ಮೈಸೂರು: ರಾಷ್ಟ್ರಮಟ್ಟದ ಟ್ರೆಡಿಷನಲ್ ಫ್ಯಾಷನ್ ಶೋ ‘ಫ್ಯೂಚರ್ ಮಾಡಲ್ ಆಫ್ ಇಂಡಿಯಾ’ ಸೀಸನ್–6 ಯಶಸ್ವಿ
- TV10 Kannada Exclusive
- January 6, 2026
- No Comment
- 214

ಮೈಸೂರು: ರಾಷ್ಟ್ರಮಟ್ಟದ ಟ್ರೆಡಿಷನಲ್ ಫ್ಯಾಷನ್ ಶೋ ‘ಫ್ಯೂಚರ್ ಮಾಡಲ್ ಆಫ್ ಇಂಡಿಯಾ’ ಸೀಸನ್–6 ಯಶಸ್ವಿ
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು ಆವರಣದಲ್ಲಿರುವ ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ತಿಬ್ಬಾಸ್ ಗ್ರೂಪ್ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ ರಾಷ್ಟ್ರಮಟ್ಟದ ಟ್ರೆಡಿಷನಲ್ ಫ್ಯಾಷನ್ ಶೋ ‘ಫ್ಯೂಚರ್ ಮಾಡಲ್ ಆಫ್ ಇಂಡಿಯಾ – ಸೀಸನ್ 6’ ವೈಭವದಿಂದ ನಡೆಯಿತು.
ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿಯ ಸಂಸ್ಥಾಪಕರಾದ ಮಾಡೆಲ್ ನಾಗೇಶ್ ಡಿ.ಸಿ. ಅವರು, ಮಾಡೆಲಿಂಗ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ಹಾಗೂ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಗಳ ಮಹತ್ವವನ್ನು ಫ್ಯಾಷನ್ ಲೋಕಕ್ಕೆ ಪರಿಚಯಿಸುವ ಸಂಕಲ್ಪದೊಂದಿಗೆ ಈ ಫ್ಯಾಷನ್ ಶೋವನ್ನು ಆಯೋಜಿಸಿದ್ದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡುವ ಮೂಲಕ ಇನ್ನಷ್ಟು ಶಕ್ತಿ ತುಂಬಿತು.
ಈ ಫ್ಯಾಷನ್ ಶೋದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ದೇಶದ ಹಲವು ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಉಡುಗೆಗಳಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಸ್ಪರ್ಧಿಗಳು ಪ್ರೇಕ್ಷಕರ ಗಮನ ಸೆಳೆದರು. ಭಾಗವಹಿಸಿದ್ದ ಪ್ರತಿಯೊಬ್ಬ ಸ್ಪರ್ಧಿಗೂ ಪ್ರಮಾಣಪತ್ರ, ಟ್ರೋಫಿ, ಸ್ಯಾಶ್, ಕ್ರೌನ್ ಹಾಗೂ ವಿವಿಧ ಸಬ್ ಟೈಟಲ್‌ಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ತೀರ್ಪುಗಾರರಾಗಿ ಮಾಡೆಲ್ ನಾಗೇಶ್ ಡಿ.ಸಿ., ಮಾಡೆಲ್ ವೇದಶ್ರೀ ಹಾಗೂ ಮಾಡೆಲ್ ಭವನ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷ ಮಲ್ಲಿಕಾರ್ಜುನ, ಸಿಇಒ ರುದ್ರೇಶ್, ಕಾರ್ಯಾಧ್ಯಕ್ಷ ಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷ ರಘುರಾಜ್ ಅರಸ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿರೂಪಣೆಯನ್ನು ಶಿವಾನಿ ವೇದ ಅವರು ಸಮರ್ಥವಾಗಿ ನಿರ್ವಹಿಸಿದರು.
ಫ್ಯೂಚರ್ ಮಾಡಲ್ ಆಫ್ ಇಂಡಿಯಾ – ಸೀಸನ್ 6ರ ವಿಜೇತರು ಈ ಕೆಳಗಿನಂತಿದ್ದಾರೆ:
ಲಿಟಲ್ ಪ್ರಿನ್ಸ್ – ಅಭ್ಯಂತ್ ಜಿ. (ಬೆಂಗಳೂರು)
ಲಿಟಲ್ ಪ್ರಿನ್ಸಸ್ – ಹೂವಿಷ್ಕ (ಮೈಸೂರು)
ಪ್ರಿನ್ಸ್ – ಉತ್ತಮ್ (ಮೈಸೂರು)
ಪ್ರಿನ್ಸಸ್ – ಸಮನ್ವಿತ (ಬೆಂಗಳೂರು)
ಮಿಸ್ ಟೀನ್ – ಸಾಯಿ ಅನ್ವಿತ (ಮೈಸೂರು)
ಮಿಸ್ – ಪ್ರಿಯಾಂಕ (ಶಿವಮೊಗ್ಗ)
ಮಿಸ್ಟರ್ – ಮಧುಕುಮಾರ್ (ಬೆಂಗಳೂರು)
ಮಿಸ್ಸಸ್ – ಹರ್ಷಿತ (ಮೈಸೂರು)
ಸಾಂಪ್ರದಾಯಿಕ ಉಡುಗೆಗಳಿಗೆ ಆಧುನಿಕ ಸ್ಪರ್ಶ ನೀಡಿದ ಈ ರಾಷ್ಟ್ರಮಟ್ಟದ ಫ್ಯಾಷನ್ ಶೋ, ಯುವ ಪ್ರತಿಭೆಗಳಿಗೆ ವೇದಿಕೆಯಾಗಿದ್ದು, ಭಾರತೀಯ ಸಂಸ್ಕೃತಿಯ ವೈಭವವನ್ನು ಮತ್ತೆ ಮೆರೆದಿತು.