ಬಾಡಿ ಮಿಯಾ ಅಯೂಬ್ ಅಹ್ಮದ್ ಜಿ ಗೆ ಪದ್ಮಶ್ರೀ ಪ್ರಶಸ್ತಿಗಾಗಿ ಪ್ರಸ್ತಾವನೆ…ಪ್ರತಾಪ್ ಸಿಂಹ ಹಾಗೂ ತನ್ವೀರ್ ಸೇಠ್ ರಿಂದ ಕೇಂದ್ರಕ್ಕೆ ಪತ್ರ…

ಬಾಡಿ ಮಿಯಾ ಅಯೂಬ್ ಅಹ್ಮದ್ ಜಿ ಗೆ ಪದ್ಮಶ್ರೀ ಪ್ರಶಸ್ತಿಗಾಗಿ ಪ್ರಸ್ತಾವನೆ…ಪ್ರತಾಪ್ ಸಿಂಹ ಹಾಗೂ ತನ್ವೀರ್ ಸೇಠ್ ರಿಂದ ಕೇಂದ್ರಕ್ಕೆ ಪತ್ರ…

  • Mysore
  • September 15, 2022
  • No Comment
  • 289

ಬಾಡಿ ಮಿಯಾ ಅಯೂಬ್ ಅಹ್ಮದ್ ಜಿ ಗೆ ಪದ್ಮಶ್ರೀ ಪ್ರಶಸ್ತಿಗಾಗಿ ಪ್ರಸ್ತಾವನೆ…ಪ್ರತಾಪ್ ಸಿಂಹ ಹಾಗೂ ತನ್ವೀರ್ ಸೇಠ್ ರಿಂದ ಕೇಂದ್ರಕ್ಕೆ ಪತ್ರ…

ಮೈಸೂರು,ಸೆ15,Tv10 ಕನ್ನಡ
ಬಾಡಿಮಿಯಾ ಎಂದೇ ಹೆಸರಾದ ಸಾಮಾಜಿಕ ಕಳಕಳಿ ಹೊಂದಿರುವ ಮೈಸೂರಿನ ಎನ್.ಆರ್.ಮೊಹಲ್ಲಾ ಎ.ಜೆ.ಬ್ಲಾಕ್ ನಿವಾಸಿ ಅಯೂಬ್ ಅಹ್ಮದ್ ಜಿ ಗೆ ಪದ್ಮಶ್ರೀ ಪ್ರಶಸ್ತಿಗೆ ಪರಿಗಣಿಸುವಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ತನ್ವೀರ್ ಸೇಠ್ ಕೇಂದ್ರಕ್ಕೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದಾರೆ.2023 ರ ಸಾಲಿನ ಪ್ರಶಸ್ತಿ ನೀಡುವಂತೆ ಪ್ರತಾಪ್ ಸಿಂಹ ಪ್ರಧಾನಿ ಮೋಧಿಗೆ ಪತ್ರ ಬರೆದರೆ ಶಾಸಕ ತನ್ವೀರ್ ಸೇಠ್ ಅಮಿತ್ ಶಾ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಕಳೆದ 23 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಯೂಬ್ ಅಹ್ಮದ್ ಜಿ ಈಗಾಗಲೇ ಅಮೆರಿಕಾ ದ ಹಾರ್ಮೊನಿ ಇನ್ಸ್ಟ್ಯೂಟ್ ಡಾಕ್ಟರೇಟ್ ನೀಡಿ ಗೌರವಿಸಿದೆ.ಪಿ.ಜೆ.ಅಬ್ದುಲ್ ಕಲಾಂ ಗ್ಲೋಬಲ್ ಪೀಸ್ ಅವಾರ್ಡ್ ನ್ನೂ ಪಡೆದಿರುವ ಅಯೂಬ್ 2017 ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದಾರೆ.ಅನಾಥ ಶವಗಳಿಗೆ ಮುಕ್ತಿ ನೀಡುವ ಕಾಯಕದಲ್ಲಿ ಗುರುತಿಸಿಕೊಂಡಿರುವ ಅಯೂಬ್ ಅಹ್ಮದ್ ಜಿ ಗೆ ಬಾಡಿಮಿಯಾ ಎಂದೇ ಕರೆಯಲಾಗುತ್ತದೆ.ಈಗಾಗಲೇ 16 ಸಾವಿರ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿ ಸಾಮಾಜಿಕ ಕಳಕಳಿಗೆ ಮಾದರಿಯಾಗಿದ್ದಾರೆ.ಕೋವಿಡ್ ಸಂಧರ್ಭದಲ್ಲಿ ನಿರ್ಭಯವಾಗಿ ರೋಗಿಗಳನ್ನ ವಿವಿಧ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.ಕೋವಿಡ್ ಸಮಯದಲ್ಲಿ ಸಾಕಷ್ಟು ಮಂದಿಗೆ ಆಹಾರದ ಕಿಟ್ ಗಳನ್ನೂ ವಿತರಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿರು ಬಾಡಿಮಿಯಾ ಸಾರ್ವಜನಿಕರು,ಪೊಲೀಸರು ಹಾಗೂ ವೈದ್ಯರ ಅಚ್ಚುಮೆಚ್ಚಿನ ವ್ಯಕ್ತಿ. ಈಗಾಗಲೇ ಟೈಲರಿಂಗ್ ಸಂಸ್ಥೆ ತೆರೆದು ಬಡಜನತೆಗೆ ಉಚಿತ ಹೊಲಿಗೆ ತರಬೇತಿ ನೀಡುತ್ತಿರುವ ಇಂತಹ ವಿಶೇಷ ವ್ಯಕ್ತಿಗೆ 2023 ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪರಿಗಣಿಸುವಂತೆ ಇಬ್ಬರು ನಾಯಕರು ಪತ್ರ ಬರೆದಿರುವುದು ಸಂತಸದ ವಿಚಾರವೇ.ಇವರ ಸೇವೆಯನ್ನ ಮನಗಂಡು ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಲೆಂಬುದೇ Tv10 ಕನ್ನಡ ವಾಹಿನಿಯ ಆಶಯ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *