ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳದಂಧೆಯ ಮತ್ತೊಂದು ಮುಖ ಬಯಲು…

ಯುವಕನ ಕಿಡ್ನಾಪ್…ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್…ಸೆಕ್ಸ್ ವರ್ಕ್ ಗೆಯೂಸ್…ಕರಾಳ
ದಂಧೆಯ ಮತ್ತೊಂದು ಮುಖ ಬಯಲು…

ನಂಜನಗೂಡು,ಏ12,Tv10 ಕನ್ನಡ

ಯುವಕನೊಬ್ಬನನ್ನ ಕಿಡ್ನಾಪ್ ಮಾಡಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ ಸೆಕ್ಸ್ ವರ್ಕ್,ರೀಲ್ಸ್ ಗಳಲ್ಲಿ ಬಳಸಿ,ಲಕ್ಷಾಂತರ ಹಣ ಗಳಿಸಿ ಬಲವಂತವಾಗಿ ಲಿಂಗ ಬದಲಾವಣೆಗೆ ನಡೆಸಿದ ಹುನ್ನಾರಕ್ಕೆ ಬೇಸತ್ತು ಖದೀಮರ ಕಪಿಮುಷ್ಠಿಯಿಂದ ಹೊರಬಂದ ಯುವಕನಿಗೆ ವಾಪಸ್ ದಂಧೆಗೆ ಬರುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.ಮಂಗಳಮುಖಿಯ ಕಿರುಕುಳಕ್ಕೆ ಬೇಸತ್ತ ಯುವಕ ನ್ಯಾಯಕ್ಕಾಗಿ ಮೈಸೂರು ಪೊಲೀಸರ ಮೊರೆ ಹೋಗಿದ್ದಾನೆ.ಮತ್ತೆ ಕರಾಳ ದಂಧೆಗೆ ತೊಡಗಿಸಲು ಹುನ್ನಾರ ನಡೆಸುತ್ತಿರುವ ಮಂಗಳಮುಖಿ ವಿರುದ್ದ ಯುವಕ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿದ್ದಾನೆ.

ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್ ಕುಮಾರ್ @ಅಕ್ಷತಾ ನೊಂದ ಯುವಕ.ಮಂಗಳೂರು ಮೂಲದ ಅನಿತಾ ಆರೋಪ ಹೊತ್ತ ಮಂಗಳಮುಖಿ.

ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಅನಿಲ್ ಕುಮಾರ್ ಬಸ್ ಗಾಗಿ ಕಾಯುತ್ತಿದ್ದಾಗ ಮಂಗಳಮುಖಿ ಅನಿತಾ ಮತ್ತು ತಂಡ ಅನಿಲ್ ಕುಮಾರ್ ಗೆ ಮುಸುಕು ಹಾಕಿ ಮತ್ತು ಬರುವಂತೆ ಮಾಡಿ ಬಲವಂತವಾಗಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ದಿದ್ದಾರೆ.ಸೀರೆ,ನೈಟಿ,ಕಿವಿಗೆ ಓಲೆ,ಮೂಗಿಗೆ ಬಟ್ಟು ಹಾಕಿಸಿ ಅನಿಲ್ ಕುಮಾರ್ ಗೆ ಮಂಗಳಮುಖಿಯಾಗಿ ವೇಷ ಹಾಕಿ ಬಲವಂತವಾಗಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಕಲೆಕ್ಷನ್ ಮಾಡಿಸಿದ್ದಾರೆ.ಪ್ರತಿದಿನ 2 ರಿಂದ 3 ಸಾವಿರ ಕಲೆಕ್ಷನ್ ಮಾಡಿಸಿದ್ದಾರೆ.ರೀಲ್ಸ್ ಗಳನ್ನ ತಯಾರಿಸಿ ಸಾಮಾಜಿಕ ಜಾಲತಾಣದಲ್ಲೂ ಅಪ್ ಲೋಡ್ ಮಾಡಿದ್ದಾರೆ.ಅಲ್ಲದೆ ಮಂಗಳೂರು,ಕೇರಳಾ ಭಾಗಗಳಿಗೆ ಕಳಿಸಿ ಸೆಕ್ಸ್ ವರ್ಕ್ ಗೂ ಬಳಸಿದ್ದಾರೆ.ಇದರಲ್ಲೂ ಅನಿಲ್ ಕುಮಾರ್ @ಅಕ್ಷತಾ ರಿಂದ ಸಾವಿರಾರು ರೂ ಹಣ ವಸೂಲಿಯಾಗಿದೆ.ನಂತರ ಆಧಾರ್ ಕಾರ್ಡ್ ನಲ್ಲಿ ಟ್ತಾನ್ಸ್ಜೆಂಡರ್ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಸಹ ಅಧಿಕೃತ ಸರ್ಟಿಫಿಕೇಟ್ ಕೊಡಿಸಿದ್ದಾರೆ.ಮುಂದಿನ ತಿಂಗಳು ಬಾಂಬೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯಾಗಿ ಕನ್ವರ್ಟ್ ಮಾಡಲು ಸ್ಕೆಚ್ ಹಾಕುತ್ತಿದ್ದ ಮಾಹಿತಿ ಅರಿತ ಅನಿಲ್ ಕುಮಾರ್ ಕರಾಳ ದಂಧೆಯ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆ 3 ಲಕ್ಷ ಕೊಡುವಂತೆ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾರೆ.ತನ್ನ ಮನೆಯಿಂದ 5 ಲಕ್ಷ ನಗದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಸುಳ್ಳು ಕಂಪ್ಲೇಂಟ್ ದಾಖಲಿಸಿ ಜೈಲಿಗೆ ಹಾಕಿಸುತ್ತೇನೆಂದು ಅನಿತಾ ಬೆದರಿಸಿದ್ದಾರೆ. ಮನನೊಂದ ಅನಿಲ್ ಕುಮಾರ್ ದಾಖಲೆಗಳು ಸರ್ಟಿಫಿಕೇಟ್ ಸಮೇತ ಮಂಗಳೂರು ತೊರೆದು ನಂಜನಗೂಡು ಸೇರಿಕೊಂಡಿದ್ದಾನೆ.ಮತ್ತೆ ದಂಧೆ ಮಾಡಿಸಲು ಹವಣಿಸಿದ ಅನಿತಾ ಮಂಗಳಮುಖಿಯರನ್ನ ಅನಿಲ್ ಕುಮಾರ್ ಮನೆಗೆ ಕಳಿಸಿ ಗಲಾಟೆ ಮಾಡಿಸಿದ್ದಾರೆ.ಆಗಾಗ ಅನಿತಾ ತನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ ದಂಧೆಗೆ ಹಿಂದಿರುಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಅನಿಲ್ ಕುಮಾರ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ನಂಜನಗೂಡು ಪೊಲೀಸರು ತನ್ನ ಮನವಿಗೆ ಸ್ಪಂದಿಸುತ್ತಿಲ್ಲವೆಂದು ಸಹ ಆರೋಪಿಸಿದ್ದಾರೆ.

ಶೇ.90 ರಷ್ಟು ಕಣ್ಣುದೃಷ್ಟಿ ಕಳೆದುಕೊಂಡಿರುವ ಅನಿಲ್ ಕುಮಾರ್ ನಲ್ಲಿ ಯಾವುದೇ ಲೈಂಗಿಕ ದೌರ್ಬಲ್ಯ ಇಲ್ಲ.ಅನಿಲ್ ಕುಮಾರ್ ಮಂಗಳಮುಖಿಯಾಗಲು ಅನರ್ಹನಾಗಿದ್ದರೂ ಸಮಾಜ ಕಲ್ಯಾಣ ಇಲಾಖೆ ಟ್ರಾನ್ಸ್ಜೆಂಡರ್ ಸರ್ಟಿಫಿಕೇಟ್ ಕೊಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಒಟ್ಟಾರೆ ಅಮಾಯಕರನ್ನ ಕರದೊಯ್ದು ಬಲವಂತವಾಗಿ ಮಂಗಳಮುಖಿಯರಾಗಿ ಪರಿವರ್ತಿಸುವ ಕರಾಳ ದಂಧೆ ಜೀವಂತವಾಗಿರುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

ಅನಿಲ್ ಕುಮಾರ್ ನಿಜವಾಗಿಯೂ ಮಂಗಳಮುಖಿಯೇ..?

ಟ್ರಾನ್ಸ್ಜೆಂಡರ್ ಸರ್ಟಿಫಿಕೇಟ್ ಕೊಡುವ ಮುನ್ನ ವೈಧ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ…?

ಸರ್ಟಿಫಿಕೇಟ್ ಕೊಡುವ ಮುನ್ನ ನಿಯಮಗಳನ್ನ ಪಾಲಿಸಿದ್ದಾರೆಯೇ…?

ಈ ಪ್ರಕರಣದ ಹಿಂದಿರುವ ಉದ್ದೇಶವೇನು…?

ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ…

Spread the love

Related post

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…

Leave a Reply

Your email address will not be published. Required fields are marked *