ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಅಪ್ರಾಪ್ತ ಮಗನೇ ಹಂತಕ…

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ…ಅಪ್ರಾಪ್ತ ಮಗನೇ ಹಂತಕ…

ಮೈಸೂರು,ಆಗಸ್ಟ್9,Tv10 ಕನ್ನಡ
ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ ಟ್ವಿಸ್ಟ್ ದೊರೆತಿದೆ.ಸ್ವಂತ ಮಗನೇ ಹಂತಕನಾಗಿರುವ ಶಾಕಿಂಗ್ ನ್ಯೂಸ್ ಬೆಳಕಿಗೆ ಬಂದಿದೆ.16 ವರ್ಷದ ಅಪ್ರಾಪ್ತ ತಂದೆಯನ್ನ ಕೊಂದು ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದಾನೆ.ಸಧ್ಯ ಪೊಲೀಸರು ನಡೆಸಿದ ತೀವ್ರ ವಿಚಾರಣೆಯಲ್ಲಿ ಅಪ್ರಾಪ್ತ ಪುತ್ರನೇ ಹಂತಕ ಎಂಬ ವಿಚಾರ ಬೆಳಕಿಗೆ ಬಂದಿದೆ.

ನಿನ್ನೆ ಸೋಮವಾರ ಹಾಡುಹಗಲೇ ಮನೆಯಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸಂಪತ್ ಕುಮಾರ್(63)ಭೀಕರವಾಗಿ ಕೊಲೆಯಾಗಿದ್ದರು.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ ವೇಳೆ ಅಪ್ರಾಪ್ತ ಮಗ ಆಗುಂತಕ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ರಾಡ್ ನಿಂದ ಹಲ್ಲೆ ಮಾಡಿ ಕೊಂದು ಪರಾರಿಯಾದನೆಂದು ಹೇಳಿಕೆ ನೀಡಿದ್ದ.ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ವಿವಿ ಪುರಂ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.ಪೊಲೀಸ್ ಕಮೀಷನ್ ಡಾ.ಚಂದ್ರಗುಪ್ತ,ಡಿಸಿಪಿ ಪ್ರವೀಣ್ ಗುಂಟಿ ಹಾಗೂ ಗೀತಾ ಪ್ರಸನ್ನ ರವರು ಸ್ಥಳಕ್ಕೆ ಭೇಟಿ ನೀಡಿ ಪುತ್ರನನ್ನ ಸಾಕಷ್ಟು ಪ್ರಶ್ನೆ ಮಾಡಿದ್ದರು.ಪುತ್ರನಿಂದ ಪೊಲೀಸರಿಗೆ ಸಮಂಜಸವಾದ ಉತ್ತರ ಬಂದಿರಲಿಲ್ಲ.ಹಾಕಿದ ಪ್ರಶ್ನೆಗಳಿಗೆ ಗೊಂದಲ ಮೂಡುವಂತೆ ಉತ್ತರ ನೀಡುತ್ತಿದ್ದ.ಮಗನ ವರ್ತನೆ ಹಾಗೂ ಉತ್ತರಗಳು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪತ್ನಿ ಗೀತಾ ಶಾಲೆಯಿಂದ ಹಿಂದಿರುಗಿ ಬಂದು ನೀಡಿದ ಮಾಹಿತಿಯೂ ಮಗನ ವಿರುದ್ದ ಅನುಮಾನದ ಹುತ್ತ ಮೂಡಿತು.ಪುತ್ರನನ್ನ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ ವಿವಿ ಪುರಂ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ನಿಗೂಢ ಕೊಲೆ ರಹಸ್ಯ ಬಯಲಿಗೆ ಎಳೆದಿದ್ದಾರೆ.

ಮೃತ ಸಂಪತ್ ಕುಮಾರ್ ಹಾಗೂ ಪುತ್ರನ ನಡುವೆ ಅನ್ಯೋನ್ಯತೆ ಇರಲಿಲ್ಲ ಎಂದು ಹೇಳಲಾಗಿದೆ.ಈ ಹಿನ್ನಲೆ ತಾನೇ ಅಪ್ಪನನ್ನ ಕೊಂದು ಆಗುಂತಕ ವ್ಯಕ್ತಿಗಳ ಮೇಲೆ ಆರೋಪ ಹೊತೆಸಿ ನುಣುಚಿಕೊಳ್ಳುವ ಯತ್ನ ಮಾಡಿ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾನೆ…

Spread the love

Related post

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…
ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ… ಮೈಸೂರು,ಸೆ15,Tv10 ಕನ್ನಡ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು…

Leave a Reply

Your email address will not be published. Required fields are marked *