ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಬೆಂಗಳೂರು: ತನ್ನ ವಿಭಿನ್ನ ಹಾಗೂ ಪರಿಣಾಮಕಾರಿ ಉತ್ಪನ್ನಗಳ ಮೂಲಕ ಗಮನ ಸೆಳೆದಿರುವ ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ (Deconstruct), ಈಗ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ತನ್ನ ನೂತನ ಬ್ರಾಂಡ್ ಪಾರ್ಟ್ನರ್ ಆಗಿ ಅಧಿಕೃತವಾಗಿ ಘೋಷಿಸಿದೆ.

ಚರ್ಚೆಗೆ ಗ್ರಾಸವಾಗಿದ್ದ ಇನ್‌ಸ್ಟಾಗ್ರಾಮ್ ರೀಲ್!
ಕೆಲವು ದಿನಗಳ ಹಿಂದೆ ಅನಿರುದ್ಧ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ರೀಲ್ ಒಂದರಲ್ಲಿ ‘ಡಿಕನ್ಸ್ಟ್‌ರಕ್ಟ್’ ಉತ್ಪನ್ನಗಳು ಕಾಣಿಸಿಕೊಂಡಿದ್ದವು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಅಭಿಮಾನಿಗಳು, ಅನಿರುದ್ಧ್ ಅವರು ಈ ಬ್ರಾಂಡ್ ಬಳಸುತ್ತಿದ್ದಾರೆಯೇ ಎಂದು ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ಕುತೂಹಲವೇ ಈಗ ಅಧಿಕೃತ ಸಹಯೋಗಕ್ಕೆ (Partnership) ನಾಂದಿ ಹಾಡಿದೆ.

*ಸಂಸ್ಥೆಯ ಪ್ರತಿಕ್ರಿಯೆ
ಈ ವಿಶೇಷ ವಿದ್ಯಮಾನದ ಬಗ್ಗೆ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. “ನಮ್ಮ ಬ್ರಾಂಡ್ ಬಗ್ಗೆ ಜನರು ಅಷ್ಟು ಸಹಜವಾಗಿ ಸ್ಪಂದಿಸಿದ್ದು ನಮಗೆ ಖುಷಿ ನೀಡಿದೆ. ಅನಿರುದ್ಧ್ ಅವರ ವ್ಯಕ್ತಿತ್ವ ನಮ್ಮ ಬ್ರಾಂಡ್‌ನ ಮೌಲ್ಯಗಳಿಗೆ ಪೂರಕವಾಗಿದೆ. ಇಂಟರ್ನೆಟ್‌ನಲ್ಲಿ ಉಂಟಾದ ಆ ವಿಡಿಯೋದ ಸಕಾರಾತ್ಮಕ ಪ್ರಭಾವವೇ ಈ ಸಹಯೋಗಕ್ಕೆ ಪ್ರಮುಖ ಪ್ರೇರಣೆ,” ಎಂದು ಅವರು ತಿಳಿಸಿದ್ದಾರೆ.

ಯುವಜನತೆಯ ಐಕಾನ್ ಅನಿರುದ್ಧ್
ತಮ್ಮ ಅದ್ಭುತ ಸಂಗೀತ ಹಾಗೂ ವಿಶಿಷ್ಟ ಸ್ಟೈಲ್ ಮೂಲಕ ಯುವಜನತೆಯ ಮನಗೆದ್ದಿರುವ ಅನಿರುದ್ಧ್ ರವಿಚಂದರ್, ಈಗ ಸ್ಕಿನ್ ಕೇರ್ ಕ್ಷೇತ್ರದಲ್ಲಿಯೂ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ. ವಿಶೇಷವಾಗಿ ಬ್ರಾಂಡ್‌ನ ಜನಪ್ರಿಯ ಸನ್‌ಸ್ಕ್ರೀನ್ ಉತ್ಪನ್ನಗಳ ಪ್ರಚಾರದಲ್ಲಿ ಅವರು ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಂಗೀತ ಲೋಕದ ಸೆನ್ಸೇಶನ್ ಮತ್ತು ಸ್ಕಿನ್ ಕೇರ್ ಲೋಕದ ನಾವೀನ್ಯತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *