• July 27, 2022

ಕುಡಿಯುವ ನೀರಿಗಾಗಿ ಪಾಲಿಕೆಗೆ ಮುತ್ತಿಗೆ…ಮಾಜಿ ಶಾಸಕ ಎಂ.ಕೆ.ಎಸ್.ನೇತೃತ್ವದಲ್ಲಿ ಪ್ರತಿಭಟನೆ…*

 

ಕುಡಿಯುವ ನೀರಿಗಾಗಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿದೆಡೆ ಕಳೆದ ಮೂರು ದಿನದಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

 

 

ಸ್ಥಳೀಯ ಶಾಸಕರಾಗಲಿ,ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಖಾಲಿ ಬಿಂದಿಗೆ ಪ್ರದರ್ಶಿಸಿ ಕೆ.ಆರ್.ವಿಧಾನಸಭಾ ಕ್ಷೇತ್ರದ ನಿವಾಸಿಗಳು ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಶ್ರೀಧರ್,ಮಾಜಿ ಪಾಲಿಕೆ ಸದಸ್ಯ ಶಿವಣ್ಣ,ಮುಖಂಡರುಗಳಾದ ನವೀನ್ ಕುಮಾರ್,ವಿಜಯ್ ಕುಮಾರ್,ರಾಜೇಶ್,ಫಾರುಖ್,ಡೈರಿ ವೆಂಕಟೇಶ್,ಮಾಜಿ ಆಶ್ರಯ ಸಮಿತಿ ಸದಸ್ಯ ಮೂರ್ತಿ,ರಾಜೇಶ್,ರಾಮು,ಪ್ರಶಾಂತ್,ಗುಣಶೇಖರ್,ರಾಘವೇಂದ್ರ,ರಘುರಾಜೇ ಅರಸ್,ಸೋಮು ಸರಗೂರು,ವಸಂತ್,ಕಿರಣ್,ನಾಗಮಹದೇವ,ಚಿಕ್ಕಲಿಂಗು,ಪ್ರದೀಪ್,ರವಿ ಮತ್ತಿತರರು ಭಾಹವಹಿಸಿದ್ದರು…

Spread the love

Leave a Reply

Your email address will not be published.