*ಪ್ರವೀಣ್ ಹತ್ಯೆ ನನಗೆ ನೋವು ತಂದಿದೆ…ಸಿಎಂ ಬಸವರಾಜ ಬೊಮ್ಮಾಯಿ…*
- News
- July 28, 2022
- No Comment
- 195
*ಬೆಂಗಳೂರು,ಜುಲೈ28,Tv10 ಕನ್ನಡ*
ಪ್ರವೀಣ್ ಹತ್ಯೆಯಿಂದ ನನಗೆ ನೋವು ಕಳವಳ ಉಂಟಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರ್ ಟಿ ನಗರದ ಖಾಸಗಿ ನಿವಾಸದಲ್ಲಿ ಹೇಳಿದ್ದಾರೆ.
ತಡರಾತ್ರಿ ಸುದ್ದಿಗೋಷ್ಠಿಗೆ ಕ್ಷಮೆ ಯಾಚಿಸಿದ ಸಿಎಂ
ನನಗೆ ನಿನ್ನೆ ರಾತ್ರಿಯಿಂದ ಪ್ರವೀಣ್ ಹತ್ಯೆ ಸುದ್ದಿ ಬಂದಮೇಲೆ ಬಹಳ ನೋವು ಕಳವಳವಾಗಿದೆ.
ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಅತ್ಯಂತ ಅಮಾಯಕ ಯುವಕನನ್ನ ಸಂಚಿನಿಂದ ಕೊಲೆ ಆಗಿರೋದು ಅಮಾನವೀಯ ಖಂಡನೀಯ.
ಶಿವಮೊಗ್ಗದ ಹರ್ಷನ ಕೊಲೆಯ ಕೆಲವೇ ದಿನದಲ್ಲಿ ಈ ಕೊಲೆ ಆಗಿದೆ. ಅಲ್ಲಿ ಸಮಾಧಾನ ಮಾಡುವ, ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಕಟೀಲ್ ಮಾಡಿದ್ದಾರೆ.
ನಾನು ಈ ಜಿಜ್ಞಾಸೆಯಲ್ಲಿದ್ದೆ.
ನಮ ಕಾರ್ಯಕರ್ತನ, ಮುಗ್ದನ ಕೊಲೆ ಆಗಿದೆ.
ಯಡಿಯೂರಪ್ಪ ಹಾಗೂ ನಮ್ಮ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ.
ಜನಪರ ಕೆಲಸ ಮಾಡಿದ್ದು, ಜನರಲ್ಲಿ ವಿಶ್ವಾಸ ತುಂಬಬೇಕಿದೆ.
ನಾನು ಆ ಹುಡುಗನ ತಾಯಿಯ ಆಕ್ರಂದನ ನೋಡಿ, ಅಳಲನ್ನ ನೋಡಿ ನಾನೇ ತೀರ್ಮಾನ ಮಾಡಿದೆ.
ಈ ಸಂದರ್ಭದಲ್ಲಿ ನಾಳೆ ನಡೆಯುವ ದೊಡ್ಡಬಳ್ಳಾಪುರ ಕಾರ್ಯಕ್ರಮ ರದ್ದು ಮಾಡಿದ್ದೇವೆ.
ವಿಧಾನಸೌಧದಲ್ಲಿ ನಡೆಯೋ ಕಾರ್ಯಕ್ರಮ ಕೂಡ ರದ್ದು ಮಾಡಿದ್ದೇವೆ.
ಪರಿಶಿಷ್ಟರ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕಿದೆ.
ಹಾಗಾಗಿ ನಾಳೆ ಸುದ್ದಿಗೋಷ್ಠಿ ಮೂಲಕ ಕಾರ್ಯಕ್ರಮ ಮಾಹಿತಿ ನೀಡುತ್ತೇನೆ.ನಾಳೆ ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಕ್ಷಮೆ ಕೇಳ್ತೀನಿ.ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಂಘಟನೆ ಆಗಿತ್ತು.ಮನಸ್ಸಾಕ್ಷಿ ಅನುಗುಣವಾಗಿ ಕಾರ್ಯಕ್ರಮ ರದ್ದು ಮಾಡಿದ್ದೇನೆ.ದೇಶ ದ್ರೋಹದ ಕೆಲಸಮಾಡಿ, ಜನರ ನಡುವೆ ದ್ವೇಶ ಬಿತ್ತಿ.
ಕೋಮು ಕೋಮುಗಳ ನಡುವೆ ಸಂಘರ್ಷ ನಡೆಸಲಾಗ್ತಿದೆ.ಇದು ದೇಶ ವ್ಯಾಪ್ತಿ ನಡೆಯುತ್ತಿದೆ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 22ಕ್ಕೂ ಹೆಚ್ಚು ಕಡೆ ಹತ್ಯೆ ನಡೆದಿದೆ.
ಯಾವ ರೀತಿ ಹತ್ಯೆ ಆಗಿದ್ದು, ಕ್ರಮ ತೆಗೆದುಕೊಳ್ಳಲಾಗಿದೆ.
ಮಂಗಳೂರು, ಡಿ.ಜೆ ಹಳ್ಳಿಯಲ್ಲಿ ನಡೆದ ರೀತಿ ಮಾಡದೆ ನೇರವಾಗಿ ಕ್ರಮ ಕೈಗೊಳ್ಳುತ್ತೇವೆ.
ದೃಡವಾದ ಸಂಕಲ್ಪ ಮಾಡಿದ್ದೇವೆ.ಸಾಮಾನ್ಯ ತನಿಖೆ ಜೊತೆ, ವಿಶೇಷ ಕಾನೂನು ತರಲಾಗ್ತಿದೆ.
PFI ಟೆರರಿಸ್ಟ್ ಅಂತ ಹೇಳಿದ್ದು, ಅದಕ್ಕೆಲ್ಲಾ ಸಾಕ್ಷಿ ಇದೆ.ಈಗಿರುವ ವ್ಯವಸ್ಥೆ ಹೊರತಾಗಿ, ಸಂಪೂರ್ಣವಾಗಿ ಕಮಾಂಡರ್ ಫೋರ್ಸ್ ಮತ್ತು ಇಂಟಲಿಜೆನ್ಸ್,
ಆ್ಯಂಟಿ ಟೆರರಿಸ್ಟ್ ಕಮಾಂಡೋವನ್ನ ರಾಜ್ಯದಲ್ಲಿ ಸ್ಥಾಪನೆ ಮಾಡುತ್ತೇವೆ.
ನನಗೆ ನಮ್ಮ ಪ್ರತಿಯೊಬ್ಬ ಕಾರ್ಯಕರ್ಯನ, ಸಾಮಾನ್ಯ ಜನರ ಜೀವ ಮುಖ್ಯ.ದುಷ್ಟ ಶಕ್ತಿಗಳ ಪಾಪದ ಕೊಡ ತುಂಬಿದೆ.ಈಗ ಹೆಚ್ಚು ಮಾತನಾಡದೆ, ಬರುವ ದಿನದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ನಾನು ಯುವ ಜನರ ಆಕ್ರೋಶ ಅರ್ಥ ಮಾಡಿಕೊಳ್ಳುತ್ತೇನೆ.
ಕೇವಲ ಕರಾವಳಿ ಮಾತ್ರವಲ್ಲದೆ, ಬೇರೆ ಬೇರೆ ಕಡೆ ಕೂಡ ನಡೆದಿದೆ.ನಾನು ಹೋಮ್ ಮಿನಿಸ್ಟರ್ ಆಗಿದ್ದಾಗ ಘಟನೆ ನಡೆದಾಗ, ನಾಮೇ ಕುದ್ದು ಘಟನಾ ಸ್ಥಳಕ್ಕೆ ತೆರಳಿ ಕ್ರಮ ತೆಗೆದುಕೊಂಡಿದ್ದೆ.
ಈ ಹಿಂಸೆ ವಿರುದ್ಧ ನಮ್ಮ ಗೃಹ ಇಲಾಖೆ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ.
ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ,ನಾನು ತೊಳಲಾಟದಲ್ಲಿ ಇದ್ದೆ.
ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಅದರ ಬಗ್ಗೆ ಮಾತನಾಡಿದ್ರೆ ತನಿಖೆಗೆ ತೊಂದರೆ ಆಗಲಿದೆ.ಇದು ಅಂತರಾಜ್ಯ ವಿಚಾರ.
ಅಪರಾಧಿಗಳು ಜಾಗೃತ ಆಗ್ತಾರೆ.ಛತ್ತೀಸ್ಗಢದಲ್ಲಿ PFI ಬ್ಯಾನ್ ಆಗಿದೆ.
ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು PFI ಬ್ಯಾನ್ ಮಾಡಲಾಗುವುದು.
ರಾಜ್ಯದಲ್ಲಿ, ಸೆಂಟ್ರಲ್ ಹಾಗೂ ಎಲ್ಲಾ ಇಲಾಖೆ ನೋಡಿ ವಿಶೇಷ ತಂಡ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ…