ಹನೂರು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದೇವರಾಜ್ ನಾಯ್ಡು, ಕಾರ್ಯದರ್ಶಿಯಾಗಿ ಪ್ರಭುಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಹನೂರು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದೇವರಾಜ್ ನಾಯ್ಡು, ಕಾರ್ಯದರ್ಶಿಯಾಗಿ ಪ್ರಭುಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಹನೂರು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದೇವರಾಜ್ ನಾಯ್ಡು, ಕಾರ್ಯದರ್ಶಿಯಾಗಿ ಪ್ರಭುಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಹನೂರು, Tv10 ಕನ್ನಡ
26/12/2025

ಹನೂರು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿ. ದೇವರಾಜು ನಾಯ್ಡು,ಪ್ರಧಾನ ಕಾರ್ಯದರ್ಶಿಯಾಗಿ ಪ್ರಭುಸ್ವಾಮಿ ಅವಿರೋಧ ಆಯ್ಕೆಯಾದರು.

ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೇ ಸಾಲಿಗೆ ನಡೆದ ಚುನಾವಣೆಗೆ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಎರಡು ಉಪಾಧ್ಯಕ್ಷ ಎರಡು ಕಾರ್ಯದರ್ಶಿ ಖಜಾಂಚಿ ಸ್ಥಾನಕ್ಕೆ, ಮೂರು ನಿರ್ದೇಶಕ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಸ್ಪರ್ಧೆ ಮಾಡಿದ್ದ ಎಲ್ಲರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಹಿರಿಯ ಪತ್ರಕರ್ತ ಹಾಗೂ ಸಂಘದ ಮಾಜಿ ಅಧ್ಯಕ್ಷ ಎಂ.ಇ ಮಂಜುನಾಥ್, ಸಹಾಯಕ ಚುನಾವಣೆ ಅಧಿಕಾರಿಗಳಾಗಿ ರಾಜ್ಯ ಪರಿಷತ್ ಸದಸ್ಯ ಮಹೇಂದ್ರ, ಜಿಲ್ಲಾ ಕಾರ್ಯಕಾರಿ ಸದಸ್ಯ ಎಂಎನ್ ವಿಜಯಕುಮಾರ್ ಕರ್ತವ್ಯ ನಿರ್ವಹಿಸಿದರು.

ಅಧ್ಯಕ್ಷರಾಗಿ ಜಿ ದೇವರಾಜು ನಾಯ್ಡು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಸ್ವಾಮಿ ಎಂ, ಉಪಾಧ್ಯಕ್ಷರಾಗಿ ಗೋವಿಂದ ಕೆ ರಮೇಶ್ ಎಂ ಕಾರ್ಯದರ್ಶಿಯಾಗಿ ಮಧು, ಶಾಗ್ಯ ನಂದೀಶ್ ಖಜಾಂಚಿಯಾಗಿ ಸೋಮಶೇಖರ್ ಆರ್, ನಿರ್ದೇಶಕರಾಗಿ ಮಹದೇವ ಪ್ರಸಾದ್ ಬಿ ಬಸವರಾಜು ಮಹದೇವಸ್ವಾಮಿ ಸಿ ಅವಿರೋಧ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷ ಮಹಾದೇಶ್ ಮಾತನಾಡಿ ಹನೂರು ತಾಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಶ್ರಮವಹಿಸಲಾಗಿದೆ. ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ತಾಲೂಕು ಕಾರ್ಯ ನಿರ್ವಹಿತ ಪತ್ರಕರ್ತರ ಭವನಕ್ಕೆ 10 ಸೆಂಟ್ ನಿವೇಶನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಅನುದಾನದ ಕೊರತೆಯಿಂದ ಕಾಮಗಾರಿ ಕಳೆದ ಒಂದು ವರ್ಷದಿಂದ ಸ್ಥಗಿತವಾಗಿದೆ ಈಗಾಗಲೇ ಸಂಸದರು ಶಾಸಕರಿಗೆ ಮುಂದುವರೆದ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ನೀಡಲಾಗಿದೆ. ಶಾಸಕರು ಸಂಸದರು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ಮುಂದಿನ ತಿಂಗಳು ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಲು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ನೂತನ ಅಧ್ಯಕ್ಷ ದೇವರಾಜು ನಾಯ್ಡು ಮಾತನಾಡಿ ನನ್ನ ಮೇಲೆ ವಿಶ್ವಾಸವಿಟ್ಟು ನಮ್ಮ ಸಂಘದ ಎಲ್ಲಾ ಸದಸ್ಯರು ನನ್ನನ್ನು ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಈಗಾಗಲೇ ಒಂದು ಅವಧಿಗೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ ಮುಂದುವರೆದು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನ ನಿರ್ಮಾಣ ಪೂರ್ಣಗೊಳಿಸುವುದರ ಜೊತೆಗೆ ನಮ್ಮ ಸದಸ್ಯರಿಗೆ ಶಾಸಕರು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದು ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜಿಲ್ಲಾಧ್ಯಕ್ಷರಿಂದ ಅಭಿನಂದನೆ : ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜಿ ದೇವರಾಜ ನಾಯ್ಡು, ಪ್ರಧಾನ ಕಾರ್ಯದರ್ಶಿ ಎಂ ಪ್ರಭುಸ್ವಾಮಿ ರವರನ್ನು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಗೌರವಿಸಿ ಸನ್ಮಾನಿಸಿದರು.

ನಂತರ ಜಿಲ್ಲಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿ ಹನೂರು ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ಜಿಲ್ಲಾ ಸಂಘ ಬೆಂಬಲವಾಗಿ ನಿಲ್ಲಲಿದೆ, ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಪಟ್ಟ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರ ಜೊತೆ ಚರ್ಚೆ ನಡೆಸಿ ನಿಮಗೆ ಅನುದಾನ ಕೊಡಿಸುವುದರ ಜೊತೆಗೆ ಭವನ ಪೂರ್ಣಗೊಳಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಈ ವೇಳೆ ಸದಸ್ಯರುಗಳಾದ ಸುರೇಶ್,ಮಂಗಲ ಲಿಂಗರಾಜು,ಮಹದೇವಸ್ವಾಮಿ, ರಾಜೇಶ್, ನಿರಂಜನ್,ಶಿವಕುಮಾರ್, ಲಿಂಗರಾಜು,ವಿಜಯ್ ಕುಮಾರ್,ನಾಗೇಂದ್ರ,ಮಹಾದೇವ ಶಿವಶಂಕರ್,ರವಿ, ಪ್ರದೀಪ್, ಅಭಿಲಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ :ವಿಜಯಕುಮಾರ್. ಕಾಂಚಳ್ಳಿ /ಹನೂರು

Spread the love

Related post

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ…

ಎಂಎಲ್ಸಿ ವಿಶ್ವನಾಥ್ ವಿರುದ್ದ FIR…ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ…55 ಲಕ್ಷ ಹಿಂದಿರುಗಿಸದ ಆರೋಪ… ಮೈಸೂರು,ಮೇ20,Tv10 ಕನ್ನಡ ಸಾಲದ ಹಣ ವಾಪಸ್ ಕೇಳಲು ಹೋದ…
ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ…

ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ..ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ… ಮಂಡ್ಯ,ಮೇ20,Tv10 ಕನ್ನಡ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ.ಮಾರಕಾಸ್ತ್ರಗಳಿಂದ ಯುವಕನನ್ನ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು…
ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ… ಶ್ರೀರಂಗಪಟ್ಟಣ,ಮೇ19,Tv10 ಕನ್ನಡ ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಡಳಿತದ ಸಮರ ಸಾರಿದೆ.ನಿಷೇಧದ ನಡುವೆಯೂ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ…

Leave a Reply

Your email address will not be published. Required fields are marked *