ಮುಡಾ(MDA)ಮತ್ತೊಂದು ಎಡವಟ್ಟು…ಮಾಸಿಕ 265/- ಕ್ಕೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ…ಮುಡಾ ಕಟ್ಟಡದ ಮೇಲೆ ಸ್ಥಾಪನೆ…ಬಾಡಿಗೆಯನ್ನೂ ವಸೂಲಿ ಮಾಡದ ಮುಡಾ…ಬೆಳಕಿಗೆ ಬಂದ ಭಾರಿ ಗೋಲ್ ಮಾಲ್…

ಮುಡಾ(MDA)ಮತ್ತೊಂದು ಎಡವಟ್ಟು…ಮಾಸಿಕ 265/- ಕ್ಕೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ…ಮುಡಾ ಕಟ್ಟಡದ ಮೇಲೆ ಸ್ಥಾಪನೆ…ಬಾಡಿಗೆಯನ್ನೂ ವಸೂಲಿ ಮಾಡದ ಮುಡಾ…ಬೆಳಕಿಗೆ ಬಂದ ಭಾರಿ ಗೋಲ್ ಮಾಲ್…

ಮುಡಾ(MDA)ಮತ್ತೊಂದು ಎಡವಟ್ಟು…ಮಾಸಿಕ 265/- ಕ್ಕೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ…ಮುಡಾ ಕಟ್ಟಡದ ಮೇಲೆ ಸ್ಥಾಪನೆ…ಬಾಡಿಗೆಯನ್ನೂ ವಸೂಲಿ ಮಾಡದ ಮುಡಾ…ಬೆಳಕಿಗೆ ಬಂದ ಭಾರಿ ಗೋಲ್ ಮಾಲ್…

ಮೈಸೂರು,ಮಾ26,Tv10 ಕನ್ನಡ

ಮುಡಾ(MDA) ಮತ್ತೊಂದು ಎಡವಟ್ಟು ಮಾಡಿದೆ.ಈಗಾಗಲೇ 50-50 ಅನುಪಾತ ಯೋಜನೆಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿರುವ ಮುಡಾ(MDA) ಇದೀಗ ಮತ್ತೊಂದು ಗೋಲ್ ಮಾಲ್ ಸುಳಿಗೆ ಸಿಲುಕಿದೆ.ವಿಜಯನಗರ ಮೊದಲನೇ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದ ಮೇಲೆ ಮೊಬೈಲ್ ಟವರ್ ಅಳವಡಿಸಲು ಅನುಮತಿ ನೀಡಿದೆ.ಬಾಡಿಗೆ ತಿಂಗಳಿಗೆ ಕೇವಲ 265/- ರೂ ನಿಗದಿ ಪಡಿಸಿ ಖಾಸಗಿ ಸಂಸ್ಥೆಯೊಂದಕ್ಕೆ ಅನುಮತಿ ನೀಡಿದೆ.ಈ ಸಂಬಂಧ ಯಾವುದೇ ಒಪ್ಪಂದವಾಗಲಿ ಅಥವಾ ದಾಖಲೆಗಳಾಗಲಿ ಮುಡಾ(MDA) ದಲ್ಲಿ ಲಭ್ಯವಿಲ್ಲ.ಕೇವಲ ಒಂದು ಮನವಿ ಪತ್ರಕ್ಕೆ ಸ್ಪಂದಿಸಿದ ಅಂದಿನ ಆಯುಕ್ತ ದಿನೇಶ್ ಕುಮಾರ್ ಯಾವುದೇ ಷರತ್ತುಗಳನ್ನ ವಿಧಿಸದೆ ಮಾಸಿಕ ಬಾಡಿಗೆ 265/- ರೂಗಳನ್ನ ಫಿಕ್ಸ್ ಮಾಡಿ ಕೊಟ್ಟಿದ್ದಾರೆ.ಖಾಸಗಿ ಸ್ಥಳದಲ್ಲಿ ಟವರ್ ಗಳನ್ನ ಅಳವಡಿಸಲು ತಿಂಗಳಿಗೆ ಸಾವಿರಾರು ರೂಗಳನ್ನ ಭರಿಸುವ ಖಾಸಗಿ ಸಂಸ್ಥೆಗೆ ಕೇವಲ 265/- ರೂಗೆ ನೀಡಿರುವುದ ಭಾರಿ ಅನುಮಾನಕ್ಕೆ ಕಾರಣವಾಗಿದೆ.ಈಗಾಗಲೇ ಅನುಮತಿ ನೀಡಿ ಎರಡು ವರ್ಷವಾಗಿದೆ.2024 ರಲ್ಲಿ 10 ವರ್ಷದ ಅವಧಿಗೆ ಅನುಮತಿ ನೀಡಲಾಗಿದೆ.ಸಾರ್ವಜನಿಕರು ಇಂಟರ್ನೆಟ್ ಬಳಸಲು ಹಾಗೂ ಡಾಟಾ ಯೂಸೇಜ್ ಕಾರಣ ಹಿನ್ನಲೆ ಅನುಮತಿ ನೀಡಿದ್ದಾರೆ.ಸಧ್ಯ 265/- ರೂ ಸಹ ಮುಡಾ(MDA) ವಸೂಲಿ ಮಾಡುತ್ತಿಲ್ಲ.ಸಂಸ್ಥೆಯೂ ಸಹ ಬಾಡಿಗೆ ಪಾವತಿಸಿಲ್ಲ.ಈ ಸಂಬಂಧ ಎಂಡಿಎ ನಲ್ಲಿ ಜಾಲಾಡಿದ್ರೂ ಯಾವುದೇ ದಾಖಲೆಗಳು ಲಭ್ಯವಿಲ್ಲ.ನಿಯಮಗಳನ್ನ ಪಾಲಿಸದೆ ಹೀಗೆ ಅನುಮತಿ ನೀಡಿದ ಹಿಂದಿರುವ ಮಸಲತ್ತು ಏನು ಎಂಬ ಪ್ರಶ್ನೆ ಉದ್ಭವವಾಗಿದೆ.ಈಗಾಗಲೇ 50-50 ಅನುಪಾತದ ವಿಚಾರದಲ್ಲಿ ಭಾರಿ ಹಗರಣದಲ್ಲಿ ಸಿಲುಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಎಂಡಿಎ ನಲ್ಲಿ ಎಡವಟ್ಟು ಗೋಲ್ ಮಾಲ್ ಗಳು ಬೆಳಕಿಗೆ ಬರುತ್ತಲೇ ಇವೆ.ಲಕ್ಷಾಂತರ ವರಮಾನ ಬರುವ ಸ್ಥಳದಲ್ಲಿ ಪುಡಿಗಾಸಿಗೆ ಅನುಮತಿ ನೀಡಿರುವ ಉದ್ದೇಶ ಭಾರಿ ಅನುಮಾನಕ್ಕೆ ಕಾರಣವಾಗಿದೆ.ಈ ಸಂಬಂಧ ಇಂದಿನ ಆಯುಕ್ತ ಕೆ.ಆರ್.ರಕ್ಷಿತ್ ರವರ ಗಮನಕ್ಕೆ ತಂದಾಗ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ.ಸಾರ್ವಜನಿಕರ ತೆರಿಗೆ ಹಣ ದುರುಪಯೋಗಪಡಿಸುವ ಅಧಿಕಾರಿಗಳ ಕಿವಿ ಹಿಂಡಬೇಕಿದೆ.ಕೂಡಲೇ ಅನುಮತಿಯನ್ನ ರದ್ದುಪಡಿಸಿ ಕ್ರಮಬದ್ದವಾಗಿ ಎಂಡಿಎ ನಿಯಮ ಪಾಲಿಸಲಿ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *