ನಗರಪಾಲಿಕೆ ಸದಸ್ಯನ ಮಾನವೀಯತೆ…ಚಿಕಿತ್ಸೆಯ ನೆರವಿಗೆ ಬಂದ ಲೋಕೇಶ್ ಪಿಯಾ...
- TV10 Kannada Exclusive
- July 30, 2022
- No Comment
- 224
ನಗರಪಾಲಿಕೆ ಸದಸ್ಯನ ಮಾನವೀಯತೆ…ಚಿಕಿತ್ಸೆಯ ನೆರವಿಗೆ ಬಂದ ಲೋಕೇಶ್ ಪಿಯಾ...
ಮೈಸೂರು,ಜುಲೈ30,Tv10 ಕನ್ನಡ
ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಯುವಕ ಚಿಕಿತ್ಸೆಗಾಗಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೆರವಾಗಿದ್ದಾರೆ. ಲೋಕೇಶ್ ಪಿಯಾ ಹಾಗೂ ಸ್ನೇಹಿತರು ದೇಣಿಗೆ ರೂಪದಲ್ಲಿ1 ಲಕ್ಷ ರೂ.ನೆರವು ನೀಡಿದ್ದಾರೆ.
ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ಹಕ್ಕೂರು ಗ್ರಾಮದ 23 ರ ವಯಸ್ಸಿನ ಸಿದ್ದರಾಜು ಎಂಬಾತ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಯುವಕನಿಗೆ ಕಾಯಿಲೆ ಇರುವ ಬಗ್ಗೆ ವೈದ್ಯರು ತಿಳಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಹಣ ನೀಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಯುವಕರೆಲ್ಲರೂ ಸೇರಿ ಯುವಕನ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ಮಾಹಿತಿ ಅರಿತ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ, ತಮ್ಮ ಗೆಳೆಯರು ಹಾಗೂ ಸಾರ್ವಜನಿಕರ ಮೂಲಕ 1 ಲಕ್ಷ ರೂ.ಗಳನ್ನು ಸಂಗ್ರಹಿಸಿ ನೀಡಿ ಮಾನವೀಯತೆ ಮೆರೆದಿದ್ದಾರೆ…