MDA ದಿಂದ ಹೊಸ ಬಡಾವಣೆ…50-50 ಅನುಪಾತದಲ್ಲಿ ಜಮೀನು ಸ್ವಾಧೀನಕ್ಕೆ ಸಜ್ಜು…ಭೂಮಾಲೀಕರ ಒಪ್ಪಿಗೆಗೆ ಆಹ್ವಾನ…

MDA ದಿಂದ ಹೊಸ ಬಡಾವಣೆ…50-50 ಅನುಪಾತದಲ್ಲಿ ಜಮೀನು ಸ್ವಾಧೀನಕ್ಕೆ ಸಜ್ಜು…ಭೂಮಾಲೀಕರ ಒಪ್ಪಿಗೆಗೆ ಆಹ್ವಾನ…

MDA ದಿಂದ ಹೊಸ ಬಡಾವಣೆ…50-50 ಅನುಪಾತದಲ್ಲಿ ಜಮೀನು ಸ್ವಾಧೀನಕ್ಕೆ ಸಜ್ಜು…ಭೂಮಾಲೀಕರ ಒಪ್ಪಿಗೆಗೆ ಆಹ್ವಾನ…

ಮೈಸೂರು,ಡಿ30,Tv10 ಕನ್ನಡ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನೂತನ ಬಡಾವಣೆ ನಿರ್ಮಾಣಕ್ಕೆ ಪ್ರಕ್ರಿಯೆ ಆರಂಭವಾಗಿದೆ.ನೂತನ ಬಡಾವಣೆಗಾಗಿ ಜಮೀನುಗಳನ್ನ ಗುರುತಿಸಲಾಗಿದ್ದು ಶೇ 50-50 ಅನುಪಾತದಲ್ಲಿ ರಚಿಸಲು ಪ್ರಾಧಿಕಾರ ಸಜ್ಜಾಗುತ್ತಿದೆ.ಗುರುತಿಸಲಾದ ಜಮೀನು ಮಾಲೀಕರ ಒಪ್ಪಿಗೆ ಪಡೆಯಲು ಆಯುಕ್ತ ಕೆ.ಆರ್.ರಕ್ಷಿತ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.ಮೈಸೂರು ತಾಲೂಕು ಇಲವಾಲ ಹೋಬಳಿಯ ನಾಗವಾಲ ಗ್ರಾಮ,ಬೊಮ್ಮೇನಹಳ್ಳಿ ಗ್ರಾಮ,ಕಮರವಳ್ಳಿ ಗ್ರಾಮ ಹಾಗೂ ದೊಡ್ಡಮಾರಗೌಡನಹಳ್ಳಿ ಗ್ರಾಮದ ಜಮೀನುಗಳನ್ನ ಗುರುತಿಸಲಾಗಿದೆ.ಶೇ 50-50 ಅನುಪಾತದಲ್ಲಿ ಬಡಾವಣೆ ನಿರ್ಮಿಸಲು ಉದ್ದೇಶಿಸಿದ್ದು ಭೂ ಮಾಲೀಕರ ಒಪ್ಪಿಗೆಗಾಗಿ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.ರಸ್ತೆ,ಪಾರ್ಕ್,ಸಿಎ ನಿವೇಶನ ಕಳೆದು ಉಳಿದ ಜಾಗದಲ್ಲಿ ನಿವೇಶನಗಳನ್ನ ಅಭಿವೃದ್ದಿ ಪಡಿಸಿ ಶೇ 50 ರಷ್ಟು ಭೂ ಮಾಲೀಕರಿಗೆ ಹಿಂದಿರುಗಿಸಲಾಗುವ ಯೋಜನೆ ಇದಾಗಿದೆ.ಇದರಲ್ಲಿ ಭೂ ಮಾಲೀಕರು ಯಾವುದೇ ವೆಚ್ಚ ಭರಿಸುವಂತಿಲ್ಲ.ಡಾಂಬರ್ ರಸ್ತೆ,ವಿದ್ಯುತ್ ಸಂಪರ್ಕ,ಚರಂಡಿ,ಉದ್ಯಾನವನ,ಯುಜಿಡಿ,ನೀರು ಸರಬರಾಜು ವ್ಯವಸ್ಥೆ ಒಳಗೊಂಡಂತೆ ಸಂಪೂರ್ಣ ಅಭಿವೃದ್ದಿಪಡಿಸುವ ಜವಾಬ್ದಾರಿ ಪ್ರಾಧಿಕಾರದ್ದೇ ಆಗಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.ಭೂ ಮಾಲೀಕರು ಒಪ್ಪಿಗೆ ನೀಡಲು ಪ್ರಾಧಿಕಾರಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಗುರುತಿಸಲಾದ ಜಮೀನುಗಳ ಸರ್ವೆ ನಂ ಗಳನ್ನೂ ಸಹ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ…

Spread the love

Related post

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…
ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ

ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ

ಕ್ಯಾಪ್ಟನ್ ಅಭಿಮನ್ಯುವಿಗೆ ರಾಜೋಚಿತ ಬೀಳ್ಕೊಡುಗೆ ನೀಡಿ…ಸಚಿವ ಈಶ್ವರ ಖಂಡ್ರೆ ಬೆಂಗಳೂರು,ಆ19,Tv10 ಕನ್ನಡ ಆರು ಬಾರಿ ಚಿನ್ನದ ಅಂಬಾರಿ ಹೊತ್ತಿರುವ 60 ವರ್ಷದ ಕ್ಯಾಪ್ಟನ್ ಅಭಿಮನ್ಯುವಿಗೆ ಈ ಬಾರಿಯ ಮೈಸೂರು…

Leave a Reply

Your email address will not be published. Required fields are marked *