- July 28, 2022
ಮಾರ್ಗಸೂಚಿ ಫಲಕಗಳನ್ನ ನುಂಗಿದ ಗಿಡ ಬಳ್ಳಿಗಳು…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…
ಮಾರ್ಗಸೂಚಿ ಫಲಕಗಳನ್ನ ನುಂಗಿದ ಗಿಡ ಬಳ್ಳಿಗಳು…ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸರು…
ಮೈಸೂರು,ಜುಲೈ28,Tv10 ಕನ್ನಡ
ವಾಹನ ಸಂಚಾರರ ಅನುಕೂಲಕ್ಕಾಗಿ ರಸ್ತೆಗಳಲ್ಲಿ ಮಾರ್ಗಸೂಚಿ ಫಲಕಗಳನ್ನ ಅಳವಡಿಸಲಾಗಿದೆ.ಫಲಕಗಳಲ್ಲಿರುವ ಸಂದೇಶ ಪಾಲಿಸುವುದು ಇದರ ಉದ್ದೇಶ.ಆದ್ರೆ ಮೈಸೂರಿನ ಕೆ.ಆರ್.ಎಸ್.ರಸ್ತೆ ಗೋಕುಲಂ ಬಡಾವಣೆ ಮುಖ್ಯಧ್ವಾರ ಇಎಸ್ ಐ ಆಸ್ಪತ್ರೆ ಬಳಿ ಅಳವಡಿಸಲಾದ ಈ ಮಾರ್ಗಸೂಚಿ ಫಲಕವನ್ನ ಗಿಡಬಳ್ಳಿಗಳು ನುಂಗಿ ಹಾಕಿದೆ.ಇದರಲ್ಲಿ ಯಾವ ಸಂಚಾರಿ ನಿಯಮ ಪಾಲಿಸಬೇಕೆಂಬ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿಲ್ಲ.ಬಳ್ಳಿಗಳು ಫಲಕವನ್ನ ಸುತ್ತುವರಿದು ಆವರಿಸಿದ್ದರೂ ವಿ.ವಿ.ಪುರಂ ಸಂಚಾರಿ ಪೊಲೀಸರ ಕಣ್ಣಿಗೆ ಕಂಡು ಬಂದಿಲ್ಲ.ರಸ್ತೆಗಳ ಕಾರ್ನರ್ ಗಳಲ್ಲಿ,ಸಿಗ್ನಲ್ ಲೈಟ್ ಗ ಬಳಿ ಅವಿತುಕೊಂಡು ಹೆಲ್ಮೆಟ್ ಧರಿಸದ ವಾಹನ ಸಂಚಾರರನ್ನ ಥಟ್ ಎಂದು ಹಿಡಿದು ದಂಡ ಹಾಕುವ ಪೊಲೀಸರಿಗೆ ಈ ಫಲಕದ ಸ್ಥಿತಿ ಕಂಡುಬಂದಿಲ್ಲವೇ…?