ಅಪರಾಧ ತಡೆ ಮಾಸಾಚರಣೆ ಹಿನ್ನಲೆ…ಮೇಟಗಳ್ಳಿ ಸ್ಮಶಾನಕ್ಕೆ ಪೊಲೀಸರ ಭೇಟಿ…ಕೈಕೊಟ್ಟ ವಿದ್ಯುತ್…
- TV10 Kannada Exclusive
- December 23, 2025
- No Comment
- 55


ಅಪರಾಧ ತಡೆ ಮಾಸಾಚರಣೆ ಹಿನ್ನಲೆ…ಮೇಟಗಳ್ಳಿ ಸ್ಮಶಾನಕ್ಕೆ ಪೊಲೀಸರ ಭೇಟಿ…ಕೈಕೊಟ್ಟ ವಿದ್ಯುತ್…


ಮೈಸೂರು,ಡಿ23,Tv10 ಕನ್ನಡ


ಅಪರಾಧ ತಡೆ ಮಾಸಾಚರಣೆ ಹಿನ್ನಲೆ ಮೈಸೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿಜಯನಗರ ಉಪವಿಭಾಗದ ಪೊಲೀಸರು ಕಿಡಿಗೇಡಿಗಳು,ಸಮಾಜಘಾತುಕರ ಹೆಡೆ ಮುರಿಯಲು ಎಂದಿಗೂ ಸಿದ್ದ ಎಂಬ ಸಂದೇಶ ಹೊರಡಿಸಿದ್ದಾರೆ.ಈಗಾಗಲೇ ಶಾಲಾ ಮಕ್ಕಳ ಸಮೇತ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.ಮೇಟಗಳ್ಳಿ ಠಾಣೆಯಿಂದ ಆರಂಭವಾದ ಜಾಗೃತಿ ಜಾಥಾ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊನೆಗೊಂಡಿದೆ.ವಿಜಯನಗರ ಉಪವಿಭಾಗದ ಎಸಿಪಿ ರವಿಪ್ರಸಾದ್ ರವರ ನೇತೃತ್ವದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್ಪೆಕ್ಟರ್ ಅರುಣ್ ರವರು ತಮ್ಮ ಸಿಬ್ಬಂದಿಗಳ ಜೊತೆ ಮೇಟಗಳ್ಳಿ ಸ್ಮಶಾನಕ್ಕೆ ರಾತ್ರಿ ವೇಳೆ ಧಿಢೀರ್ ಭೇಟಿ ಕೊಟ್ಟಿದ್ದಾರೆ.ಸ್ಮಶಾನದಲ್ಲಿ ಅನೈತಿಕ ಚಟುವಟಿಕೆಗಳು,ಗಾಂಜಾ ಸೇವನೆ ಇಂತಹ ಮುಂತಾದ ಪ್ರಕರಣಗಳ ಬೆಳಕಿಗೆ ಬಂದಿರುವ ಹಿನ್ನಲೆ ಧಿಢೀರ್ ಭೇಟಿಕೊಟ್ಟಾಗ ಇಲ್ಲಿ ಮತ್ತೆ ವಿದ್ಯುತ್ ಕೈಕೊಟ್ಟಿದೆ.ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದೇ ಕಿಡಿಗೇಡಿಗಳಿಗೆ ಅನುಕೂಲವಾಗಿದೆ ಎಂಬ ಆರೋಪ ಇದೆ.ಕೆಲವು ದಿನಗಳ ಹಿಂದಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿತ್ತು.ಇದೀಗ ಮತ್ತೆ ವಿದ್ಯುತ್ ಕೈಕೊಟ್ಡ ಹಿನ್ನಲೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.