ಅಕ್ರಮ ಸಂಬಂಧ ಬೆಳೆಸುವಂತೆ ಗೃಹಿಣಿಗೆ ಟಾರ್ಚರ್…ಕಾಮುಕನಿಗೆ ಗೂಸಾ…FIR

ಅಕ್ರಮ ಸಂಬಂಧ ಬೆಳೆಸುವಂತೆ ಗೃಹಿಣಿಗೆ ಟಾರ್ಚರ್…ಕಾಮುಕನಿಗೆ ಗೂಸಾ…FIR

  • Crime
  • November 29, 2025
  • No Comment
  • 187

ಅಕ್ರಮ ಸಂಬಂಧ ಬೆಳೆಸುವಂತೆ ಗೃಹಿಣಿಗೆ ಟಾರ್ಚರ್…ಕಾಮುಕನಿಗೆ ಗೂಸಾ…FIR

ಮೈಸೂರು,ನ28,Tv10 ಕನ್ನಡ

ಅಕ್ರಮ ಸಂಬಂಧ ಬೆಳೆಸುವಂತೆ ಗೃಹಿಣಿ ಹಿಂದೆ ಬಿದ್ದ ಕಾಮುಕನಿಗೆ ಧರ್ಮದೇಟು ಬಿದ್ದಿದೆ.ಕಾಮುಕನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಮೈಸೂರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಚಿಕ್ಕಬೆಂಚನಹಳ್ಳಿ ನಿವಾಸಿ ಮಹೇಶ್ ವಿರುದ್ದ ಪ್ರಕರಣ ದಾಖಲಾಗಿದೆ.

ಗೃಹಿಣಿ ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಪಕ್ಕದ ಮನೆಯ ನಿವಾಸಿ ಮಹೇಶ್ ಸಹ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದಾನೆ.ಪ್ರತಿದಿನ ಗೃಹಿಣಿಯ ಹಿಂದೆ ಬೀಳುತ್ತಿದ್ದ ಮಹೇಶ ತನ್ನ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ.ಲೆಲಸಕ್ಕೆ ಹೋಗುವ ಸ್ಥಳಕ್ಕೆ ಬಂದು ಟಾರ್ಚರ್ ನೀಡಿದ್ದಾನೆ.ಮಜಾ ಮಾಡೋಣ..ಸುತ್ತಾಡೋಣ…ಸಿನಿಮಾಗೆ ಹೋಗೋಣ…ಎಂಜಾಯ್ ಮಾಡೋಣ…ಹಣ ಕೊಡ್ತೀನಿ ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.ತನ್ನ ಜೊತೆ ಬರದೆ ಇದ್ದರೆ ಫೋಟೋ ಹಾಗೂ ವಿಡಿಯೋಗಳನ್ನ ಮಾರ್ಫ್ ಮಾಡಿ ಇಂಟರ್ನೆಟ್ ನಲ್ಲಿ ಹಾಕಿ ಮಾನತೆಗೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.ಈ ಸಂಬಂಧ ಗೃಹಿಣಿ ತನ್ನ ಪತಿಯ ಅಣ್ಣನಿಗೆ ತಿಳಿಸಿದ್ದಾರೆ. ಮಹೇಶ್ ನೀಡುತ್ತಿದ್ದ ಕಿರುಕುಳವನ್ನ ಭಾವ ಕಣ್ಣಾರೆ ಕಂಡಾಗ ಪರಾರಿಯಾಗಿದ್ದಾನೆ.ಮಹೇಶ್ ನ ಚೇಸ್ ಮಾಡಿದ ಭಾವ ಬಿಳಿಕೆರೆ ಬಳಿ ಹಿಡಿದು ಹಿಗ್ಗಮುಗ್ಗ ಥಳಿಸಿದ್ದಾರೆ.ಮಹೇಶ್ ಆಸ್ಪತ್ರೆ ಸೇರಿಕೊಂಡಿದ್ದಾನೆ.ಹಲ್ಲೆ ನಡೆಸಿದ ಹಿನ್ನಲೆ ಗೃಹಿಣಿಯ ಭಾವನ ಮೇಲೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಹಿನ್ನಲೆ ಗೃಹಿಣಿ ಬಿಳಿಕೆರೆ ಠಾಣೆಗೆ ತೆರಳಿ ತನಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.ಹೂಟಗಳ್ಳಿಯಲ್ಲಿ ಕಿರುಕುಳ ನೀಡಿದ ಹಿನ್ನಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಹೇಶ್ ವಿರುದ್ದ ಪ್ರಕರಣ ದಾಖಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *