ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…
- TV10 Kannada Exclusive
- December 19, 2025
- No Comment
- 21

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…
ಮಂಡ್ಯ,ಡಿ19,Tv10 ಕನ್ನಡ
ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಘಟನೆ ನಡೆದಿದೆ.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗೂ ಆತನ ಮಗ ಶ್ರೀಕಾಂತ್ ವಿರುದ್ಧ ಆರೋಪ.ಶ್ರೀನಿವಾಸ್ ಎಂಬುವವರ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ.ಶ್ರೀನಿವಾಸ್ ಕುಟುಂಬದ ಆಸ್ತಿ ತಮಗೆ ಸೇರಿದ್ದು ಎಂದು ಅಪ್ಪ ಮಗನಿಂದ ಕಿರಿಕ್?.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ತಮಗೆ ಸೇರಬೇಕೆಂದು ಜಗಳ.ಶ್ರೀನಿವಾಸ್ ತಾತ ಕೃಷ್ಣಶೆಟ್ಟಿ ಅವರು ಚಂದ್ರಶೇಖರ್ ತಂದೆಗೆ ಆಧಾರ ಮಾಡಿದ್ದಾರೆ ಎಂದು ವಾದ.
1964ರಲ್ಲಿ 100 ರೂ.ಗೆ 1.14 ಎಕರೆ ಜಮೀನು ಆಧಾರ ಮಾಡಿದ್ದಾರೆ.
ಈ ಜಮೀನು ನಮಗೆ ಸೇರಿದ್ದು ಎಂದು ಜಗಳ ತೆಗೆದಿರೊ ಚಂದ್ರಶೇಖರ್ ಹಾಗೂ ಶ್ರೀಕಾಂತ್.
ದಾಖಲೆಗಳಿದ್ರೆ ಕಾನೂನಾತ್ಮಕವಾಗಿ ಜಮೀನು ಪಡೆಯಿರಿ ಎಂದಿದ್ದಕ್ಕೆ ಆಕ್ರೋಷ.
ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಯಾವುದೇ ಕಾರಣಕ್ಕೂ ಜಮೀನು ಬಿಡಲ್ಲ ಎಂದು ಬೆದರಿಕೆ.ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರೊ ವಿಡಿಯೋ ಮೊಬೈಲ್ ನಲ್ಲಿ ಸೆರೆ.
ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಶ್ರೀಕಾಂತ್.ಜೈಲು ವಾಸ ಅನುಭವಿಸಿದ್ರೂ ಬುದ್ದಿ ಕಲಿಯದೆ ದರ್ಪ.
ಕೆ.ಆರ್.ಪೇಟೆ ಠಾಣೆಯಲ್ಲಿ ಸದ್ಯ ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ…