*ಕಾರ್ಗಿಲ್ ವಿಜಯೋತ್ಸವ ಆಚರಣೆ…ನಿವೃತ್ತ ಯೋಧರಿಗೆ ಸನ್ಮಾನ…*
- MysoreNews
- July 25, 2022
- No Comment
- 333
*ಮೈಸೂರು,ಜುಲೈ25,Tv10 ಕನ್ನಡ*
23 ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ
ಇಂದು ಯುವ ಭಾರತ್ ಸಂಘಟನೆ ವತಿಯಿಂದ ಯೋಧರ ಒಂದು ನೆನಪು ಹಾಗೂ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಿವೃತ್ತ 6 ಜನ ವೀರ. ಯೋಧರಿಗೆ ಸನ್ಮಾನವನ್ನು ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ 20ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ನಿವೃತ್ತ ವೀರ ಯೋಧರಾದ
ಎಂ ವಿ ಕುಮಾರ್
ವಿರುಪಾಕ್ಷಪ್ಪ
ಕೆ ವಿ ಮಹೇಶ್
ಕೆ ಪಿ ಮಹೇಶ್
ಕಾಂತರಾಜು ಬಿ
ಮಂಜು ಸಿ
ಅವರನ್ನ ಸನ್ಮಾನಿಸಿ ಅಭಿನಂದಿಸಲಾಯಿತು.
ನಂತರ ಮಾತನಾಡಿದ ಶಾಸಕರಾದ ಎಲ್ ನಾಗೇಂದ್ರ ರವರು ಭಾರತ ದೇಶದ ಕಾರ್ಗಿಲ್ ಯುದ್ದವು ಇಡೀ ಪ್ರಪಂಚವೇ ಎದುರು ನೋಡುತ್ತಿದ್ದ ಯುದ್ಧ. ಕಾಶ್ಮೀರದಿಂದ ಭಾರತಕ್ಕೆ ಸಂಪರ್ಕವನ್ನ ಕಲ್ಪಿಸುವ ಹೈವೇಯನ್ನು ತನ್ನ ಮುಷ್ಟಿಯಲ್ಲಿ ಇಟ್ಟಿಕೊಳ್ಳುವ ಭರದಲ್ಲಿ ಪಾಕಿಸ್ತಾನದ ಯೋಧರು ಮತ್ತು ಉಗ್ರಗಾಮಿಗಳು ಭಾರತದ ಸಿಯಾಚಿನ್ ಗಡಿರೇಖೆಯನ್ನು ನುಗ್ಗಿ ಭಾರತದ ಕೆಲವು ಪ್ರದೇಶವನ್ನ ಆಕ್ರಮಿಸಿಕೊಂಡಿದ್ದರು. ಅ ಸಂದರ್ಭದಲ್ಲಿ ಅಂದಿನ ಪ್ರದಾನ ಮಂತ್ರಿ ವಾಜಪೇಯಿ ರವರ ಆದೇಶದ ಮೇರೆಗೆ ಯುದ್ಧ ಪ್ರಾರಂಭವಾಯಿತು. ಬೆಟ್ಟದ ಮೇಲೆ ಪಾಕಿಸ್ತಾನದ ಉಗ್ರಗಾಮಿಗಳು ಮತ್ತು ಕೆಳಭಾಗದಲ್ಲಿ ಯೋಧರ ಜೊತೆ ಯುದ್ಧ ನೆಡೆಯುವುದಿತ್ತು. ನಮ್ಮ ವೀರ ಯೋಧರು ಯುಧವನ್ನ ಗೆದ್ದು ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ತೋರಿಸಿಕೊಟ್ಟರು.ಈ ದೇಶದ ಉಳಿವಿಗಾಗಿ ಸೈನಿಕರು ಹಗಲು ರಾತ್ರಿ ದುಡಿಯುತ್ತಿದ್ದಾರೆ ಹಾಗೇಯೆ 23 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ದವು ಇಂದಿನ ಯುವಕರಿಗೆ ಸ್ಪೂರ್ತಿ ಮತ್ತು ಯುದ್ದದಲ್ಲಿ ಮಡಿದ ಯೋಧ ಕುಟುಂಬಕ್ಕೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಮತ್ತು ಅವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ನಾವೆಲ್ಲ ಭಾರತೀಯರು ಚೈನಾ ಪದಾರ್ಥಗಳ ಬಹಿಷ್ಕಾರ ಮಾಡುವ ಮೂಲಕ ಯೋಧರಿಗೆ ಸಮರ್ಪಿಸೊಣ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ್ ಶೆಣೈ ,ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿ ಮಂಜು ,ಬಿಜೆಪಿ ಫಲಾನುಭವಿ ಪ್ರಕೋಷ್ಟ ಸಂಚಾಲಕ ಪರಮೇಶ್ ಗೌಡ ,ನಗರಪಾಲಿಕೆ ಸದಸ್ಯ ಜಗದೀಶ್ ,ಯುವ ಭಾರತ ಸಂಘಟನೆಯ ಸಂಚಾಲಕ ಆನಂದ್ ,ಚಾಮರಾಜ ಯುವಮೋರ್ಚಾ ಅಧ್ಯಕ್ಷ ಸಚಿನ್ ,ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ ,
ಸಂದೀಪ್ ಸಿ ,ಮಾಜಿ ನಗರ ಪಾಲಿಕೆ ಸದಸ್ಯ ರಮೇಶ್ ,
ಅಪೂರ್ವ ಸುರೇಶ್ ,ಪಂಕಜ್ ,ಶರತ್ ,
ಶಿವು ,ಸುಚೀಂದ್ರ, ಚಕ್ರಪಾಣಿ ,
ರಂಗನಾಥ್, ಮಹದೇವಪ್ರಸಾದ್,,ರಾಜು,ಸಿದ್ದೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು…