ಹುಲಿ ದಾಳಿಗೆ ಮೂವರು ರೈತರು ಬಲಿ ಹಿನ್ನಲೆ…ಬಂಡೀಪುರ ನಾಗರಹೊಳೆ ಸಫಾರಿ ಸಂಪೂರ್ಣ ಬಂದ್…
- TV10 Kannada Exclusive
- November 7, 2025
- No Comment
- 12

ಹುಲಿ ದಾಳಿಗೆ ಮೂವರು ರೈತರು ಬಲಿ ಹಿನ್ನಲೆ…
ಬಂಡೀಪುರ ನಾಗರಹೊಳೆ ಸಫಾರಿ ಸಂಪೂರ್ಣ ಬಂದ್…

ಬೆಂಗಳೂರು,ನ7,Tv10 ಕನ್ನಡ
ಹುಲಿ ದಾಳಿ ಪ್ರಕರಣಗಳು ಸರ್ಕಾರದ ನಿದ್ದೆ ಕೆಡಿಸಿದೆ.ಮೂರು ಸಾವು ಜನಜಾನುವಾರುಗಳ ಮೇಲೆ ನಿರಂತರ ದಾಳಿಯಿಂದ ಆತಂಕ ಹೆಚ್ಚಾಗುತ್ತಾ ಹೋಗುತ್ತಿದೆ.ನರಹಂತಕನ ಸೆರೆ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.ಹುಲಿ ದಾಳಿಯಿಂದ ಮೂವರು ರೈತರು ಬಲಿಯಾದ ಹಿನ್ನಲೆ
ಸಫಾರಿ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.ಬಂಡೀಪುರ,ನಾಗರಹೊಳೆ ಸಫಾರಿಯನ್ನ ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ.ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರಕ್ಕಿಂಗ್ ಸಹ ಬಂದ್ ಮಾಡುವಂತೆ ಸೂಚಿಸಿದ್ದಾರೆ.ಸಫಾರಿಗೆ ನಿಯೋಜನೆಗೊಂಡ ಸಿಬ್ಬಂದಿಗಳ ಸಮೇತ ಹುಲಿ ಕಾರ್ಯಾಚರಣೆಗೆ
ಎಲ್ಲಾ ಸಿಬ್ಬಂದಿಗಳನ್ನು ಬಳಸುವಂತೆ ಸೂಚನೆ ಆದೇಶ ಹೊರಡಿಸಿದ್ದಾರೆ…