ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಂಪುರ ಕಪಿಲಾ ನದಿ ಸೇತುವೆ…ಅಧಿಕಾರಿಗಳು,ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರ ಆಕ್ರೋಷ…
- TV10 Kannada Exclusive
- August 9, 2022
- No Comment
- 109
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಂಪುರ ಕಪಿಲಾ ನದಿ ಸೇತುವೆ…ಅಧಿಕಾರಿಗಳು,ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರ ಆಕ್ರೋಷ…
ನಂಜನಗೂಡು,ಆಗಸ್ಟ್9,Tv10 ಕನ್ನಡ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಂಜನಗೂಡು ತಾಲೂಕು ಹುಲ್ಲಹಳ್ಳಿ ಬಳಿಯ ರಾಂಪುರ ಕಪಿಲಾ ನದಿ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಳೆದ 2 ವರ್ಷಗಳು ಪ್ರವಾಹದ ರಭಸಕ್ಕೆ ಸಿಲುಕಿದ ಸೇತುವೆ ಶಿಥಿಲಗೊಂಡಿದೆ.ಕೆಲವೆಡೆ ಬಿರುಕು ಬಿಟ್ಟಿದೆ. ಸೇತುವೆ ಮೇಲಿನ ರಸ್ತೆ ಹಳ್ಳಕೊಳ್ಳಗಳಿಂದ ತುಂಬಿದ್ದು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.ಭಾರಿ ವಾಹನಗಳು ಸಂಚರಿಸಿದರೆ ಸೇತುವೆ ಅಲುಗಾಡುತ್ತಿದೆ ಎಂದು ಆರೋಪಿಸುವ ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಸುಮಾರು 300 ಅಡಿ ಉದ್ದದ ಸೇತುವೆ ದುಃಸ್ಥಿತಿ ತಲುಪಿದೆ. ದಿನನಿತ್ಯ ನೂರಾರು ವಾಹನಗಳು ಮತ್ತು ಸಾರ್ವಜನಿಕರು ಜೀವಭಯದಲ್ಲೇ ಸಾಗುತ್ತಿದ್ದಾರೆ. ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕಾಶಿ ನೇತೃತ್ವದಲ್ಲಿ ಸೇತುವೆ ಮೇಲೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗಮನಕ್ಕೆ ತಂದರೂ ಸೇತುವೆಗೆ ಕಾಯಕಲ್ಪ ದೊರೆತಿಲ್ಲ.ಇನ್ನಾದ್ರೂ ಸಂಭಂಧಪಟ್ಟ ಅಧಿಕಾರಿಗಳು ಶಿಥಿಲಗೊಂಡ ಸೇತುವೆಯನ್ನ ಸುಸ್ಥಿತಿಗೆ ತರುವಂತೆ ಒತ್ತಾಯಿಸಿದ್ದಾರೆ…