ಗಿರವಿ ಹೆಸರಲ್ಲಿ 184 ಗ್ರಾಂ ಚಿನ್ನ ಧೋಖಾ…ಸ್ಟಾರ್ ಗೋಲ್ಡ್ ಕಂಪನಿ ಹೆಸರಲ್ಲಿ ವಂಚನೆ…
- TV10 Kannada Exclusive
- November 23, 2025
- No Comment
- 27
ಗಿರವಿ ಹೆಸರಲ್ಲಿ 184 ಗ್ರಾಂ ಚಿನ್ನ ಧೋಖಾ…ಸ್ಟಾರ್ ಗೋಲ್ಡ್ ಕಂಪನಿ ಹೆಸರಲ್ಲಿ ವಂಚನೆ…




ಮೈಸೂರು,ನ23,Tv10 ಕನ್ನಡ
ಸ್ಟಾರ್ ಗೋಲ್ಡ್ ಕಂಪನಿಯಲ್ಲಿ ಗಿರವಿ ಇಟ್ಟ ಚಿನ್ನಾಭರಣ ಸಮೇತ ಬ್ರಾಂಚ್ ಸಿಬ್ಬಂದಿ ಎಸ್ಕೇಪ್ ಆದ ಪ್ರಕರಣ ಬೆಳಕಿಗೆ ಬಂದಿದೆ.ವಂಚನೆಗೆ ಒಳಗಾದ ಚಿತ್ರದುರ್ಗ ಮೂಲದ ಪ್ರದೀಪ್ ಎಂಬುವರು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಲಕ್ಷಾಂತರ ಮೌಲ್ಯದ 184 ಗ್ರಾಂ ಚಿನ್ನಾಭರಣ ಸಮೇತ ಬ್ರಾಂಚ್ ಸಿಬ್ಬಂದಿ ಎಸ್ಕೇಪ್ ಆಗಿದ್ದಾನೆ.
ಚಿತ್ರದುರ್ಗದ ಪ್ರದೀಪ್ ರವರು ಮುತ್ತೂಟ್ ಫೈನಾನ್ಸ್ ನಲ್ಲಿ 184 ಗ್ರಾಂ ಚಿನ್ನ ಗಿರವಿ ಇಟ್ಟು 9,89,900/- ಸಾಲ ಪಡೆದಿದ್ದರು.ಫೇಸ್ ಬುಕ್ ನಲ್ಲಿ ಸ್ಟಾರ್ ಗೋಲ್ಡ್ ಕಂಪನಿ ನೀಡಿದ ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂಬ ಜಾಹಿರಾತು ನಂಬಿ ಸಂಪರ್ಕಿಸಿದಾಗ ಮೈಸೂರು ವಿಳಾಸ ನೀಡಿದ್ದಾರೆ.ಸ್ಟಾರ್ ಗೋಲ್ಡ್ ಕಂಪನಿಯ ಪ್ರತಿನಿಧಿ ಯೋಗೇಶ್ ಎಂಬುವರು ಪ್ರದೀಪ್ ರನ್ನ ಸಂಪರ್ಕಿಸಿ 184 ಗ್ರಾಂ ಚಿನ್ನಕ್ಕೆ 12,74,000/- ಸಾಲ ಕೊಡುವುದಾಗಿ ತಿಳಿಸಿದ್ದಾರೆ.ಇದಕ್ಕೆ ಒಪ್ಪಿಗೆ ನೀಡಿದ ಪ್ರದೀಪ್ ರವರು ಯೋಗೇಶ್ ರವರನ್ನ ಚಿತ್ರದುರ್ಗದ ಮುತ್ತೂಟ್ ಫೈನಾನ್ಸ್ ಗೆ ಕರೆದೊಯ್ದಿದ್ದಾರೆ.ಬಡ್ಡಿ ಸಮೇತ ಸಾಲ ಮರುಪಾವತಿಸಿದ ಯೋಗೇಶ್ 184 ಗ್ರಾಂ ಚಿನ್ನ ಪಡೆದು ಉಳಿಕೆ 1,98,600/- ರೂ ನೀಡಿ ತಮ್ಮ ಸಂಸ್ಥೆಯಲ್ಲಿ ಗಿರವಿ ಇಟ್ಟುಕೊಂಡು ರಸೀತಿ ನೀಡಿದ್ದಾರೆ.ಹಣ ಸರದೂಗಿಸಿಕೊಂಡು ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಸ್ಟಾರ್ ಗೋಲ್ಡ್ ಕಂಪನಿಗೆ ಹೋದಾಗ ಸಬೂಬುಗಳನ್ನ ಹೇಳಿಕೊಂಡು ಸಮಯ ತೆಗೆದುಕೊಂಡಿದ್ದಾರೆ.ನಂತರದ ದಿನಗಳಲ್ಲಿ ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ.184 ಗ್ರಾಂ ಚಿನ್ನ ಗಿರವಿ ಇಟ್ಟುಕೊಂಡು ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿರುವ ಯೋಗೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರದೀಪ್ ಪ್ರಕರಣ ದಾಖಲಿಸಿದ್ದಾರೆ…