KRSನಲ್ಲಿ ಮತ್ತೆ ಭದ್ರತಾ ಲೋಪ ಆರೋಪ…ನಿರ್ಬಂಧಿತ ಪ್ರದೇಶದಲ್ಲಿ ಪ್ರಭಾವಿಗಳ ಕಾರುಬಾರು…
- TV10 Kannada Exclusive
- November 4, 2025
- No Comment
- 116

KRSನಲ್ಲಿ ಮತ್ತೆ ಭದ್ರತಾ ಲೋಪ ಆರೋಪ…
ನಿರ್ಬಂಧಿತ ಪ್ರದೇಶದಲ್ಲಿ ಪ್ರಭಾವಿಗಳ ಕಾರುಬಾರು…
ಮಂಡ್ಯ,ನ4,Tv10 ಕನ್ನಡ
ಕೆ.ಆರ್.ಎಸ್.ನಲ್ಲಿ ಮತ್ತೆ ಭದ್ರತಾ ಲೋಪದ ಕೂಗು ಕೇಳಿ ಬರುತ್ತಿದೆ.ಪದೇ ಪದೇ ಭದ್ರತಾ ಲೋಪವಾದರೂ ಸಂಬಧಪಟ್ಟವರು ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದ್ದಾರೆ.
ವಿಶ್ವವಿಖ್ಯಾತ ಬೃಂದಾವನ ಗಾರ್ಡನ್ ನ ಫುಟ್ ಪಾತ್ ನಲ್ಲಿ ರಾಜಾರೋಷವಾಗಿ ಸೈಕ್ಲಗ್ ಮಾಡಿರುವ ದೃಶ್ಯ ವೈರಲ್ ಆಗಿದರ.ಮುಖ್ಯ ಧ್ವಾರದ ಮುಂದೆ ಫೋಟೋ ಕ್ಲಿಕ್ಕಿಸಲಾಗಿದೆ.ಕಾವೇರಿ ಆರತಿ ನಡೆದ ಸ್ಥಳದಲ್ಲಿ ಶೂ ಹಾಕಿ ಪ್ರಭಾವಿಗಳು ಸೈಕ್ಲಿಂಗ್ ಮಾಡಿದ್ದಾರೆ.
ಸಾಮಾನ್ಯ ಜನರಿಗೆ ಒಂದು, ಪ್ರಭಾವಿಗಳಿಗೆ ಮತ್ತೊಂದು ಕಾನೂನು ಇದಿಯಾ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಪ್ರಭಾವಿಗಳ ಅಂಧಾ ದರ್ಬಾರ್ ಗೆ ಬ್ರೇಕ್ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಿಲ್ಲ.ಪದೇ ಪದೇ ಸಾಬೀತಾಗುತ್ತಿದೆ KRS ಭದ್ರತಾ ಜವಾಬ್ದಾರಿ ಹೊತ್ತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಕಾವೇರಿ ನೀರಾವರಿ ನಿಗಮ, ಪೊಲೀಸ್ ಇಲಾಖೆ, ಮಂಡ್ಯ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ…