ರಿಪಬ್ಲಿಕ್ ಅಂತರಾಷ್ಟ್ರೀಯ ವಸತಿ ಶಾಲೆ ಹಾಗೂ ಕಾಲೇಜಿನ 4ನೇ ವರ್ಷದ ವಾರ್ಷಿಕೋತ್ಸವ.

ರಿಪಬ್ಲಿಕ್ ಅಂತರಾಷ್ಟ್ರೀಯ ವಸತಿ ಶಾಲೆ ಹಾಗೂ ಕಾಲೇಜಿನ 4ನೇ ವರ್ಷದ ವಾರ್ಷಿಕೋತ್ಸವ.

ರಿಪಬ್ಲಿಕ್ ಅಂತರಾಷ್ಟ್ರೀಯ ವಸತಿ ಶಾಲೆ ಹಾಗೂ ಕಾಲೇಜಿನ 4ನೇ ವರ್ಷದ ವಾರ್ಷಿಕೋತ್ಸವ.

ಹನೂರು, Tv 10
24/12/2025

ಹನೂರು: ಮಕ್ಕಳನ್ನು ಕೇವಲ ಅಂಕಗಳಿಸುವ ಕಾರ್ಖಾನೆಯನ್ನಾಗಿ ಮಾಡದೇ ಅವರ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಪೋಷಕರು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.

ತಾಲೂಕಿನ ಮಂಗಲ ರಿಪಬ್ಲಿಕ್ ಅಂತರಾಷ್ಟ್ರೀಯ ವಸತಿ ಶಾಲೆ ಮತ್ತು ಕಾಲೇಜಿನ 4ನೇ ವರ್ಷದ ವಾರ್ಷಿಕೋತ್ಸವದ(ಜೀವೋತ್ಸವ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶವನ್ನು ಮುನ್ನೆಡಿಸುವ ಬಹುತೇಕರು ಲಾಸ್ಟ್ ಬೆಂಜ್ ಸ್ಟೂಡೆಂಟ್ ಗಳು ಆಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅವರದ್ದೇ ಆದ ಸಾಮರ್ಥ್ಯವಿದೆ ಆಗಾಗಿ ವಿದ್ಯಾರ್ಥಿಗಳನ್ನು ಅಂಕಗಳಿಸಲಷ್ಟೇ ಸೀಮಿತಗೊಳಿಸದೆ ಅವರಲ್ಲಿನ ಸೃಜನಶೀಲತೆಯನ್ನು ಹೊರತರುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪೋಷಕರು ಮೊಬೈಲ್ ಕೊಟ್ಟು ವಿದ್ಯಾರ್ಥಿಗಳನ್ನು ಹಾಳು ಮಾಡುವ ಕೆಲಸ ಮಾಡಬೇಡಿ ಎಂದರು.
ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ: ಇಂದು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ವಸೂಲಿ ಮಾಡುತ್ತೀವೆ ಎಂದು ಆರೋಪಸಲಾಗುತ್ತಿದೆ. ಇಂತಹ ಶಿಕ್ಷಣ ಸಂಸ್ಥೆಗಳ ನಡುವೆ ರಿಪಬ್ಲಿಕ್ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಅಂಡ್ ಕಾಲೇಜ್ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ವಿಚಾರ. ಕಡಿಮೆ ಅವಧಿಯಲ್ಲಿ ಉತ್ತಮ ಹೆಸರನ್ನು ಗಳಿಸುತ್ತಿರುವ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಆರೋಗ್ಯ, ಶಿಕ್ಷಣ ವ್ಯಾಪಾರೀಕರಣವಾಗಿದೆ. ಈ ದಿನಮಾನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆಯ ರವೀಂದ್ರ ವಿದೇಶದಲ್ಲಿದ್ದ ಕೆಲಸ ತೊರೆದು ಬಂದಿರುವುದು ಮೆಚ್ಚುಗೆಯ ಸಂಗತಿ ಎಂದರು.

ಹನೂರು ಬಿಜೆಪಿ ಮಂಡಲದ ಅಧ್ಯಕ್ಷ ವೃಷಭೇಂದ್ರಸ್ವಾಮಿ ಮಾತನಾಡಿ, ಜೀವರಾಜ್ ಎಜುಕೇಷನಲ್ ಟ್ರಸ್ಟ್ ಅಕ್ಷರದ ಜೊತೆಗೆ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಮಾದರಿಯಾಗಿದೆ ಎಂದರು.

ಮಂಗಲ ಪುಟ್ಟರಾಜು ಮಾತನಾಡಿ, ಬೆಂಗಳೂರು, ಮೈಸೂರು ಇನ್ನಿತರೆ ಮಹಾ ನಗರಗಳಲ್ಲಿ ಸಿಗುವ ಶಿಕ್ಷಣ ಸೌಲಭ್ಯವನ್ನು ನಮ್ಮ ಗ್ರಾಮದಲ್ಲಿಯೇ ಸ್ಥಾಪಿಸಬೇಕೆಂದು ಕಾರ್ಯದರ್ಶಿ ರವೀಂದ್ರ ಅವರು ಕುಟುಂಬಸ್ಥರ ಸಹಕಾರದೊಂದಿಗೆ ಮುನ್ನೇಡೆಸುತ್ತಿದ್ದಾರೆ ಎಂದರು.

ಚಾಮುಲ್ ನಿರ್ದೇಶಕ ಶಾಹುಲ್ ಅಹಮ್ಮದ್ ಮಾತನಾಡಿ, ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆ ಟೊಂಕ ಕಟ್ಟಿ ನಿಂತಿದೆ. ಈ ಸೌಲಭ್ಯವನ್ನು ಪೋಷಕರು, ವಿದ್ಯಾರ್ಥಿಗಳು, ಸದುಪಯೋಗಪಡಿಸಿಕೊಳ್ಳಬೇಕೆಂದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಹಾಗೆಯೇ ವಿದ್ಯಾರ್ಥಿಗಳ ತಾಯಂದಿರು ತಮ್ಮ ಮಕ್ಕಳೊಡನೆ ತಾಯಿಯ ಪ್ರೀತಿ, ತ್ಯಾಗ, ಕರುಣೆ, ಮಮತೆಯನ್ನು ಸಾರುವ ಭಾವನಾತ್ಮಕ ನೃತ್ಯರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಚಾಮಲ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಮಹದೇವ ಪ್ರಸಾದ್, ಮಾಜಿ ಜಿ.ಪಂ.ಸದಸ್ಯ ಕೊಪ್ಪಳಿ ಮಹದೇವ ನಾಯಕ್, ಮಾಂಬಳ್ಳಿ ನಂಜುಂಡಸ್ವಾಮಿ, ಸಂಸ್ಥೆಯ ಅಧ್ಯಕ್ಷ ಜಯಲಕ್ಷ್ಮಿ ಜೀವರಾಜ್, ಕಾರ್ಯದರ್ಶಿ ರವೀಂದ್ರ, ಆಡಳಿತ ಅಧಿಕಾರಿ ಮಹೇಶ್ ಪಿಎಂ, ಮುಖ್ಯ ಶಿಕ್ಷಕ ಸ್ಟೀಫನ್ ಪುರುಷೋತ್ತಮ್, ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಪೋಷಕರು ಇದ್ದರು.

ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು.

Spread the love

Related post

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು… ನಂಜನಗೂಡು,ಏ9,Tv10 ಕನ್ನಡ…
ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್. ಮೈಸೂರು, ಏಪ್ರಿಲ್ 8: ಮೈಸೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಕ್ಸ್‌ಕ್ಯೂಷನ್ ಕೇಸ್…
ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕ…ಕೆಎಂಪಿಕೆ ಟ್ರಸ್ಟ್ ನಿಂದ ಸನ್ಮಾನ..

ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ…

ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕ…ಕೆಎಂಪಿಕೆ ಟ್ರಸ್ಟ್ ನಿಂದ ಸನ್ಮಾನ.. ಮೈಸೂರು,ಏ8,Tv10 ಕನ್ನಡ ಖ್ಯಾತ ಯೋಗ ಗುರು ಡಾಕ್ಟರ್ ರಾಘವೇಂದ್ರ ಪೈ…

Leave a Reply

Your email address will not be published. Required fields are marked *