ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ (ರಿಂಗ್ ರೋಡ್ ಒಳ ಭಾಗದಲ್ಲಿ) ಹಾಲಿ ಇರುವ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ಗೆ ಬದಲಾಯಿಸುವ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಪರಿಶೀಲಿಸಿದರು.

ಮೈಸೂರಿನ ಶ್ರೀರಾಂಪುರದಲ್ಲಿ 11 ಕೆ.ವಿ. ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ಭೂಗತ ಕೇಬಲ್‌ಗೆ ಬದಲಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೆಸ್ಕ್‌ ಅಧಿಕಾರಿಗಳಿಂದ ಕಾಮಗಾರಿಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಸೆಸ್ಕ್‌ನ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್‌ ಸುನೀಲ್‌ ಕುಮಾರ್‌ ಅವರು, ಮೈಸೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿಯ ಪ್ರಗತಿ ಕುರಿತಂತೆ ಮಾಹಿತಿ ನೀಡಿದರು. ಹಾಗೂ ಕಾಮಗಾರಿ ಮುಗಿಸಲು 2 ವರ್ಷ ಅವಧಿ ನಿಗದಿಪಡಿಸಿದ್ದು, ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ, ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ಟಿ.ಎಸ್‌. ಶ್ರೀವತ್ಸ, ಕೆ. ಹರೀಶ್‌ ಗೌಡ, ವಿಧಾನ ಪರಿಷತ್‌ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಪ್ರಾದೇಶಿಕ ಆಯುಕ್ತರು ಹಾಗೂ ಸೆಸ್ಕ್‌ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ನಿತೀಶ್‌ ಪಾಟೀಲ್‌, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌, ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌, ಸೆಸ್ಕ್‌ನ ಮುಖ್ಯ ಇಂಜಿನಿಯರ್‌ ಎಲ್‌. ಲೋಕೇಶ್‌ ಸೇರಿದಂತೆ ಇತರರಿದ್ದರು.

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *