ಆಸ್ತಿ ವಿವಾದ..ಒಂಟಿ ಇದ್ದ ಮಹಿಳೆ ಮೇಲೆ ಹಲ್ಲೆ…ಗೂಂಡಾಗಳಂತೆ ವರ್ತಿಸಿದ ಸಂಬಂಧಿಕರು…ಕೊಲೆ ಬೆದರಿಕೆ…6 ಮಂದಿ ವಿರುದ್ದ FIR…

ಆಸ್ತಿ ವಿವಾದ..ಒಂಟಿ ಇದ್ದ ಮಹಿಳೆ ಮೇಲೆ ಹಲ್ಲೆ…ಗೂಂಡಾಗಳಂತೆ ವರ್ತಿಸಿದ ಸಂಬಂಧಿಕರು…ಕೊಲೆ ಬೆದರಿಕೆ…6 ಮಂದಿ ವಿರುದ್ದ FIR…

ಆಸ್ತಿ ವಿವಾದ..ಒಂಟಿ ಇದ್ದ ಮಹಿಳೆ ಮೇಲೆ ಹಲ್ಲೆ…ಗೂಂಡಾಗಳಂತೆ ವರ್ತಿಸಿದ ಸಂಬಂಧಿಕರು…ಕೊಲೆ ಬೆದರಿಕೆ…6 ಮಂದಿ ವಿರುದ್ದ FIR…

ಮೈಸೂರು,ಡಿ24,Tv10 ಕನ್ನಡ

ಆಸ್ತಿ ವಿವಾದ ಹಿನ್ನಲೆ ಒಂಟಿಯಾಗಿದ್ದ ಮಹಿಳೆ ಮನೆಗೆ ನುಗ್ಗಿದ ಸಂಬಂಧಿಕರು ಗೂಂಡಾಗಳಂತೆ ವರ್ತಿಸಿ ಹಲ್ಲೆ ನಡೆಸಿ ವಸ್ತುಗಳನ್ನ ನಾಶಪಡಿಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣ ಕುಂಬಾರಗೇರಿಯಲ್ಲಿ ನಡೆದಿದೆ.ನೇತ್ರಾವತಿ ಎಂಬುವರ ಮೇಲೆ ಹಲ್ಲೆ ನಡೆದಿದ್ದು ಪ್ರಸನ್ನ,ಜಗನ್ನಾಥ್,ಮಂಜುಳಾ,ರೇಣುಕಾ,ವರ್ಷಾ ಹಾಗೂ ಪ್ರಜ್ವಲ್ ಎಂಬುವರ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮಾ ಚಿತ್ರಮಂದಿರದ ರಸ್ತೆಯಲ್ಲಿ ನೇತ್ರಾವತಿ ರವರ ಮನೆ ಇದ್ದು ಕಳೆದ 10 ವರ್ಷಗಳಿಂದ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ.ಸದರಿ ಆಸ್ತಿಯನ್ನ ಮಾರಾಟ ಮಾಡಲು ನೇತ್ರಾವತಿ ರವರ ಸಂಬಂಧಿಕರೇ ಆದ ಆರೋಪಿಗಳು ಸಾಕಷ್ಟು ವಿಫಲ ಯತ್ನ ನಡೆಸಿದ್ದಾರೆ.ಕೆಲವು ದಿನಗಳ ಹಿಂದೆ 6 ಜನ ಆರೋಪಿಗಳು 7-8 ಜನರನ್ನ ಮನೆಗೆ ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ.ನಿಮ್ಮಿಂದ ಮನೆ ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂದು ಕಾರಣ ನೀಡಿ ಗಂಡ ಇಲ್ಲದಿರುವ ಸಮಯದಲ್ಲಿ ಮನೆಗೆ ಪ್ರವೇಶಿಸಿ ನೇತ್ರಾವತಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.ಗಲಾಟೆ ವೇಳೆ ನೇತ್ರಾವತಿ ರವರ ಮಾಂಗಲ್ಯ ಸರ ಹಾಗೂ ಎರಡು ಉಂಗುರಗಳನ್ನ ಕಿತ್ತುಕೊಂಡು ಹೋಗಿದ್ದಾರೆ.ಮೊಬೈಲ್ ಹೊಡೆದುಹಾಕಿ ಗೂಂಡಾಗಳಂತೆ ವರ್ತಿಸಿದ್ದಾರೆ.ಮನೆಯಲ್ಲಿದ್ದ ಸಿಸಿ ಕ್ಯಾಮರಾ ಧ್ವಂಸ ಮಾಡಿದ್ದಾರೆ.ಕೆಲವು ವಸ್ತುಗಳನ್ನ ನಾಶಪಡಿಸಿದ್ದಾರೆ.ಹಲ್ಲೆಗೆ ಒಳಗಾದ ನೇತ್ರಾವತಿ 6 ಮಂದಿ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *