- July 25, 2022
ಆಟೋ,ಕಾರ್ ಢಿಕ್ಕಿ…ಮಹಿಳೆ ಸಾವು…ಮೂವರಿಗೆ ಗಾಯ...
ಮೈಸೂರು,ಜುಲೈ25,Tv10 ಕನ್ನಡ*
ಆಪೇ ಆಟೋ, ಓಮಿನಿ ಕಾರ್ ಮುಖಾಮುಖಿ ಡಿಕ್ಕಿ ಪರಿಣಾಮ
ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡ ಘಟನೆ

ಟಿ.ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಸಮೀಪ ನಡೆದಿದೆ.
ಮೈಸೂರಿನ ಜೆಪಿ ನಗರ ನಿವಾಸಿ ವಿಶಾಲಾಕ್ಷಿ(29)ಮೃತ ದುರ್ದೈವಿ. ವಿಶಾಲಾಕ್ಷಿ ಪತಿ ಶಂಕರ್ ಹಾಗೂ ಇಬ್ಬರು ಮಕ್ಕಳು ಗಾಯಗೊಂಡು
ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಪೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮಳವಳ್ಳಿ ತಾಲ್ಲೂಕಿನ ನಂಜೇಗೌಡನಪುರ
ಗ್ರಾಮಸ್ಥರಾದ ರಾಜು,ಮಣಿ,ರತ್ನಮ್ಮ, ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
