ಶಾಲೆಗೆ ನೀಡಿದ ಸಿಎ ಸೈಟ್ ನಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಆರೋಪ…ಕಾಮಗಾರಿ ಸ್ಥಗಿತಗೊಳಿಸಿದ ಮುಡಾ ಸಿಬ್ಬಂದಿ…
- TV10 Kannada Exclusive
- December 18, 2025
- No Comment
- 13

ಶಾಲೆಗೆ ನೀಡಿದ ಸಿಎ ಸೈಟ್ ನಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಆರೋಪ…ಕಾಮಗಾರಿ ಸ್ಥಗಿತಗೊಳಿಸಿದ ಮುಡಾ ಸಿಬ್ಬಂದಿ…
ಮೈಸೂರು,ಡಿ18,Tv10 ಕನ್ನಡ
ಮೈಸೂರಿನ ಹೆಬ್ಬಾಳ್ ಬಡಾವಣೆಯಲ್ಲಿ ಶಾಲೆಗಾಗಿ ನೀಡಿದ ಸಿ ಎ ನಿವೇಶನದಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನಲೆ ಮುಡಾ ಸಿಬ್ಬಂದಿಗಳು ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.ಹೆಬ್ಬಾಳ್ ಮೊದಲನೇ ಹಂತದ ಶಿವಾನಂದ ವಿಧ್ಯಾ ಸಂಸ್ಥೆಗೆ ಸಿಎ ನಿವೇಶನ ನೀಡಲಾಗಿತ್ತು.ಸದರಿ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಿತ್ತು.ಹಾಗೂ ಮತ್ತಷ್ಟು ಕಾಮಗಾರಿ ನಡೆಯುತ್ತಿತ್ತು.ಮಾಹಿತಿ ಬಂದ ಹಿನ್ನಲೆ ಮುಡಾ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ…