ಶಿವಮೊಗ್ಗ ಆಯ್ತು…ಕರಾವಳಿ ಆಯ್ತು ಮುಂದೆ ಎಲ್ಲಿ…?ಪ್ರವೀಣ್ ಹತ್ಯೆ ಹಿನ್ನಲೆ ಹೆಚ್ಡಿಕೆ ರಿಯಾಕ್ಷನ್…

ಶಿವಮೊಗ್ಗ ಆಯ್ತು…ಕರಾವಳಿ ಆಯ್ತು ಮುಂದೆ ಎಲ್ಲಿ…?ಪ್ರವೀಣ್ ಹತ್ಯೆ ಹಿನ್ನಲೆ ಹೆಚ್ಡಿಕೆ ರಿಯಾಕ್ಷನ್…

ಮೈಸೂರು,ಜುಲೈ28,Tv10 ಕನ್ನಡ
ಮಂಗಳೂರು ಪ್ರವೀಣ್ ಹತ್ಯೆ ವಿಚಾರಕ್ಕೆ ಸಂಭಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.ಇದು ಮತಫಸಲಿನ ರಾಜಕಾರಣ ಇಂತಹ ಘಟನೆ ಅವರಿಗೆ ಒಳ್ಳೆ ರಾಜಕೀಯದ ಬೆಳೆ.
ಅಧಿಕಾರಕ್ಕಾಗಿ ಜನರಲ್ಲಿ ವಿಶ್ವಾಸದ ಕೊರತೆ ಮೂಡಿಸುತ್ತಿದ್ದಾರೆ.
ಎಲ್ಲಾ ಸಮಾಜದ ಧಾರ್ಮಿಕ ಸಭೆಗೆ ಸಲಹೆ ನೀಡಿದ್ದೆ ಆದರೆ ಸರ್ಕಾರ ಮೌನಕ್ಕೆ ಶರಣಾಗಿತ್ತು.
ಶಾಂತಿ ನೆಲೆಸಲು ಗಮನ ಕೊಡಿ ಅಂತಾ ಹಿಂದೆಯೇ ಹೇಳಿದ್ದೆ.
ನನ್ನ ಮಾತನ್ನು ಇವರು ಕೇಳಲಿಲ್ಲ.
ವಾರದಲ್ಲಿ ಒಂದೇ ಭಾಗದಲ್ಲಿ ಕೋಮು ಸಂಘರ್ಷದ ಎರಡು ಹತ್ಯೆಯಾಗಿದೆ.
ಆ ಕುಟುಂಬದ ಪರಿಸ್ಥಿತಿಯನ್ನು ನೋಡಬೇಕು
ವಯಸ್ಸಾದ ತಂದೆ ತಾಯಿ ಆರೋಗ್ಯ ಸರಿಯಿಲ್ಲ ಚಿಕ್ಕ ವಯಸ್ಸಿನ ಪತ್ನಿ
ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಭಜರಂಗದ ದಳ ಅಲ್ಲ
ಎಲ್ಲರೂ ಕ್ಷೇಮವಾಗಿ ನೆಮ್ಮದಿಯಾಗಿರಬೇಕು.
ಘಟನೆಯಿಂದ ಮನಸು ಕಲಕಿದೆ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ
ಇದರ ಬದಲು ಆ ರೋಧನೆಯನ್ನು ನಿಲ್ಲಿಸಿ ಎಲ್ಲಿಯವರೆಗೂ ಇಂತಹ ವಾತಾವರಣ ?.
ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೊಲೆಯಾಗಿದೆ ?
ಶಿವಮೊಗ್ಗ ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಎಲ್ಲಾ ಸವಲತ್ತು ನೀಡಲಾಗಿದೆ
ಇದೇ ನಿಮ್ಮ ಆಡಳಿತನಾ ?
ಏನು ಒಳ್ಳೆ ಆಡಳಿತ ಏನು ಸಾಧನೆ.
ಯಾವ ಪುರುಷಾರ್ಥಕ್ಕೆ ಸಮಾವೇಶಕ್ಕೆ ಸಿದ್ದತೆ ಮಾಡಿದ್ರಿ ?.
ಇದು ಸಾವಿನ ಸಾಧನಾ ಸಮಾವೇಶನಾ ?.
ಎಷ್ಟು ಜನ ಅಮಾಯಕರು ಸಾಯಬೇಕು ?.
ಕರಾವಳಿ ಆಯ್ತು ಶಿವಮೊಗ್ಗ ಆಯ್ತು. ಮುಂದೆ ಎಲ್ಲಿ ?
ಇದೇನಾ ನೀವು ಹಿಂದೂ ಧರ್ಮ ಕಾಪಾಡುವುದು ?.
ಹಿಂದುತ್ವದ ಕಾರ್ಡ್‌ನಲ್ಲಿ ಮತ ಪಡೆಯಬಹುದೆಂಬ ಲೆಕ್ಕಾಚಾರ
ಸಾವುಗಳಾದರೆ ಅಧಿಕಾರ ಹಿಡಿಯಬಹುದು ಅನ್ನೋದು ಅವರ ಲೆಕ್ಕಾಚಾರ.
ಇವರದ್ದು ಕೃತಕ ಸಾಂತ್ವನ ಆಕ್ರೋಶದ ಮಾತುಗಳಾಡಿದರೆ ಏನು ಬದಲಾವಣೆ ಆಗಲ್ಲ.
ನಾನು ಸಿಎಂ ಆಗಿದ್ದೆ ನನ್ನ ಕಾಲದಲ್ಲಿ ಏಕೆ ಈ ರೀತಿ ಆಗಲಿಲ್ಲ ?
ಸಂಸದ ತೇಜಸ್ವಿ ಸೂರ್ಯ
ಇಂತವರನ್ನು ಗೆಲ್ಲಿಸಿದ ಮೇಲೆ ಅಂತಹ ಮಾತುಗಳನ್ನು ಕೇಳಲೇಬೇಕು.
ನಿಮ್ಮನ್ನು ಯಾರು ಗನ್ ಮ್ಯಾನ್ ಕೊಡಿ ಅಂತಾ ಕೇಳಲ್ಲ.
ಶಾಂತಿಯುತವಾದ ನೆಮ್ಮದಿಯ ಆಡಳಿತ ಕೊಡಿ ಅಂತಾ ಕೇಳುತ್ತಾರೆ ಅಷ್ಟೇ.
ಚುನಾವಣೆ ವೇಳೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ
ಬಿಜೆಪಿ. ಅಧಿಕಾರದಲ್ಲಿರುವ ರಾಜ್ಯಗಳೇ ಇದಕ್ಕೆ ಉದಾಹರಣೆ.
ಹಿಂದೆ ಚುನಾವಣೆ ಬಂದಾಗ ದೇಶದ ಎಲ್ಲಾ ಭಾಗದಲ್ಲೂ ಈ ರೀತಿ ಆಗಿದೆ.
2016ರ ಯುಪಿ ಚುನಾವಣೆ ಉದಾಹರಣೆ ನೀಡಿದ ಹೆಚ್ ಡಿ ಕೆ ಮುಜಾಫರ್ ನಗರದಲ್ಲಿ ಕೋಮು ಗಲಭೆ ಆಯ್ತು.
ಇಂದಿಗೂ ಅದರ ಹಿಂದೆ ಇದ್ದವರು ಯಾರು ? ಏಕೆ ಆಯ್ತು ? ಗೊತ್ತಾಗಿಲ್ಲ .
ಬಿಜೆಪಿಯ ಬಣ್ಣ ಬಣ್ಣದ ಜಾಹಿರಾತು ನೋಡಿ ಮುಂದುವರಿದರೆ ಮತ್ತಷ್ಟು ಕೆಟ್ಟ ಕಾಲ ಬರಲಿದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ?ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆಯೇ ಇಲ್ಲ.ಇವರಿಗೆ ಧರ್ಮದ ಹೆಸರಿನ ಸಾವುಗಳಾದರೆ ಹಿಂದೂ ಧರ್ಮದ ಬದ್ದತೆಯಿರುವ ಕಳಕಳಿಯಿರುವ ಕುಟುಂಬದಲ್ಲಿ ಹತ್ಯೆಯಾದರೆ ಫಸಲು.
ಇವರಿಗೆ ಬದುಕು ಕಟ್ಟುವುದು ಬೇಡ ಇಂತಹ ಘಟನೆಯ ಮೇಲೆ ಸೌಧ ಕಟ್ಟಬೇಕು.
ರಾಜ್ಯದಿಂದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು.
ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದು
ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ..

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *