ಪತ್ರಕರ್ತನ ಪುತ್ರಿಯ ಸಾಮಾಜಿಕ ಕಳಕಳಿ…ಕ್ಯಾನ್ಸರ್ ರೋಗಿಗಳಿಗೆ ಕೂದಲು ಡೊನೇಟ್ ಮಾಡಿದ ನಯನಪ್ರಿಯ…

ಪತ್ರಕರ್ತನ ಪುತ್ರಿಯ ಸಾಮಾಜಿಕ ಕಳಕಳಿ…ಕ್ಯಾನ್ಸರ್ ರೋಗಿಗಳಿಗೆ ಕೂದಲು ಡೊನೇಟ್ ಮಾಡಿದ ನಯನಪ್ರಿಯ…

ಮೈಸೂರು,ಜುಲೈ28,Tv10 ಕನ್ನಡ
ಮೈಸೂರಿನ ಹಿರಿಯ ಪತ್ರಕರ್ತರೊಬ್ಬರ ಪುತ್ರಿ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನ ಡೊನೇಟ್ ಮಾಡಿ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.

ವರ್ಷಗಳ ಕಾಲ ಸೊಂಪಾಗಿ ಬೆಳೆದ ಸುಮಾರು 35 cm ಉದ್ದದ ಕೂದಲನ್ನ ಕಟ್ ಮಾಡಿಸಿ ಕ್ಯಾನ್ಸರ್ ರೋಗಿಗಳ ನೆರವಿಗಾಗಿ ನೀಡಿದ್ದಾರೆ.ಮೈಸೂರು ಮಿತ್ರ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿರುವ ಎ.ಸಿ.ಪ್ರಭಾಕರ್ (ಎಸಿಪಿ) ರವರ ಪುತ್ರಿ ನಯನಪ್ರಿಯಾ ತಮ್ಮ ಕೂದಲನ್ನ ದಾನ ಮಾಡಿದವರು.ಕ್ಯಾನ್ಸರ್ ರೋಗಿಗಳಿಗೆ ಈವಕೂದಲನ್ನ ಬಳಸಬೇಕಿದ್ದಲ್ಲಿ ಕನಿಷ್ಟ 14 ಇಂಚು ಉದ್ದದ ಕೂದಲನ್ನ ಡೊನೇಟ್ ಮಾಡಬೇಕೆಂಬ ನಿಯಮವಿದೆ.ಇದಕ್ಕಾಗಿ ನಯನಪ್ರಿಯಾ ನಿಯಮಾವಳಿಯನ್ನ ಸಮಗ್ರವಾಗಿ ಅರಿತುಕೊಂಡು.ಅವಶ್ಯಕತೆ ಇರುವ ಅಳತೆಯ ಕೂದಲನ್ನ ಕಟ್ ಮಾಡಿಸಿ ಬೆಂಗಳೂರಿನಲ್ಲಿರುವ ಇಂಡಿಯಾ ಕ್ಯಾನ್ಸರ್ ಸೊಸೈಟಿ ಸಂಸ್ಥೆಗೆ ರವಾನಿಸಿದ್ದಾರೆ.ಕೂದಲನ್ನ ಕ್ಯಾನ್ಸರ್ ರೋಗಿಗಳಿಗೆ ಡೊನೇಟ್ ಮಾಡುವುದು ಸುಲಭದ ಮಾತಲ್ಲ.ಕೂದಲು ನ್ಯಾಚುರಲ್ ಆಗಿರಬೇಕು,ಯಾವುದೇ ಕೃತಕ ಬಣ್ಣಗಳನ್ನ ಹಚ್ಚಿರಬಾರದು,ಆರೋಗ್ಯವಾಗಿ ಕೂದಲನ್ನ ಕಾಪಾಡಿರಬೇಕು,ಜಡೆ ಹಣೆದ ರೂಪದಲ್ಲೇ ಕಟ್ ಮಾಡಿಸಬೇಕು,ನಂತರ ಇಂಡಿಯಾ ಕ್ಯಾನ್ಸರ್ ಸೊಸೈಟಿ ಸಂಸ್ಥೆಯ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಹಾಕಬೇಕು,ನಂತರ ಅವರು ನೀಡುವ ಫಾರಂ ನಲ್ಲಿ ತಮ್ಮ ವಿವರವನ್ನ ನೀಡಬೇಕು ಇಷ್ಟೆಲ್ಲಾ ನಿಯಮಗಳನ್ನ ಪಾಲಿಸಿದ ನಯನಪ್ರಿಯ ಕ್ಯಾನ್ಸರ್ ರೋಗಿಗಳ ನೆರವಿಗೆ ಧಾವಿಸಿದ್ದಾರೆ.

ತಂದೆಯಂತೆಯೇ ಮಗಳು ಎಂಬ ಹೆಗ್ಗಳಿಕೆಗೆ ನಯನಪ್ರಿಯ ಭಾಜನರಾಗಿದ್ದಾರೆ.ದಂತಚೋರ ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿ ನೀಡಿದ ಕೊಡುಗೆಯನ್ನ ಸರ್ಕಾರ ಗುರುತಿಸಿ ಗೌರವಕ್ಕೆ ಪಾತ್ರರಾದ ಎ.ಸಿ.ಪ್ರಭಾಕರ್ ಪುತ್ರಿ ನಯನಪ್ರಿಯಾ ಇಂಜಿನಿಯರಿಂಗ್ ಸ್ಟೂಡೆಂಟ್.ಬೆಂಗಳೂರಿನ ದಯಾನಂದಸಾಗರ್ ಕಾಲೇಜು ವಿಧ್ಯಾರ್ಥಿಯಾಗಿರುವ ನಯನಪ್ರಿಯ ಎನ್.ಜಿ.ಓ.ಸಂಸ್ಥೆಯೊಂದರ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.ಇದೀಗ ಕ್ಯಾನ್ಸರ್ ರೋಗಿಗಳ ನೆರವಿಗೆ ಬಂದ ನಯನಪ್ರಿಯ ಇತರರಿಗೂ ಮಾದರಿಯಾಗಿದ್ದಾರೆ…

Spread the love

Related post

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…
ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…

Leave a Reply

Your email address will not be published. Required fields are marked *