• September 16, 2022

ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…

ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…

ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…

ಮೈಸೂರು,ಸೆ16,Tv10 ಕನ್ನಡ
ದಸರಾ ಆನೆ ಲಕ್ಷ್ಮೀ ಪುತ್ರ ದತ್ತಾತ್ರೆಯನಿಗೆ ಜನ್ಮ ನೀಡಿರುವ ಹಿನ್ನೆಲೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದು ಗಜಪಡೆಗೆ ಕಬ್ಬು,ಬೆಲ್ಲ,ಬಾಳೆ ಹಣ್ಣು ನೀಡಿ ಸತ್ಕರಿಸಿದರು.ಗಜಪಡೆಗೆ ಸೇರಿದ ದತ್ತಾತ್ರೇಯನ ಆಗಮನವನ್ನ ವಿಶೇಷವಾಗಿ ಆಚರಿಸಿ ಶುಭಹಾರೈಸಿದರು.ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದ ಲಕ್ಷ್ಮಿ ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದೆ.ರಾಜವಂಶಸ್ಥರು ಲಕ್ಷ್ಮಿ ಪುತ್ರನಿಗೆ ದತ್ತಾತ್ರೇಯ ಎಂದು ನಾಮಕರಣ ಮಾಡಿದ್ದಾರೆ.ಗಜಪಡೆಗೆ ಹಿಸದಾರಿ ಸೇರ್ಪಡೆಯಾದ ದತ್ತಾತ್ರೇಯ ಗಜಪಡೆಯಲ್ಲಿ ಸ್ಟಾರ್ ಅಟ್ರಾಕ್ಷನ್ ಆಗಿದ್ದಾನೆ. ಸಾಂಸ್ಕೃತಿಕ ನಗರದ ಮೈಸೂರಿನ ಜನತೆಯ ಪರವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಕಬ್ಬು ಬೆಲ್ಲ ಬಾಳೆಹಣ್ಣುನೀಡುವ ಮೂಲಕ ಸಿಹಿ ವಿತರಣೆಯೊಂದಿಗೆ ದತ್ತಾತ್ರೇಯನ ಆಗಮನವನ್ನು ಸಡಗರದಿಂದ ಸ್ವಾಗತಿಸಿದ್ದಾರೆ.ಈ ಸಂಧರ್ಭದಲ್ಲಿ ಡಿಸಿಎಫ್ ಕರಿಕಾಳನ್,ಎಸಿಎಫ್ ಸಂತೋಷ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಭವ್ಯ,ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ,ಪ್ರತಿಧ್ವನಿ ಪ್ರಸಾದ್,ರೂಪೇಶ್,ಪುಟ್ಭಾಲ್ ಮಂಜು,ಗುಣಶೇಖರ್,ಫಾರೂಖ್,ಅರುಣ್,ಪೈಲ್ವಾನ್ ಮಹೇಶ್,ಚಿಕ್ಕಲಿಂಗು,ಉಮೇಶ್,ಲೋಕೇಶ್,ಹರೀಶ್,ಅಭಿಷೇಕ್ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು…

Spread the love

Leave a Reply

Your email address will not be published.