ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ…ಕಾರ್ಖಾನೆ ಮಾಲೀಕನಿಂದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ…ಮಾಲೀಕನ ವಿರುದ್ದ FIR…
- CrimeTV10 Kannada Exclusive
- December 9, 2025
- No Comment
- 172
ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ…ಕಾರ್ಖಾನೆ ಮಾಲೀಕನಿಂದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ…ಮಾಲೀಕನ ವಿರುದ್ದ FIR…
ಮೈಸೂರು,ಡಿ9,Tv10 ಕನ್ನಡ
ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ ಎಂದು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಸಲ್ಯೂಷನ್ಸ್ ಮ್ಯಾನುಫ್ಯಾಕ್ಚರ್ ಕಂಪನಿಯ ಮಾಲೀಕ ಮುರಳಿಧರ್ ಎಂಬುವರ ಮೇಲೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಗರ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ.ಸೆಕ್ಸುವಲ್ ನಲ್ಲಿ ಸಹಾಯ ಮಾಡಿದ್ರೆ ಚೆನ್ನಾಗಿ ನೋಡಿಕೊಳ್ತೀನಿ ಎಂದು ಒತ್ತಾಯಿಸಿದ್ದಾರೆ.ಮೊಬೈಲ್ ಗಳಿಂದ ಮೆಸೇಜ್ ಮಾಡಿದ್ದಾರೆ.ಇದರಿಂದ ನೊಂದ ಉದ್ಯೋಗಿ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಾರೆ.ಹೀಗಿದ್ದೂ ಬಿಡದ ಮಾಲೀಕ ಮುರಳಿಧರ್ ಮಹಿಳೆ ಹಿಂದೆ ಬಿದ್ದಿದ್ದಾನೆ.ಮನೆಗೆ ಬಂದು ಕೆಲಸಕ್ಕೆ ಹಿಂದಿರುಗುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ.ನಿನ್ನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಹೆದರಿಸಿದ್ದಾನೆ.ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿರುವ ನೊಂದ ಮಹಿಳಾ ಉದ್ಯೋಗಿ ಮಾಲೀಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…