ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್ ಠಾಣೆಯಲ್ಲಿ FIR
- Crime
- March 28, 2026
- No Comment
- 52
ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್ ಠಾಣೆಯಲ್ಲಿ FIR
ಮೈಸೂರು,ಮಾ28,,Tv10 ಕನ್ನಡ
ಗೃಹಿಣಿಯ ಫೋಟೋ ಎಡಿಟ್ ಮಾಡಿ ಬೇರೆ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕ್ರಿಯೇಟ್ ಮಾಡಿ ವಾಟ್ಸಾಪ್ ನಲ್ಲಿ ಕಳಿಸಿ ಅಪಪ್ರಚಾರ ಮಾಡಿದ ವ್ಯಕ್ತಿ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ಜನತಾನಗರದ ನೊಂದ ಗೃಹಿಣಿ ಪ್ರಕರಣ ದಾಖಲಿಸಿದ್ದಾರೆ.ಮೂರು ದಿನಗಳ ಹಿಂದೆ ಗೃಹಿಣಿಗೆ ಪರಿಚಯ ಇರುವ ಪ್ರಜ್ವಲ್ ಎಂಬುವರ ವಾಟ್ಸಾಪ್ ಗೆ ಫೋಟೋ ಬಂದಿದೆ.ಬೇರೆ ವ್ಯಕ್ತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಫೋಟೋ ಕ್ರಿಯೇಟ್ ಮಾಡಿ ಕಿರಾತಕ ಪ್ರಜ್ವಲ್ ಗೆ ಕಳುಹಿಸಿದ್ದಾನೆ.ಪ್ರಜ್ವಲ್ ಗೃಹಿಣಿಗೆ ಎಡಿಟ್ ಮಾಡಿದ ಫೋಟೋ ತೋರಿಸಿದ್ದಾನೆ.ಉದ್ದೇಶ ಪೂರ್ವಕವಾಗಿ ಮಾನಹಾನಿಗೆ ಧಕ್ಕೆ ತರುತ್ತಿರುವ ವ್ಯಕ್ತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…