ಮಕ್ಕಳ ವಿಶೇಷ ಗ್ರಾಮ ಸಭೆ. ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ಮೂಲಕ ಪ್ರಿಯಾಂಕ ಖರ್ಗೆ ಹಾಗೂ ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ.

ಮಕ್ಕಳ ವಿಶೇಷ ಗ್ರಾಮ ಸಭೆ. ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ಮೂಲಕ ಪ್ರಿಯಾಂಕ ಖರ್ಗೆ ಹಾಗೂ ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ.

ಮಕ್ಕಳ ವಿಶೇಷ ಗ್ರಾಮ ಸಭೆ. ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್
ಮೂಲಕ ಪ್ರಿಯಾಂಕ ಖರ್ಗೆ ಹಾಗೂ ವಿದ್ಯಾರ್ಥಿಗಳ ನಡುವೆ ಸಂವಾದ ಕಾರ್ಯಕ್ರಮ.

ಹನೂರು,Tv10
24/12/2025

ಹನೂರು :ಮಕ್ಕಳ ವಿಶೇಷ ಗ್ರಾಮ ಸಭೆ ರಾಜ್ಯಕ್ಕೆ ಅಲ್ಲ ದೇಶಕ್ಕೆ ಮಾದರಿ ಗ್ರಾಮ ಸಭೆ ಆಯೋಜಿಸಿರುವುದು ಮಕ್ಕಳ ಹಕ್ಕುಗಳ ಬೇಡಿಕೆಗೆ ಅನುಕೂಲಕ್ಕೆ ತಕ್ಕಂತೆ ಜನಪ್ರತಿನಿಧಿ ಅಧಿಕಾರಿಗಳು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಶುಭ ಕೋರಿ ಮಾತನಾಡಿದರು.

ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯತ್ ಚಾಮರಾಜನಗರ ತಾಲೂಕು ಪಂಚಾಯಿತಿ ಹನೂರು ಮಣಗಳ್ಳಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ ಮಕ್ಕಳ ವಿಶೇಷ ಗ್ರಾಮ ಸಭೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿಯೇ ಮಾದರಿಯಾಗಿ ಮಕ್ಕಳ ವಿಶೇಷ ಗ್ರಾಮ ಸಭೆಯೇ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಕಾರ್ಯಕ್ರಮವನ್ನು ಪಂಚಾಯತ್ ರಾಜ್ ಇಲಾಖೆ ಮುಖಾಂತರ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಉತ್ತಮವಾದ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಬೇಕಾಗಿರುವ ಮಾಹಿತಿ ತಂತ್ರಜ್ಞಾನ ಸಾಮರ್ಥ್ಯವನ್ನು ಜಮಾಸ್ ಜನಸಾಮಾನ್ಯರಿಗೆ ಪಾರದರ್ಶಕತೆ ಮತ್ತು ಜನಸ್ನೇಹಿ ಆಡಳಿತ ನೀಡುವ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಮಕ್ಕಳು ದೇಶದ ಆಸ್ತಿ ಹೀಗಾಗಿ ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ವ ರೀತಿಯಲ್ಲಿಯೂ ಕಾರ್ಯಕ್ರಮವನ್ನು ಜನಪ್ರತಿನಿಧಿ ಅಧಿಕಾರಿಗಳು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಚಿವರು ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು..

ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ ; ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಣ್ಣಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜನೆ ಮಾಡಲು ಅವಕಾಶ ಕಲ್ಪಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪಂಚಾಯತ್ ರಾಜ್ ಇಲಾಖೆ ಮುಖಾಂತರ ಚಾಮರಾಜನಗರ ಜಿಲ್ಲೆ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ತಮ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಸುತ್ತಮುತ್ತಲಿನ ಶಾಲೆ ಹಾಗೂ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಸಚಿವರ ಜೊತೆ ಮಾತನಾಡಿ ಕಾರ್ಯಕ್ರಮದ ಸದುದ್ದೇಶವನ್ನು ತಿಳಿದುಕೊಂಡು ಪೂರಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು ಮತ್ತು ಹಣಕಾಸು ನಿರ್ವಹಣೆಯನ್ನು ಸುಧಾರಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖಾಂತರ ಪಂಚತಂತ್ರ ತಂತ್ರಾಂಶವನ್ನು ಆರಂಭಿಸಿ ಈಗ ಕಾರ್ಯಕ್ರಮವನ್ನು ಸುಧಾರಿತ ಆವೃತ್ತಿಯಲ್ಲಿ ಚಾಲ್ತಿಯಲ್ಲಿದ್ದು ಪ್ರತಿಯೊಬ್ಬರ ನಾಗರಿಕರ ಆಸ್ತಿ ಸಂಬಂಧಿಸಿದಂತೆ ಅನುಮತಿ ಕಟ್ಟಡ ಮತ್ತು ವ್ಯಾಪಾರ ಬರವಣಿಗೆಗಳು ಮತ್ತು ದೂರುಗಳ ಸಲ್ಲಿಕೆ ಅಂತಹ ನಾಗರಿಕ ಸೇವೆಗಳನ್ನು ಒದಗಿಸಲು ಆಸ್ತಿ ತೆರಿಗೆ ಸಂಗ್ರಹಣೆಯನ್ನು ನಿರ್ವಹಣೆ ಮಾಡಲು ತಂತ್ರಜ್ಞಾನದ ಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಉತ್ತಮ ಕಾರ್ಯಕ್ರಮ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಲೂಕಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾರ್ವಜನಿಕರ ನಾಗರಿಕರ ಮತ್ತು ಮಕ್ಕಳ ಅಭಿವೃದ್ಧಿ ಹೆಚ್ಚಿನ ಹೊತ್ತು ನೀಡಿದ್ದಾರೆ ಎಂದು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳ ಪ್ರಶ್ನೆಗೆ ಸಚಿವರಿಂದ ಭರವಸೆ : ಹನೂರು ಶೈಕ್ಷಣಿಕ ವಲಯದ ಹಲವು ಮೂಲೆ ಬೈರನಾಥ ಹಾಗೂ ಮಣ್ಣಗಳ್ಳಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ ಕುಡಿಯುವ ನೀರಿನ ಸಮಸ್ಯೆ ಆಟದ ಮೈದಾನ ಮತ್ತು ಸ್ಮಾರ್ಟ್ ಕ್ಲಾಸ್ ನಡೆಸಲು ಬೋರ್ಡ್ ಗಳ ಅಭಿವೃದ್ಧಿ ಪಡಿಸಿ ಉತ್ತಮ ದರ್ಜೆಯ ಕಿಟ್ ಗಳನ್ನು ವಿತರಣೆ ಮಾಡುವಂತೆ ಮತ್ತು ಬಸ್ಸಿನ ವ್ಯವಸ್ಥೆ ರಸ್ತೆ ಹಾಗೂ ಗ್ರಾಮಗಳಲ್ಲಿ ರೈತರ ಜಮೀನುಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಚಿವರ ಜೊತೆ ಸವನ್ನ ಕಾರ್ಯಕ್ರಮದಲ್ಲಿ ಸಮಸ್ಯೆ ಸರಮಾಲೆಯನ್ನೇ ತೆರೆದಿಟ್ಟರು ಇದಕ್ಕೆ ಪೂರಕವಾಗಿ ಉತ್ತರಿಸಿದ ಸಚಿವರು ಸರ್ಕಾರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುವ ಮೂಲಕ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜನೆ ಮಾಡಿರುವುದು ಆಡಳಿತದಲ್ಲಿ ಸುಧಾರಣೆ ತರಲು ಮತ್ತು ವಿದ್ಯಾರ್ಥಿಗಳು ಕೇಳಿರುವ ಸಮಸ್ಯೆಗಳ ಪಟ್ಟಿಯನ್ನು ಮತ್ತು ಅದಕ್ಕೆ ಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿ ವಿದ್ಯಾರ್ಥಿಗಳಿಗೂ ಸಹ ಭರವಸೆ ತುಂಬಿ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪ ನಾಗ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕೆ ಟಿ ಕವಿತಾ ಮತ್ತು ಜಿಲ್ಲಾ ಪಂಚಾಯತಿ ಸಿಇಓ ಮೋನರೋತ್ ತಾಲೂಕು ದಂಡಾಧಿಕಾರಿ ಸೇರಿದಂತೆ ಮಹಿಳಾ ಅಧಿಕಾರಿಗಳ ಹೆಚ್ಚಾಗಿ ಮುಂಚೋಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ವಿದ್ಯಾರ್ಥಿಗಳು ಸಹ ಇದೇ ರೀತಿಯಲ್ಲಿಯೇ ಓದಿನ ಕಡೆ ಗಮನ ಹರಿಸಿ ಉತ್ತಮ ರೀತಿಯಲ್ಲಿ ತೇರ್ಗಡೆಯಾಗುವ ಮೂಲಕ ಸರ್ಕಾರದ ಸವಲತ್ತು ಪಡೆದು ಸದ್ಬಳಕೆ ಮಾಡಿಕೊಳ್ಳಿ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋನಾ ರೋತ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ರಾಚಯ್ಯ,ಬಿ ಇ ಓ ಮಹೇಶ್ ಚಾಮುಲ್ ನಿರ್ದೇಶಕರಾದ ಮಹದೇವ ಪ್ರಸಾದ್,ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟೇಶ್, ಪಶ್ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಸಿದ್ದರಾಜು,ಕಾರ್ಯನಿರ್ವಹಣಾಧಿಕಾರಿ ಉಮೇಶ್,ಮಣ್ಣಗಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು,ಪ್ರೌಢ ಶಾಲೆಯ ಸ್ಥಳದ ದಾನಿಗಳಾದ ರಾಜು,ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ನಾಗರಿಕರು ಉಪಸ್ಥಿತರಿದ್ದರು.

ವರದಿ :ವಿಜಯ್ ಕುಮಾರ್. ಕಾಂಚಳ್ಳಿ /ಹನೂರು.

Spread the love

Related post

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು… ನಂಜನಗೂಡು,ಏ9,Tv10 ಕನ್ನಡ…
ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್.

ಮೈಸೂರು ನ್ಯಾಯಾಲಯದಲ್ಲಿ ಪ್ರಕರಣ: ಡಿಸಿ ಬಂಧನ ನೋಟಿಸ್ ಹಿಂಪಡೆದ ಕೋರ್ಟ್. ಮೈಸೂರು, ಏಪ್ರಿಲ್ 8: ಮೈಸೂರು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಕ್ಸ್‌ಕ್ಯೂಷನ್ ಕೇಸ್…
ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕ…ಕೆಎಂಪಿಕೆ ಟ್ರಸ್ಟ್ ನಿಂದ ಸನ್ಮಾನ..

ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ…

ಅಮೆರಿಕದ ವಿವಿ ಉಪಕುಲಪತಿಯಾಗಿ ಯೋಗ ಗುರು ಡಾಕ್ಟರ್ ಕೆ ರಾಘವೇಂದ್ರ ಪೈ ನೇಮಕ…ಕೆಎಂಪಿಕೆ ಟ್ರಸ್ಟ್ ನಿಂದ ಸನ್ಮಾನ.. ಮೈಸೂರು,ಏ8,Tv10 ಕನ್ನಡ ಖ್ಯಾತ ಯೋಗ ಗುರು ಡಾಕ್ಟರ್ ರಾಘವೇಂದ್ರ ಪೈ…

Leave a Reply

Your email address will not be published. Required fields are marked *