ಗನ್ ತೋರಿಸಿ ರಾಬರಿ…ಸಿನಮೀಯ ಶೈಲಿಯಲ್ಲಿ ಕೃತ್ಯ…5 ಮಂದಿ ತಂಡದಿಂದ ದರೋಡೆ…ಹಾಡುಹಗಲೇ ದರೋಡೆಕೋರರ ಕೈಚಳಕ…ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ…5 ಕಜಿ ಚಿನ್ನಾಭರಣ ಲೂಟಿ…

ಗನ್ ತೋರಿಸಿ ರಾಬರಿ…ಸಿನಮೀಯ ಶೈಲಿಯಲ್ಲಿ ಕೃತ್ಯ…5 ಮಂದಿ ತಂಡದಿಂದ ದರೋಡೆ…ಹಾಡುಹಗಲೇ ದರೋಡೆಕೋರರ ಕೈಚಳಕ…ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ…5 ಕಜಿ ಚಿನ್ನಾಭರಣ ಲೂಟಿ…

ಗನ್ ತೋರಿಸಿ ರಾಬರಿ…ಸಿನಮೀಯ ಶೈಲಿಯಲ್ಲಿ ಕೃತ್ಯ…5 ಮಂದಿ ತಂಡದಿಂದ ದರೋಡೆ…ಹಾಡುಹಗಲೇ ದರೋಡೆಕೋರರ ಕೈಚಳಕ…ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ…5 ಕಜಿ ಚಿನ್ನಾಭರಣ ಲೂಟಿ…

ಹುಣಸೂರು,ಡಿ28,Tv10 ಕನ್ನಡ

5 ಮಂದಿ ಗ್ಯಾಂಗ್ ನಿಂದ ಹಾಡುಹಗಲೇ ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ.ಮುಸುಕುಧಾರಿಗಳಾಗಿ ಬಂದ ದುಷ್ಕರ್ಮಿಗಳು ಸಿಬ್ಬಂದಿಗಳಿಗೆ ಗನ್ ತೋರಿಸಿ ಬೆದರಿಸಿ ಸುಮಾರು 5 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಇಂದು ಮಧ್ಯಾಹ್ನ ಸುಮಾರು 1.30 ರ ಸಮಯದಲ್ಲಿ ಘಟನೆ ನಡೆದಿದೆ.ಸ್ಕೈಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಂ ನಲ್ಲಿ ಘಟನೆ ನಡೆದಿದೆ.ಸುಮಾರು 10 ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನುಗ್ಗಿದ 5 ಮಂದಿ ಗನ್ ತೋರಿಸಿದ್ದಾರೆ.5 ಮಂದಿ ಪೈಕಿ ನಾಲ್ವರು ಮುಸುಕು ಧರಿಸಿದ್ದಾರೆ.ಓರ್ವ ಗ್ಯಾಂಗ್ ಲೀಡರ್ ಎರಡು ಕೈಗಳಲ್ಲೂ ಗನ್ ಹಿಡಿದು ಸಿನಮೀಯ ಶೈಲಿಯಲ್ಲಿ ಬೆದರಿಕೆ ಹಾಕಿದ್ದಾನೆ.ಕೆಲವೇ ನಿಮಿಷದಲ್ಲಿ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.ಎರಡು ಬೈಕ್ ಗಳಲ್ಲಿ ಬಂದ ಗ್ಯಾಂಗ್ ಕೈಚಳಕ ತೋರಿಸಿದೆ.ದರೋಡೆಕೋರರನ್ನ ಸಿಬ್ಬಂದಿಗಳು ಹಿಂಬಾಲಿಸಿದ್ದಾರೆ.ಆದ್ರೆ ದುಷ್ಕರ್ಮಿಗಳನ್ನ ಹಿಡಿಯಲು ಸಾಧ್ಯವಾಗಿಲ್ಲ.ರಾಬರಿ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸುಮಾರು 5 ಕೆಜಿ ಚಿನ್ನಾಭರಣ ದೋಚಿರುವುದಾಗಿ ಮಾಹಿತಿ ಬಂದಿದೆ.ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *