ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು…

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು…

  • Crime
  • April 9, 2026
  • No Comment
  • 1707

ಪತಿ ಮೂಗ…ಪತ್ನಿ ಮೂಗಿ…ಪ್ರಿಯಕರ ಮೂಗ…ಸಹಚರ ಮೂಗ…ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಶುರುವಾಯ್ತು ಅಕ್ರಮ ಸಂಬಂಧ…ಪತಿ ಕೊಲೆಯಲ್ಲಿ ಅಂತ್ಯ…ನಿಗೂಢ ಕೊಲೆ ರಹಸ್ಯ ಭೇಧಿಸಿದ ನಂಜನಗೂಡು ಪೊಲೀಸರು…

ನಂಜನಗೂಡು,ಏ9,Tv10 ಕನ್ನಡ

ಮಾತು ಬಾರದಿದ್ರೂ ವಿಡಿಯೋ ಕಾಲ್ ಮೂಲಕವೇ ಅಕ್ರಮ ಸಂಬಂಧ ಬೆಳೆಸಿದ ಮೂಗಿ ಪತ್ನಿ ಪ್ರಿಯಕರನ ಜೊತೆ ಸೇರಿ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.ನಿಗೂಢವಾಗಿ ಕಾಣೆಯಾದ ಮೂಗ ಪತಿಯ ಪ್ರಕರಣ ಬೆನ್ನಟ್ಟಿದ ನಂಜನಗೂಡು ಗ್ರಾಮಾಂತರ ಪೊಲೀಸರು ಶಾಕ್ ಆಗಿದ್ದಾರೆ.ಮಾತು ಬಾರದ ಮೂಗಿ ಪತ್ನಿ ಮಾತುಬಾರದ ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿ ಪತಿಯನ್ನ ಕೊಲೆ ಮಾಡಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿ ಪೊಲೀಸರಿಗೇ ದಾರಿ ತಪ್ಪಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ಪತಿಯ ಕೊಲೆ ರಹಸ್ಯ ಭೇಧಿಸುವಲ್ಲಿ ಯಶಸ್ವಿಯಾದ ನಂಜನಗೂಡು ಗ್ರಾಮಾಂತರ ಪೊಲೀಸರು ಪತ್ನಿ,ಪ್ರಿಯಕರ ಹಾಗೂ ಸಹಚರ ಪೊಲೀಸರ ಅತಿಥಿಯಾಗಿದ್ದಾರೆ.

ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣ ಅಂದ್ರೆ ತಪ್ಪಿಲ್ಲ.ಕೊಲೆಯಾದ ವ್ಯಕ್ತಿ ಮೂಗ,ಕೊಲೆ ಆರೋಪಿ ಪತ್ನಿ ಮೂಗಿ,ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಮೂಗ,ಕೊಲೆಗೆ ಸಹಕರಿಸಿದ ವ್ಯಕ್ತಿಯೂ ಮೂಗ.ಯಾರಿಗೂ ಮಾತು ಬರಲ್ಲ.ಬರೀ ಕೈ ಕಣ್ಣುಗಳ ಸಂಜ್ಞೆಗಳೇ ಆಧಾರ.ಇವರ ಭಾಷೆ ಪೊಲೀಸರಿಗೆ ಅರ್ಥವಾಗುತ್ತಿಲ್ಲ.ಇವರ ವರ್ತನೆ ಬಗ್ಗೆ ಅನುಮಾನ ಬಂದ್ರೂ ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ.ಇವರ ಸಂಜ್ಞೆಗಳು ಅರ್ಥವಾಗುತ್ತಿಲ್ಲ.ವಿಡಿಯೋ ಕಾಲ್ ನಲ್ಲಿ ನಡೆದ ಸಂಜ್ಞೆಗಳ ಭಾಷೆ ಆಧಾರದ ಮೇಲೆ ವಾಕ್ ಮತ್ತು ಶ್ರವಣ ಸಂಸ್ಥೆ ನೆರವಿನಿಂದ ಸುಳಿವು ಪತ್ತೆ ಹಚ್ಚಿ ಕೊಲೆಗಡುಕರನ್ನ ಸೆರೆಹಿಡಿದ ಪೊಲೀಸರಿಗೆ ಹ್ಯಾಟ್ಸಪ್.

ಹೌದು…ಇದು ನಂಜನಗೂಡಿನ ದೇವೀರಮ್ಮನಹಳ್ಳಿ ಗ್ರಾಮದ ಮಾತು ಬಾರದ ಮೂಗ ಸ್ವಾಮಿ(28) ಕುಟುಂಬದಲ್ಲಿ ನಡೆದ ದುರಂತ ಕಥೆ.ಕೂಲಿ ಕೆಲಸ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಸ್ವಾಮಿಗೆ ಮೈಸೂರಿನ ಮಂಡಕಳ್ಳಿ ಗ್ರಾಮದ ಸವಿತಾ ಜೊತೆ ಪರಿಚಯವಾಗಿದೆ.ಸ್ನೇಹ ಪ್ರೇಮಕ್ಕೆ ತಿರುಗಿದೆ.ಸವಿತಾ ಸಹ ಮೂಗಿ.ಮಾತು ಬಾರದಿದ್ರೂ ಇಬ್ಬರ ಮನಸ್ಸುಗಳು ಒಂದಾಗಿ ವಿವಾಹ ಹಂತ ತಲುಪಿ ಸತಿಪತಿಗಳಾಗಿದ್ದಾರೆ.ಇಬ್ಬರ ಸುಂದರ ಸಂಸಾರದ ಫಲವಾಗಿ ಹೆಣ್ಣುಮಗು ಜನಿಸಿದೆ.ಮೂರು ವರ್ಷವಾದ್ರೂ ಮಗುವಿಗೆ ಮಾತು ಬಾರದ ಹಿನ್ನಲೆ ದಂಪತಿ ಮೈಸೂರಿನ ವಾಕ್ ಶ್ರವಣ ಸಂಸ್ಥೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಈ ಸಂಧರ್ಭದಲ್ಲಿ ದಂಪತಿಗೆ ಪರಿಚಯವಾದವನು ಕುಣಿಗಲ್ ತಾಲೂಕಿನ ಹನುಮಾಪುರ ಗ್ರಾಮದ ಶ್ರೀನಿವಾಸ ಈತನ ಸ್ನೇಹಿತ ಅಮೃತಪುರ ಗ್ರಾಮದ ಗಂಗಾಧರ.ಮೂರು ವರ್ಷದ ಬಾಲಕಿಯ ಶುಶ್ರೂಷೆಗಾಗಿ ತಗಲುವ ವೆಚ್ಚ ಭರಿಸಲು ಸಾಧ್ಯವಾಗದ ಸಂಧರ್ಭದಲ್ಲಿ ನೆರವಿಗೆ ಬಂದವನು ಶ್ರೀನಿವಾಸ.ಮಾತು ಬಾರದಿದ್ದರೂ ಸಜ್ಞೆಗಳಲ್ಲೇ ಸವಿತಾ ಜೊತೆ ಶ್ರೀನಿವಾಸ್ ಆತ್ಮೀಯತೆ ಬೆಳೆಸಿಕೊಂಡ.ವಿಡಿಯೂ ಕಾಲ್ ಮೂಲಕ ಮತ್ತಷ್ಟು ಹತ್ತಿರವಾದ.ಆಗಾಗ ಹಣದ ಸಹಾಯ ಮಾಡುತ್ತಾ ಸವಿತಾ ಜೊತೆ ಸಲುಗೆ ಬೆಳೆಸಿಕೊಂಡ.ವಿಡಿಯೋ ಸಜ್ಞೆಗಳಿಗೆ ಸೀಮಿತವಾಗಿದ್ದ ಸಂಬಂಧ ಅಕ್ರಮಕ್ಕೆ ತಿರುಗಿದೆ.ಆಗಾಗ ಸವಿತಾ ಕುಣಿಗಲ್ ಗೇ ಹೋಗಿ ಬರುವಷ್ಟು ಸಲುಗೆ ಆಗಿದೆ.ಇದು ಅಕ್ರಮ ಸಂಬಂಧಕ್ಕೆ ದಾರಿಯಾದ ಹಿನ್ನಲೆ ಸವಿತಾ ಗಂಡನಿಂದ ದೂರವಾಗುತ್ತಾ ಬಂದಿದ್ದಾಳೆ.ಪತ್ನಿಯ ಅಕ್ರಮ ಸಂಬಂಧ ವಾಸನೆ ಅರಿತ ಪತಿ ಸ್ವಾಮಿ ವಿರೋಧಿಸಿದ್ದಾನೆ.ಪತಿಯ ವಿರೋಧ ಅಕ್ರಮ ಜೋಡಿಗೆ ಒಂದಾಗಿ ಸೇರಲು ಸಮಸ್ಯೆ ಶುರುವಾಗಿದೆ.ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನ ಮುಗಿಸಲು ಮೂಗ ಜೋಡಿ ಸ್ಕೆಚ್ ಹಾಕಿ ಗಂಗಾಧರನ ನೆರವು ಪಡೆದಿದೆ.

ಫೆ.12 ರಂದು ಸ್ವಾಮಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.ಈ ಸಂಬಂಧ ಸವಿತಾ ನಂಜನಗೂಡು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ.ಮಾತು ಬಾರದ ಸವಿತಾಳ ಮನವಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಪೊಲೀಸರು ಕೊ‌ನೆಗೂ ಮಾರ್ಚ್ 3 ರಂದು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.ಪತಿ ಹುಡುಕಿಕೊಡುವಂತೆ ಸವಿತಾಳೆ ಆಗಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಸವಿತಾಳ ನಾಟಕೀಯತೆ ಅರಿಯದ ಪೊಲೀಸರು ಸ್ವಾಮಿಯ ಪತ್ತೆಗಾಗಿ ಪ್ರಕ್ರಿಯೆ ಶುರು ಮಾಡಿದಾಗ ಸವಿತಾಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ.ಸವಿತಾಳ ವಿಚಾರಣೆ ನಡೆಸಿದ್ರೆ ಪೊಲೀಸರಿಗೆ ಮೂಗ ಭಾಷೆ ಅರ್ಥವಾಗಿಲ್ಲ.ಆಕೆಯ ಮೊಬೈಲ್ ಪರಿಶೀಲಿಸಿದಾಗ ವಾಟ್ಸಪ್ ವಿಡಿಯೋ ಕಾಲ್ ಗಳ ಮೇಲೆ ಅನುಮಾನ ಮೂಡಿದೆ.ಶ್ರೀನಿವಾಸನ ಜೊತೆ ಪದೇ ಪದೇ ವಿಡಿಯೋ ಕಾಲ್ ನಲ್ಲಿ ಸಜ್ಞೆ ಮೂಲಕ ಮಾತನಾಡಿರುವ ದೃಶ್ಯಗಳು ಪತ್ತೆಯಾಗಿದೆ.ಕೂಡಲೇ ಪೊಲೀಸರು ವಾಕ್ ಶ್ರವಣ ಸಂಸ್ಥೆ ಮೊರೆ ಹೋಗಿ ನೆರವು ಪಡೆದಿದ್ದಾರೆ.ಇದರಲ್ಲಿ ಶ್ರೀನಿವಾಸ ಹಾಗೂ ಸವಿತಾ ನಡುವಿನ ಅಕ್ರಮ ಸಂಬಂಧ ಬಯಲಾಗಿದೆ.ತಕ್ಷಣವೇ ಶ್ರೀನಿವಾಸ್ ನ ವಶಕ್ಕೆ ಪಡೆದ ಪೊಲೀಸರಿಗೆ ವಿಚಾರಣೆ ನಡೆಸಲು ಭಾಷೆ ಸಮಸ್ಯೆಯಾಗಿದೆ.ನಂತರ ಇಬ್ಬರನ್ನೂ ವಾಕ್ ಶ್ರವಣ ಸಂಸ್ಥೆ ತಜ್ಞರ ಮುಂದೆ ಕೂರಿಸಿ ತೀವ್ರ ರೀತಿಯಲ್ಲಿ ಪ್ರಶ್ನಿಸಿದಾಗ ರಹಸ್ಯ ಬಯಲಾಗಿದೆ.ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸ್ವಾಮಿಯನ್ನ ಕೊಂದಿರುವ ಮಾಹಿತಿ ದೊರೆತಿದೆ.

ಫೆ12 ರಂದು ಹಣದ ಸಹಾಯ ಮಾಡುವ ಆಮಿಷವೊಡ್ಡಿದ ಶ್ರೀನಿವಾಸ್ ದಂಪತಿಯನ್ನ ಕುಣಿಗಲ್ ಗೆ ಕರೆಸಿಕೊಂಡಿದ್ದಾನೆ.ದಂಪತಿ ಜೊತೆ ಎಣ್ಣೆ ಪಾರ್ಟಿ ನಡೆಸಿದ ಶ್ರೀನಿವಾಸ ತಾನು ರೂಪಿಸಿದ ಸಂಚಿನಂತೆ ಫುಲ್ ಟೈಟ್ ಆಗಿದ್ದ ಸ್ವಾಮಿಯನ್ನ ಮುಗಿಸಿದ್ದಾರೆ.ಕೊಲೆಗೆ ಸ್ನೇಹಿತ ಗಂಗಾಧರ್ ಸಹ ಸಹಾಯ ಮಾಡಿದ್ದಾನೆ.ಕೊಲೆ ಮಾಡಿದ ನಂತರ ಮೃತದೇಹದ ಸೊಂಟಕ್ಕೆ ಕಲ್ಲು ಕಟ್ಟಿ ಪಾಳು ಬಿದ್ದ ಬಾವಿಯಲ್ಲಿ ಬಿಸಾಡಿದ್ದಾರೆ.ನಂತರ ಅಮಾಯಕರಂತೆ ನಾಟಕವಾಡಿದ ಸವಿತಾ ನಂಜನಗೂಡು ಗ್ರಾಮಾಂತರ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲಿಸಿದ್ದಾಳೆ.ಮಾತುಗಳು ಬಾರದಿದ್ದರೂ ಅಕ್ರಮ ಸಂಬಂಧಕ್ಕೆ ಹಾತೊರೆದು ಅಮಾಯಕ ಸ್ವಾಮಿಯನ್ನ ಮುಗಿಸಿದ್ದಾರೆ.ಇದೀಗ ಸವಿತಾ,ಶ್ರೀನಿವಾಸ್,ಗಂಗಾಧರ್ ಮೂವರೂ ಕಂಬಿ ಎಣಿಸುತ್ತಿದ್ದಾರೆ.ಒಟ್ಟಾರೆ ರಹಸ್ಯ ಕೊಲೆ ಪ್ರಕರಣ ಭೇಧಿಸಿದ ಕೀರ್ತಿ ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ಸಲ್ಲುತ್ತದೆ…

Spread the love

Related post

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…
Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…

Leave a Reply

Your email address will not be published. Required fields are marked *