- July 28, 2022
ಬೆಮೆಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ…
ಬೆಮೆಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ…
ಮೈಸೂರು,ಜುಲೈ28,Tv10 ಕನ್ನಡ
ಮೈಸೂರಿನ ಬಿಇಎಂಎಲ್ ನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ. ಸುಮಾರು ಆರು ವರ್ಷದ ಗಂಡು ಚಿರತೆ ಸೆರೆಯಾಗಿದೆ.ಕೆಲವು ದಿನಗಳಿಂದ ಆಗಾಗ ಬೆಮೆಲ್ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು.ರಾತ್ರಿ ವೇಳೆ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.ಆತಂಕ ಸೃಷ್ಟಿಸಿದ್ದ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.ಚಿರತೆ ಕಂಡುಬಂದ ಸ್ಥಳದಲ್ಲಿ ಬೋನು ಇರಿಸಲಾಗಿತ್ತು.ನಿನ್ನೆ ರಾತ್ರಿ ವೇಳೆ ಚಿರತೆ ಬೋನಿಗೆ ಸಿಲುಕಿದೆ. ಆರ್ ಎಫ್ ಓ. ಕೆ. ಸುರೇಂದ್ರ ಮತ್ತು ಅರಣ್ಯ ಸಿಬ್ಬಂದಿಗಳು ಬೋನಿಗೆ ಬಿದ್ದ ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಿದ್ದಾರೆ…