ಕೊಳ್ಳೇಗಾಲ ತಾಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ಭಗೀರಥ ಮಹರ್ಷಿ ರವರ ನಾಮಫಲಕ ಅನಾವರಣ.

ಕೊಳ್ಳೇಗಾಲ ತಾಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ಭಗೀರಥ ಮಹರ್ಷಿ ರವರ ನಾಮಫಲಕ ಅನಾವರಣ.

ಕೊಳ್ಳೇಗಾಲ : ಭಗೀರಥ ಮಹರ್ಷಿ ರವರ ಆದರ್ಶ ಗುಣಗಳನ್ನು ನಾವೆಲ್ಲರೂ ಪಾಲಿಸಿಕೊಳ್ಳುವುದರ ಮೂಲಕ ಅವರ ಮಾರ್ಗದರ್ಶನ ವನ್ನು ದೈನಂದಿನ ಬದುಕಿನಲ್ಲಿ ಕೂಡ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ಭಗೀರಥ ಮಹರ್ಷಿ ರವರ ನಾಮಫಲಕ ಅನಾವರಣ ಮಾಡಿ ನಂತರ ಮಾತನಾಡಿದರು. ಹೃದಯ ಭಾಗವಾಗಿರುವ ಮಧುವನಹಳ್ಳಿ ಗ್ರಾಮದ ವೃತ್ತ ಕ್ಕೆ ಶ್ರೀ ಭಗೀರಥ ಮಹರ್ಷಿಯವರ ನಾಮಪಲಕವನ್ನು ಅನಾವರಣ ಗೊಳಿಸಿರುವುದು ಸಂತಸದ ವಿಷಯವಾಗಿದೆ

ತಾಲೂಕಿನ ಮಧುವನಹಳ್ಳಿ ಮುಖ್ಯ ರಸ್ತೆಯಿಂದ ತೆರಳುವ ವೃತ್ತವನ್ನು ಭಗೀರಥ ಮಹರ್ಷಿಯವರ ಭಾವಚಿತ್ರವುಳ್ಳ ನಾಮಫಲಕವನ್ನು ಪರಮಪೂಜ್ಯ ಪುರುಷೋತ್ತಮಾನಂದ ಸ್ವಾಮಿಗಳ ಜೊತೆಗೂಡಿ ಅನಾವರಣ ಗೊಳಿಸಿ ನಂತರ ಮಾತನಾಡಿದ ಶಾಸಕರು.

ಭಗೀರಥರ ಆದರ್ಶ ತತ್ವಗಳನ್ನು ಎಲ್ಲರೂ ಸಹ ಪಾಲನೆ ಮಾಡುವಂತಹ ಕೆಲಸವಾಗಬೇಕು. ಶ್ರೀ ಭಗೀರಥ ಮಹರ್ಷಿ ರವರ ಹೆಸರು ಹೆಸರಿನಲ್ಲಿ ಈ ಒಂದು ವೃತ್ತವನ್ನು ಮಾಡುತ್ತಿರುವುದು ಇಡೀ ಸಮುದಾಯಕ್ಕೆ ಮಹರ್ಷಿಯವರ ಆಶೀರ್ವಾದ ದೊರಕಲೆಂದು ತಿಳಿಸಿದರು. ಮಹರ್ಷಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಳ್ಳಬೇಕು.

ಮುಂದಿನ ದಿನಗಳಲ್ಲಿ ಶ್ರೀ ಭಗೀರಥ ಮಹರ್ಷಿಯವರ ಪುತಳಿಯನ್ನು ಸಹ ಇದೇ ಸ್ಥಳದಲ್ಲಿ ಅನಾವರಣ ಮಾಡುವಂತ ಕೆಲಸವಾಗಬೇಕು. ಮಧುನಹಳ್ಳಿ ಗ್ರಾಮವು ನನಗೆ ಒಂದು ಅಚ್ಚುಮೆಚ್ಚಿನ ಸ್ತಳವಾಗಿತ್ತು ಈ ಭಾಗದ ಅಭಿವೃದ್ಧಿಗೆ ಯಾವಾಗಲೂ ಸಹ ಬದ್ಧನಾಗಿರುತ್ತೇನೆ. ಈ ಸಮುದಾಯದವರ ಅಭಿವೃದ್ಧಿಗೆ ಎಲ್ಲಾ ರೀತಿಯಲ್ಲಿ ನನ್ನ ಪ್ರಯತ್ನ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಮಯದಲ್ಲಿ ಸಮುದಾಯದ ಶ್ರೀಗಳಾದ ಮಹದೇವಸ್ವಾಮಿಗಳು ಉಪ್ಪಾರ ಸಮುದಾಯದ ಅಧ್ಯಕ್ಷರಾದ ಬರಮಣ್ಣ ಉಪ್ಪಾರ, ಸಮುದಾಯದ ಜಿಲ್ಲಾಧ್ಯಕ್ಷರಾದ ನಾಗರಾಜು, ಗೌರಿ ಬಿದನೂರಿನ ನಾಗರಾಜು, ನಿಂಗಶೆಟ್ಟರು,ಮಹೇಶ್, ಪ್ರಸಾಂತ್, ರಾಚಪ್ಪ,ಮಹೇಶ್,ಹಾಗೂ ಇನ್ನಿತರು ಇದ್ದರು.

ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು.

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *