಸ ರಸ್ತೆ ಮ್ಯಾನ್ ಹೋಲ್ ಗೆ ಮರುಜೀವ…ಕಾಮಗಾರಿ ಆರಂಭ…Tv10 ಕನ್ನಡ ವರದಿ ಫಲಶೃತಿ…
ಮೈಸೂರು,ನ3,Tv10 ಕನ್ನಡ
ಕೊನೆಗೂ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಮ್ಯಾನ್ ಹೋಲ್ ಗೆ ರಿಪೇರಿ ಭಾಗ್ಯ ಲಭಿಸಿದೆ.ಕುಸಿದ ಹಂತ ತಲುಪಿ ವಾಹನ ಸವಾರರಿಗೆ ಭೀತಿ ಸೃಷ್ಠಿಸಿದ್ದ ಮ್ಯಾನ್ ಹೋಲ್ ಸುಸ್ಥಿತಿಗೆ ತರಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.ಇದು Tv10 ಕನ್ನಡ ವಾಹಿನಿಯ ವರದಿಯ ಫಲಶೃತಿ.
ಕಾಳಿದಾಸ ರಸ್ತೆ ಪಂಚವಟಿ ವೃತ್ತದ ಕೂಗಳತೆಯಲ್ಲಿ ಮ್ಯಾನ್ ಹೋಲ್ ದುರ್ಬಲವಾಗಿ ಕುಸಿದಿತ್ತು.ಎರಡು ಬದಿಯಲ್ಲಿ ಬ್ಯಾರಿಕೇಡ್ ಗಳನ್ನ ಇಟ್ಟ ಪಾಲಿಕೆ ಅಧಿಕಾರಿಗಳು ಕುಸಿದ ಮ್ಯಾನ್ ಹೋಲ್ ಸರಿಪಡಿಸದೆ ನಿರ್ಲಕ್ಷಿಸಿದ್ದರು.ದಟ್ಟವಾದ ವಾಹನ ಸಂಚಾರ ಇರುವ ಕಾರಣ ಸವಾರರಿಗೆ ಭಾರಿ ಕಿರಿಕಿರಿ ಆಗುತ್ತಿತ್ತು.ಸುಮಾರು ಒಂದು ತಿಂಗಳಿಂದ ವಾಹನ ಸಂಚಾರರು ಪರದಾಡುತ್ತಿದ್ದರು.ಈ ಬಗ್ಗೆ Tv10 ಕನ್ನಡ ವಾಹಿನಿಯಲ್ಲಿ ವರದಿ ಮಾಡಲಾಗಿತ್ತು.ವರದಿಗೆ ಸ್ಪಂದಿಸಿದ ಪಾಲಿಕೆ ಅಧಿಕಾರಿಗಳು ಮ್ಯಾನ್ ಹೋಲ್ ರಿಪೇರಿಗೆ ಮುಂದಾಗಿದ್ದಾರೆ…