- August 20, 2022
ಎನ್.ಆರ್.ಠಾಣೆ ಪೊಲೀಸರ ಕಾರ್ಯಾಚರಣೆ…ಮೂವರು ಜನರೇಟರ್ ಕಳ್ಳರ ಬಂಧನ…

ಎನ್.ಆರ್.ಠಾಣೆ ಪೊಲೀಸರ ಕಾರ್ಯಾಚರಣೆ…ಮೂವರು ಜನರೇಟರ್ ಕಳ್ಳರ ಬಂಧನ…
ಮೈಸೂರು,ಆಗಸ್ಟ್20,Tv10 ಕನ್ನಡ
ಬ್ಯಾಂಕ್ ಗಳಿಗೆ ಅಳವಡಿಸಲಾಗಿದ್ದ ಜನರೇಟರ್ ಗಳನ್ನ ಕಳುವು ಮಾಡುತ್ತಿದ್ದ ಮೂವರು ಖದೀಮರು ಮೈಸೂರಿನ ಎನ್.ಆರ್.ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.ಬಂಧಿತರಿಂದ 3.66 ಲಕ್ಷ ಮೌಲ್ಯದ ಮೂರು ಜನರೇಟರ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಎನ್.ಆರ್.ಠಾಣೆ,ಮೇಟಗಳ್ಳಿ ಪೊಲೀಸ್ ಠಾಣೆ ಹಾಗೂ ಮಳವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ ಪ್ರಕರಣ ಪತ್ತೆಯಾಗಿದೆ.ಕರ್ನಾಟಕ ಬ್ಯಾಂಕ್ ಗೆ ಸೇರಿದ ಜನರೇಟರ್ ಗಳನ್ನ ವಶಕ್ಕೆ ಪಡೆದಿದ್ದಾರೆ.ಡಿಸಿಪಿ ಗೀತಾ ಪ್ರಸನ್ನ ಹಾಗೂ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಎನ್.ಆರ್.ಠಾಣೆಯ ಇನ್ಸ್ಪೆಕ್ಟರ್ ಅಜರುದ್ದೀನ್ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಜೈಕೀರ್ತಿ,ಗಂಗಾಧರ್,ಎಎಸ್ಸೈ ರವಿ,ಸಿಬ್ಬಂದಿಗಳಾದ ಮಂಜುನಾಥ್,ಮಹೇಶ್,ಸುನಿಲ್ ಕುಮಾರ್,ಮಹೇಶ್,ದೊಡ್ಡೇಗೌಡ,ಈರೇಶ್,ಬಸವರಾಜು ಕಾರ್ಯಾಚರಣೆ ನಡೆಸಿದ್ದಾರೆ…