ರೌಡಿಶೀಟರ್ ಮಣಿಕಂಠರಾಜ್ ಗೌಡ ಗಡೀಪಾರು…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…
- Crime
- November 19, 2025
- No Comment
- 10
ರೌಡಿಶೀಟರ್ ಮಣಿಕಂಠರಾಜ್ ಗೌಡ ಗಡೀಪಾರು…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…
ತಿ.ನರಸೀಪುರ,ನ19,Tv10 ಕನ್ನಡ
ರೌಡಿಶೀಟರ್ ಮಣಿಕಂಠರಾಜ್ ಗೌಡ@ಮಣಿ ಎಂಬಾತನನ್ನ 6 ತಿಂಗಳುಗಳ ಕಾಲ ಗಡಿಪಾರು ಮಾಡಲಾಗಿದೆ.ಪೊಲೀಸ್ ಠಾಣಾಧಿಕಾರಿ ಇನ್ಸ್ಪೆಕ್ಟರ್ ಧನಂಜಯ ರವರು ಮಾಹಿತಿ ನೀಡಿದ್ದಾರೆ.ಟಿ.ನರಸೀಪುರದಲ್ಲಿ ಸಾರ್ವಜನಿಕರಿಗೆ ಈತನಿಂದ ಉಪಟಳ ಹೆಚ್ಚಾಗಿತ್ತು.ಬೆದರಿಕೆಎ ಒಡ್ಡಿ ವಸೂಲಿ ಮಾಡುತ್ತಿದ್ದ ದೂರುಗಳು ಈತನ ಮೇಲೆ ಹಲವಾರು ಬಂದಿದ್ದ ಹಿನ್ನಲೆ ಗಡೀಪಾರು ಶಿಕ್ಷೆ ವಿಧಿಸಲಾಗಿದೆ.
ಮೈಸೂರು ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಬಳಗಾನೂರು ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.ಕಾನೂನು ವ್ಯವಸ್ಥೆಗೆ ಭಂಗ ತರುವ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆ ಗಂಟೆ ಎಂದು
ಇನ್ಸ್ಪೆಕ್ಟರ್ ಧನಂಜಯ್ ವಾರ್ನಿಂಗ್ ನೀಡಿದ್ದಾರೆ…