- August 2, 2022
ರುಧ್ರಭೂಮಿಯ ಕಲ್ಯಾಣಿಗೆ ಕಾಯಕಲ್ಪ…ಮತ್ತೆ ಎದ್ದುನಿಂತ ಶಿವನ ವಿಗ್ರಹ…

ರುಧ್ರಭೂಮಿಯ ಕಲ್ಯಾಣಿಗೆ ಕಾಯಕಲ್ಪ…ಮತ್ತೆ ಎದ್ದುನಿಂತ ಶಿವನ ವಿಗ್ರಹ…

ಮೈಸೂರು,ಆಗಸ್ಟ್2,Tv10 ಕನ್ನಡ
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿನ ಹೂಳುವ ಸ್ಮಶಾನದಲ್ಲಿರುವ ಕಲ್ಯಾಣಿಗೆ ಕಾಯಕಲ್ಪ ದೊರೆತಿದೆ.ಇತ್ತೀಚೆಗಷ್ಟೆ ಕುಸಿದು ಬಿದ್ದ ಬಿದ್ದಿದ್ದ ಗೋಪುರದ ಮೇಲಿನ ವಿಗ್ರಹ ಮತ್ತೆ ಎದ್ದು ನಿಂತಿದೆ.ಯುವಬ್ರಿಗೇಡ್ ಯುವಕರ ಹಿತಾಸಕ್ತಿಯಿಂದ ಸೊರಗಿದ್ದ ಕಲ್ಯಾಣಿಗೆ ಮರು ಜೀವ ಬಂದಿದೆ
ಕೆಲವು ದಿನಗಳ ಹಿಂದೆ ಶಿವನ ವಿಗ್ರಹ ಹೊತ್ತಿದ್ದ ಕಲ್ಯಾಣಿ ಮಧ್ಯೆಯಲ್ಲಿದ್ದ ಗೋಪರ ಕುಸಿದುಬಿದ್ದಿತ್ತು.ಕಲ್ಯಾಣಿ ಸ್ವಚ್ಛತೆಗಾಗಿ ಬಂಧಿದ್ದ ಯುವಕರು ಅದೃಷ್ಟವಶಾತ್ ಪಾರಾಗಿದ್ದರು.ಗೋಪುರದ ಮೇಲಿನ ಭಾಗದಲ್ಲಿದ್ದ ಶಿವನ ವಿಗ್ರಹ ಹಾನಿಯಾಗಿತ್ತು.ಹಲವು ದಿನಗಳ ಕಾಲ ಶಿವನ ವಿಗ್ರಹ ಅನಾಥವಾಗಿತ್ತು.ಯುವಬ್ರಿಗೇಡ್ ಯುವಕರು ತೋರಿದ ಆಸಕ್ತಿಯಿಂದಾಗಿ ಕಲ್ಯಾಣಿಗೆ ಮರುಜೀವ ಬಂದಿದೆ.ಜೊತೆಗೆ ಶಿವನ ವಿಗ್ರಹವೂ ತಲೆ ಎತ್ತಿ ನಿಂತಿದೆ.ಕಲ್ಯಾಣಿಯನ್ನ ಸ್ವಚ್ಛಗೊಳಿಸಲಾಗಿದೆ.ಕಲ್ಯಾಣಿಯಲ್ಲಿ ನೀರು ಸಹ ತುಂಬಿದೆ.ಕಲ್ಯಾಣಿಯ ಒಂದು ಭಾಗದಲ್ಲಿ ಗೋಪುರವನ್ನ ನಿರ್ಮಿಸಿ ಶಿವನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ.ನಿತ್ಯ ಪೂಜೆ ಸಹ ನಡೆಯುತ್ತಿದೆ.ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದ್ದ ಕೆಲವು ದಶಕಗಳ ಕಲ್ಯಾಣಿ ಇದೀಗ ಸುಸ್ಥಿತಿಗೆ ಬಂದಿದೆ…


