ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಮೈಸೂರು,ಏ22,Tv10 ಕನ್ನಡ

ಗುತ್ತಿಗೆ ಅವಧಿ ಮೀರಿ ಸ್ಥಗಿತಗೊಂಡಿರುವ ಗಣಿ ಜಾಗ ಭೂಗಳ್ಳರ ಪಾಲಾಗುತ್ತಿದೆ.ಗಣಿಯಲ್ಲಿ ಉಳಿದ ಕೋಟ್ಯಾಂತರ ಮೌಲ್ಯದ ಖನಿಜ ಪದಾರ್ಥಗಳು ಖದೀಮರ ಪಾಲಾಗುತ್ತಿದೆ.ಸರ್ಕಾರಿ ಖರಾಬು ಜಾಗವನ್ನ ರಕ್ಷಿಸುವಂತೆ ದೂರು ಕೊಟ್ರೂ ಜಿಲ್ಲಾಡಳಿತ,ತಾಲೂಕು ಆಡಳಿತ ಜಾಣಕುರುಡರಂತೆ ವರ್ತಿಸುತ್ತಿದೆ.ಸರ್ಕಾರಿ ಜಾಗವನ್ನ ಕೆಲವು ಸ್ಥಳೀಯ ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರೂ ತಮಗೇನೂ ಸಂಭಂಧವೇ ಇಲ್ಲದಂತೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳ ನಡೆ ಭಾರಿ ಅನುಮಾನಕ್ಕೆ ಕಾರಣವಾಗಿದೆ.ಹಗಲು ದರೋಡೆ ನಡೆಯುತ್ತಿದ್ದರೂ ರಕ್ಷಿಸಿಕೊಳ್ಳಲು ಮುಂದಾಗದ ಜಿಲ್ಲಾಡಳಿತ ಭಾರಿ ಟೀಕೆಗೆ ಗುರಿಯಾಗಿದೆ.

ಮೈಸೂರು ತಾಲೂಕು ಕಸಬಾ ಹೋಬಳಿ ಶ್ಯಾದನಹಳ್ಳಿ ಗ್ರಾಮ ಸರ್ವೆ ನಂ 116 ಹಾಗೂ 119 ಗಣಿ ಪ್ರದೇಶವಾಗಿದ್ದು 116 ರಲ್ಲಿ 4 ಎಕ್ರೆ 8 ಗುಂಟೆ ಹಾಗೂ ಸರ್ವೆ ನಂ.119 ರಲ್ಲಿ 1 ಎಕ್ರೆ 4 ಗುಂಟೆ ಪ್ರದೇಶವನ್ನ 1970 ರಲ್ಲಿ 20 ವರ್ಷದ ಅವಧಿಗಾಗಿ ರಾಜೀ.ವಿ.ರಾಮನ್ ಎಂಬುವರಿಗೆ ಸರ್ಕಾರದಿಂದ ಮೈನಿಂಗ್ ಗೆ ಗುತ್ತಿಗೆ ನೀಡಲಾಗಿತ್ತು.20 ವರ್ಷಗಳ ಅವಧಿ ಮುಗಿದ ನಂತರ ಇಲ್ಲಿ ಗಣಿ ಕಾರ್ಯ ಸ್ಥಗಿತಗೊಂಡಿತು.ಉತ್ಪಾದನೆ ಸ್ಥಗಿತವಾದ ನಂತರ ಸರ್ಕಾರದ ತನ್ನ ಆಸ್ತಿಯನ್ನ ರಕ್ಷಣೆ ಮಾಡಿಕೊಳ್ಳಬೇಕಿತ್ತು.ಆದ್ರೆ ಕೆಲವು ಸ್ಥಳೀಯ ವ್ಯಕ್ತಿಗಳು ಗಣಿಯಲ್ಲಿ ಉಳಿದಿದ್ದ ಅತ್ಯಮೂಲ್ಯ ಖನಿಜ ಪದಾರ್ಥಗಳನ್ನ ಅಕ್ರಮವಾಗಿ ಸಾಗಿಸಿದ್ದಾರೆ.ಅಲ್ಲದೆ ಕೆಲವು ಪ್ರಭಾವಿಗಳು ಗಣಿ ಪ್ರದೇಶವನ್ನ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.ಸದರಿ ನಿವೇಶನಗಳಲ್ಲಿ ಸಾಕಷ್ಟು ಕಟ್ಟಡಗಳೂ ಸಹ ಎದ್ದು ನಿಂತಿವೆ.

ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ದಾಖಲೆ ಹಾಗೂ ವಿಡಿಯೋ ಸಮೇತ ದೂರು ನೀಡಿ ಅಕ್ರಮಕ್ಕೆ ಬ್ರೇಕ್ ಹಾಕುವಂತೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ.ದೂರಿನ ಅನ್ವಯದಂತೆ ಸ್ಥಳಕ್ಕೆ ಬಂದ ತಹಸೀಲ್ದಾರ್,ಆರ್.ಐ ಹಾಗೂ ವಿ.ಎ ಗಳು ಪರಿಶೀಲನೆ ನಡೆಸಿ ಯಾವುದೇ ಕ್ರಮ ಜರುಗಿಸದೆ ಹಿಂದಿರುಗಿದ್ದಾರೆ.ದೂರು ನೀಡಿ ವರ್ಷ ಕಳೆದರೂ ಕ್ರಮ ಜರುಗಿಸಿಲ್ಲ ಆಸ್ತಿ ರಕ್ಷಣೆಗೂ ಅಧಿಕಾರಿಗಳು ಮುಂದಾಗಿಲ್ಲ.ಒಬ್ಬ ಸರ್ವೆಯರ್ ಒತ್ತುವರಿ ಆಗಿದೆ ಎಂದು ವರದಿ ನೀಡಿದ್ರೆ ಮತ್ತೆ ಕೆಲವರು ಪೋಕಲ್ ಇದೆ ಎಂದು ವರದಿ ನೀಡಿದ್ದಾರೆ.ಸದರಿ ಬಿ ಖರಾಬು ಜಾಗದಲ್ಲಿ ಅಕ್ರಮವಾಗಿ ಕಲ್ಲು ಕ್ವಾರಿ ಕಾಮಗಾರಿ ನಡೆದಿರುವುದು ಕಂಡು ಬಂದಿದೆ.

ಬಳ್ಳಾರಿಯಲ್ಲಿ ನಡೆದ ಅಕ್ರಮ ಮೈನಿಂಗ್ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು.ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಗಣಿಪ್ರದೇಶದಲ್ಲಿ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಅನ್ವಯಿಸುವುದಿಲ್ಲವೇನೋ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ.ಈಗಾಗಲೇ ದಾಖಲೆ ಹಾಗೂ ವಿಡಿಯೋ ಸಮೇತ ಆರ್.ಟಿ.ಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ದೂರು ನೀಡಿ ಭೂಗಳ್ಳರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಇದ್ಯಾವುದಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ಗಪ್ ಚುಪ್ ಎಂದು ಸೈಲೆಂಟ್ ಆಗಿರುವ ಮರ್ಮ ಅರ್ಥವಾಗುತ್ತಿಲ್ಲ.

ಸರ್ಕಾರದ ಆಸ್ತಿಗಳನ್ನ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಆದೇಶಗಳನ್ನ ಹೊರಡಿಸುತ್ತಿದೆ.ಆದ್ರೆ ಜಡ್ಡು ಹಿಡಿದ ಅಧಿಕಾರಿಗಳು ಆದೇಶಗಳನ್ನ ತಮ್ಮ ಕುರ್ಚಿ ಕೆಳಗೆ ಅವಿತಿಟ್ಟು ಭೂಗಳ್ಳರ ಅಕ್ರಮಗಳನ್ನ ನೋಡುತ್ತಾ ಕುಳಿತಿದ್ದಾರೆ.ಈ ಅಕ್ರಮದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿರುವ ಶಂಕೆ ಇದೆ.ಈ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ತಮ್ಮ ಆಸ್ತಿಯನ್ನ ರಕ್ಷಿಸಿಕೊಳ್ಳಲಿ…

Spread the love

Related post

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ…

ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ…ತಹಸೀಲ್ದಾರ್ ದಾಳಿ…ಸ್ಪೋಟಕ್ಕೆ ಬಳಸುವ ವಸ್ತುಗಳು ವಶ… ಶ್ರೀರಂಗಪಟ್ಟಣ,ಮೇ19,Tv10 ಕನ್ನಡ ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲಾಡಳಿತದ ಸಮರ ಸಾರಿದೆ.ನಿಷೇಧದ ನಡುವೆಯೂ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ…
ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು “ರಕ್ಕಿ” ಚಿತ್ರದ ಮೊದಲ ಗೀತೆಯಾಗಿದೆ.

ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK…

ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ…
ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ (ರಿಂಗ್ ರೋಡ್ ಒಳ ಭಾಗದಲ್ಲಿ) ಹಾಲಿ…

Leave a Reply

Your email address will not be published. Required fields are marked *