- July 28, 2022
ಪ್ರವೀಣ್ ನೆಟ್ಟಾರ್ ಹತ್ಯೆ ಹಿನ್ನಲೆ…ಕೊಪ್ಪ ಪಟ್ಟಣ ಬಂದ್…
*ಚಿಕ್ಕಮಗಳೂರು,ಜುಲೈ28,Tv10 ಕನ್ನಡ*
ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಚಿಕ್ಕಮಂಗಳೂರಿನ ಕೊಪ್ಪ ಪಟ್ಟಣ ಸಂಪೂರ್ಣ ಬಂದ್ ಆಗಿದೆ.ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಗೆ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೊಪ್ಪ ತಾಲೂಕು ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು.ಪ್ರವೀಣ್ ಹತ್ಯೆ ಖಂಡಿಸಿ, ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ತಾಲೂಕಿನ ಜಯಪುರ, ಹರಿಹರಪುರ ಸೇರಿದಂತೆ ಹಲವು ಹೋಬಳಿ ಕೇಂದ್ರಗಳು ಬಂದ್ ಆಗಿವೆ…