ಮುರಿದುಬಿದ್ದ ರಸ್ತೆ ಫಲಕಗಳು… ತಿರುಗಿ ನೋಡದ ಅಧಿಕಾರಿಗಳು..

 

ಮೈಸೂರು,ಜುಲೈ26,Tv10 ಕನ್ನಡ
ರಸ್ತೆಗಳ ಹೆಸರನ್ನ ಸೂಚಿಸಿ ಸಾರ್ವಜನಿಕರಿಗೆ ನೆರವಾಗಬೇಕಿದ್ದ ಮಾರ್ಗ ಫಲಕಗಳು ಮುರಿದು ಬಿದ್ದಿವೆ.ಪಾಲಿಕೆ ಅಧಿಕಾರಿಗಳಿಗೆ ಫಲಕಗಳು ಗುಣಮಟ್ಟವನ್ನ ಪ್ರಶ್ನಿಸುವಂತಾಗಿದೆ.ಮುರಿದು ಬಿದ್ದು ಮೂಲೆ ಸೇರಿದ್ದರೂ ಯಾವ ಅಧಿಕಾರಿಗಳೂ ಇತ್ತ ತಿರುಗಿ ನೋಡಿಲ್ಲ.ಸಾರ್ವಜನಿಕರ ತೆರಿಗೆಯಲ್ಲಿ ಅಳವಡಿಸಲಾದ ಫಲಕಗಳ ದುಃಸ್ಥಿತಿ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ.

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲೂ ಮಾರ್ಗಗಳನ್ನ ತಿಳಿಸುವ ಸಲುವಾಗಿ ಲಕ್ಷಾಂತರ ವೆಚ್ಚ ಮಾಡಿ ಫಲಕಗಳನ್ನ ಅಳವಡಿಸಲಾಗಿದೆ.ಪಡುವಾರಹಳ್ಳಿ ವಾರ್ಡ್ ನಂ 22 ರ 3 ನೇ ಅಡ್ಡರಸ್ತೆ ಸೂಚಿಸುವ ಮಾರ್ಗ ಫಲಕ ಮುರಿದುಬಿದ್ದು ದಿನಗಳೇ ಉರುಳಿದೆ.ಪಾಲಿಕೆ ಸದಸ್ಯೆ ನಮ್ರತಾ ರಮೇಶ್ ಗೆ ಸೇರುವ ವಾರ್ಡ್ ನಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.ಫಲಕ ಮುರಿದು ಬಿದ್ದು ದಿನಗಳೇ ಉರುಳಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.ಸಾರ್ವಜನಿಕರ ತೆರಿಗೆಯಲ್ಲಿ ಇಂತಹ ಕಾರ್ಯಕ್ಕೆ ಮುಂದಾಗುವ ಅಧಿಕಾರಿಗಳು ಗುಣಮಟ್ಟ ಪರಿಶೀಲಿಸಬೇಕಿರುತ್ತದೆ.ಇದೆಲ್ಲವನ್ನೂ ಗಾಳಿಗೆ ತೂರಿದ ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಏನೆನ್ನಬೇಕು…?

Spread the love

Related post

ದೇವರಾಜ ಮಾರುಕಟ್ಟೆಯಲ್ಲಿ ಯದುವೀರ್ ಪರ ಪ್ರಚಾರ…ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ ಮತಯಾಚನೆ…

ದೇವರಾಜ ಮಾರುಕಟ್ಟೆಯಲ್ಲಿ ಯದುವೀರ್ ಪರ ಪ್ರಚಾರ…ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ…

ಮೈಸೂರು,ಏ19,Tv10 ಕನ್ನಡ ಮೈಸೂರಿನ ವಾರ್ಡ್ ನಂ 23 ರ ದೇವರಾಜ ಮಾರುಕಟ್ಟೆ,ಡಿ.ದೇವರಾಜ ಅರಸ್ ರಸ್ತೆ,ಸಯ್ಯಾಜಿರಾವ್ ರಸ್ತೆ,ಕೆ.ಟಿ.ಸ್ಡ್ರೀಟ್,ಶ್ರೀರಾಂಪೇಟೆಯಲ್ಲಿ ಬಿಜೆಪಿ ಮುಖಂಡರು ಯದುವೀರ್ ಪರ ಮತಯಾಚಿಸಿದರು.ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನ ಹಂಚಿ…
ಯದುವೀರ್ ಗೆ ಪಾದತೊಳೆದು ಸ್ವಾಗತ…ಅಗ್ರಹಾರದಲ್ಲಿ ಅದ್ದೂರಿ ಪ್ರಚಾರ…

ಯದುವೀರ್ ಗೆ ಪಾದತೊಳೆದು ಸ್ವಾಗತ…ಅಗ್ರಹಾರದಲ್ಲಿ ಅದ್ದೂರಿ ಪ್ರಚಾರ…

ಮೈಸೂರು,ಏ19,Tv10 ಕನ್ನಡ ಲೋಕಸಭೆ ಚುನಾವಣೆ ಕಾವು ಏರುತ್ತಿದೆ.ಅಭ್ಯರ್ಥಿಗಳು ಮತಬೇಟೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಇಂದು ಅಗ್ರಹಾರ 50 ನೇ ವಾರ್ಡ್ ನಲ್ಲಿ…
ಮೈಸೂರು:ನಕಲಿ ಫೆವಿಕ್ವಿಕ್ ಮಾರಾಟ…ಓರ್ವನ ಬಂಧನ…ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…

ಮೈಸೂರು:ನಕಲಿ ಫೆವಿಕ್ವಿಕ್ ಮಾರಾಟ…ಓರ್ವನ ಬಂಧನ…ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…

ಮೈಸೂರು,ಏ18,Tv10 ಕನ್ನಡ ಮೈಸೂರಿನಲ್ಲಿ ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದ ಏಜೆನ್ಸಿ ಮೇಲೆ ದೇವರಾಜ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ನಕಲಿ ಫೆವಿಕ್ವಿಕ್ ಗಳು ದೊರೆತಿದ್ದು ಏಜೆನ್ಸಿಯ ಮಾಲೀಕನನ್ನ…

Leave a Reply

Your email address will not be published. Required fields are marked *